ಆಳಂದ: ಪಟ್ಟಣದ ಶ್ರೀ ರಾಜಶೇಖರ ಮಹಾಸ್ವಾಮಿಗಳ ಬಿಎಡ್ ಕಾಲೇಜಿನ ಸಮಾರಂಭವನ್ನು ನಿವೃತ್ತ ಸಹ ನಿರ್ದೇಶಕ ವಿಜಯಕುಮಾರ ಜೆ.ಎಂ ಉದ್ಘಾಟಿಸಿದರು, ನಂದಗಾಂವ ಶ್ರೀ, ಮಾಜಿ ಶಾಸಕ ಸುಭಾಷ ಗುತ್ತೇದಾರ, ರಮೇಶ ಬಲ್ಲಿದ್ ಇತರರು ಇದ್ದರು.
ಆಳಂದ: ಪಟ್ಟಣದ ಪೂಜ್ಯ ಶ್ರೀ ರಾಜಶೇಖರ ಮಹಾಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದ ಬಿ.ಎಡ್. ಕಾಲೇಜಿನಲ್ಲಿ 2025–26ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ 2024–25ನೇ ಸಾಲಿನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಪ್ರತಿಭಾ ಪ್ರದರ್ಶನ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡ ಹೊರ್ತಿ ಸರ್ವೋದಯ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸಾಧಕ ರಮೇಶ್ ಬಲ್ಲಿದ ಅವರು, ತಮ್ಮ ಜೀವನದ ಹೃದಯಸ್ಪರ್ಶಿ ಅನುಭವಗಳನ್ನು ಹಂಚಿಕೊಂಡು, ಶಿಕ್ಷಕರ ವೃತ್ತಿಯ ಮಹತ್ವ ಮತ್ತು ಹೊಣೆಗಾರಿಕೆ ಕುರಿತು ಆಳವಾದ ಚಿಂತನೆಗಳನ್ನು ವ್ಯಕ್ತಪಡಿಸಿದರು.
ನನ್ನ ಬಾಲ್ಯ ದನಗಾಯಿಯಲ್ಲೇ ಕಳೆದರು ಮುಂದೆ 16ನೇ ವಯಸ್ಸಿನಲ್ಲಿ ಶಿಕ್ಷಣ ಆರಂಭಿಸಿ ಸಾಧನೆ ಮಾಡಲು ಪ್ರೇರಣೆಯಾದವರು ನನ್ನ ತಮ್ಮ ಹುನುಮಂತ. ಅವರ ಅಕಾಲಿಕ ಅಗಲಿಕೆ ನನ್ನ ಜೀವನದಲ್ಲಿ ಆಳವಾದ ನೋವು ಬೀರಿದರೂ, ಅದೇ ನನ್ನನ್ನು ಮುಂದೆ ಸಾಗಲು ಶಕ್ತಿಯನ್ನಿತ್ತಿತು. ಶಿಕ್ಷಕರಾದವರು ಕೇವಲ ಪಾಠ ಬೋಧಕರಾಗದೆ, ವಿದ್ಯಾರ್ಥಿಗಳ ಬದುಕಿಗೆ ದಿಕ್ಕು ತೋರಿಸುವ ಮಾರ್ಗದರ್ಶಕರಾಗಬೇಕು. ಬಿ.ಎಡ್. ಪದವಿ ದಾರಿ ತೋರಿಸುವ ಸಾಧನ ಮಾತ್ರ; ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮೌಲ್ಯಯುತ ನಾಗರಿಕರನ್ನು ರೂಪಿಸುವ ಹೊಣೆ ನಿಮ್ಮ ಮೇಲಿದೆ,” ಎಂದು ಹೇಳಿದರು.
ಶಿಕ್ಷಕರು ಯಾರು ಮಾಡದ ಸಾಧನೆಯನ್ನು ಮಾಡಲು ಮುಂದಾಗಬೇಕು. ಸಾಧಕರು ಅಗಲಿದಾಗ ಸಮಾಜ ತುಂಬಲಾರದ ನಷ್ಟ ಅನುಭವಿಸುತ್ತದೆ. ಆದರೆ ಒಬ್ಬ ಶ್ರೇಷ್ಠ ಶಿಕ್ಷಕನಿಗೆ ಅನೇಕ ಸಾಧಕರನ್ನು ರೂಪಿಸುವ ಶಕ್ತಿ ಇದೆ. ಇದರಿಂದ ಸಮಾಜದಲ್ಲಾಗುವ ನಷ್ಟವನ್ನು ತುಂಬಬಹುದು. ಅದಕ್ಕಾಗಿ ನಿರಂತರ ಅಧ್ಯಯನ, ತಾಳ್ಮೆ, ಸಹನೆ ಮತ್ತು ಸಾಮಥ್ರ್ಯ ವೃದ್ಧಿಯೊಂದಿಗೆ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗದ ನಿವೃತ್ತ ಸಹ ನಿರ್ದೇಶಕ ವಿಜಯಕುಮಾರ್ ಜಿ.ಎಂ. ಮಾತನಾಡಿ, “ತಾಳ್ಮೆಯೇ ವೃತ್ತಿಜೀವನದ ತಪಸ್ಸು. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮಥ್ರ್ಯವನ್ನು ಅರಿತು, ಅದಕ್ಕೆ ತಕ್ಕಂತೆ ಬೋಧಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಕರಾದವರು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು, ಅವರಲ್ಲಿರುವ ಶಕ್ತಿಯನ್ನು ಹೊರತರುವ ಪ್ರಯತ್ನ ಮಾಡಬೇಕು,” ಎಂದು ಹೇಳಿದರು.
ಕಲಬುರಗಿ ಎನ್ವಿ ಬಿಇಡ್ ಕಾಲೇಜಿನ ಪ್ರಾಚಾರ್ಯ ಡಾ.ವಿಜಯಕುಮಾರ ಕೆ. ಗೋತಗಿ ಅವರುಮಾತನಾಡಿ ಸಮಾಜಕ್ಕೆ ಶಿಕ್ಷಣದೊಂದಿಗೆ ಸಂಸ್ಥಾರ ಮೌಲ್ಯಗಳನ್ನು ಮತ್ತು ಅಧುನಿಕತೆ ಒಡ್ಡುವ ಶಿಕ್ಷಕರ ಅವಶ್ಯಕತೆಯನ್ನುಮನಗಂಡು ಸಜ್ಜಾಗಬೇಕು ಎಂದು ಹೇಳಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ನಂದಗಾವ ಮಠದ ಶ್ರೀ ರಾಜರಾಜಶೇಖರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, “ಶಿಕ್ಷಣವೇ ಸಮಾಜದ ಬೆಳಕು. ಗುಣಮಟ್ಟದ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ವಿದ್ಯಾರ್ಥಿಗಳು ಶಿಸ್ತು, ಶ್ರದ್ಧೆ ಮತ್ತು ಪರಿಶ್ರಮವನ್ನು ಜೀವನದ ಮೂಲಮಂತ್ರಗಳಾಗಿ ಅಳವಡಿಸಿಕೊಳ್ಳಬೇಕು,” ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, “ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣವೇ ನಮ್ಮ ಸಂಸ್ಥೆಯ ಮೂಲ ಉದ್ದೇಶ. ಇಲ್ಲಿ ಲಭ್ಯವಿರುವ ಪ್ರತಿಭಾವಂತ ಬೋಧಕರು ಮತ್ತು ಗುಣಮಟ್ಟದ ಶಿಕ್ಷಣದ ಸದುಪಯೋಗ ಪಡೆದು ವಿದ್ಯಾರ್ಥಿಗಳು ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು,” ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಹಣಮಂತ ಶೇರಿ ಮಾತನಾಡಿ, “ಗುಣಮಟ್ಟದ ಶಿಕ್ಷಣದ ಫಲವಾಗಿ ಅನೇಕ ವಿದ್ಯಾರ್ಥಿಗಳು ಉತ್ತಮ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಇಂತಹ ಉತ್ತಮ ಶಿಕ್ಷಣ ಸಂಸ್ಥೆಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರುಗಳಾದ ಕಲ್ಯಾಣಿ ಸಾವಳಗಿ, ಅಪ್ಪಾಸಾಬ ಬಿರಾದಾರ, ಜ್ಯೋತಿ ವಿಶಾಖಾ, ಪ್ರತಿಭಾ ಪ್ರದರ್ಶನ ಕಾರ್ಯಕ್ರಮಗಳು ನಡೆದವು.
ಬಿಎಡ್ ಕಾಲೇಜು ಪ್ರಾಚಾರ್ಯ ಅಶೋಕ ಆರ್. ರೆಡ್ಡಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿ ಸಂದೀಪ ಬಿಕ್ಕಮಳ್ಳಿ ಮತ್ತು ನೇತ್ರಾ ಎಸ್. ಪಾಟೀಲ ನಿರೂಪಿಸಿದರು. ಅಭಿಜೀತ್ ಜಮಾದಾರ ವಂದಿಸಿದರು.
Comments are closed.