Shubhashaya News

ಪ್ರಯಾಣಿಕರಿಗೆ ಧೂಳು, ದಟ್ಟಣೆ ಸುರಕ್ಷತೆಗೆ ಆತಂಕ: ಪ್ರಯಾಣಿಕರ ಆಕ್ರೋಶ

ಆಳಂದ ಬಸ್ ನಿಲ್ದಾಣ ಪುನರನಿರ್ಮಾಣ ಸ್ಥಳದಲ್ಲೇ  

ಆಳಂದ: ಪಟ್ಟಣದ ಬಸ್ ನಿಲ್ದಾಣ ಪುನರ ನಿರ್ಮಾಣ ಕೈಗೆತ್ತಿಕೊಂಡು ಹಳೆಯ ಕಟ್ಟಡ ತೆರವು ಕಾರ್ಯಾಚರಣೆ ಸ್ಥಳದಲ್ಲೇ ಬಸ್ ನಿಲ್ಲುಗಡೆಯಿಂದ ಪ್ರಯಾಣಿಕ ಸುರಕ್ಷತೆಗೆ ಆತಂಕ ಎದುರಾಗಿದೆ.

 

ಆಳಂದ: ನಿಲ್ದಾಣ ಕಾಮಗಾರಿಯಿಂದಾಗಿ ಪರ್ಯಾಯ ವ್ಯವಸ್ಥೆಯಿಲ್ಲದಕ್ಕೆ ಆವಣದೊಳಗಿನ ಗಬ್ಬು ವಾಸನೆಯ ಚರಂಡಿ ನೀರಿನಲ್ಲೇ ಬಸ್‍ನಿಂತಾಗ ಪ್ರಯಾಣಿಕರು ವಿಧಿಯಿಲ್ಲದೆ ಗಬ್ಬುವಾಸನೆ ಕೊಳಚೆ ನೀರಿನಲ್ಲಿ ಬಸ್ ಹತ್ತುವುದು ಇಳಿಯುವುದು ಬೇಸೋತ್ತಿದ್ದಾರೆ.

 

ಆಳಂದ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆ.ಕೆ.ಆರ್.ಟಿಸಿ)ದ ಆಳಂದ ಘಟಕದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಪಟ್ಟಣದ ಇದ್ದ ಸ್ಥಳದಲ್ಲೇ ನಿರ್ಮಾಣವಾಗಲಿರುವ ನೂತನ ಬಸ್ ನಿಲ್ದಾಣದ ಶಂಕುಸ್ಥಾಪನೆಗೆ ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ಸೆಪ್ಟೆಂಬರ್ 6, 2025 ರಂದು ಚಾಲನೆ ನೀಡಿದ್ದರು.

ಆದರೆ ಉದ್ಘಾಟನೆಯಿಂದ ಎರಡು ತಿಂಗಳುಗಳು ಸಮೀಪಿಸಿದ ಕಾಮಗಾರಿ ಇನ್ನೂ ತಾತ್ಕಾಲಿಕ ಹಂತದಲ್ಲೇ ಸೀಮಿತವಾಗಿದ್ದು, ಬಸ್‍ಗಳ ನಿಲ್ಲುಗಡೆಗೆ ಪರ್ಯಾಯ ವ್ಯವಸ್ಥೆ ಇಲ್ಲದಕ್ಕೆ ಪ್ರಯಾಣಿಕರಿಗೆ ಭಾರೀ ತೊಂದರೆಯಾಗುತ್ತಿದೆ. ಕಾಮಗಾರಿ ಸ್ಥಳದಲ್ಲೇ ಬಸ್‍ಗಳ ನಿಲುಗಡೆ ಮುಂದುವರೆಯುತ್ತಿರುವುದರಿಂದ ಧೂಳು, ದಟ್ಟಣೆ, ನೆರಳಿನ ಕೊರತೆ ಮತ್ತು ಸುರಕ್ಷತಾ ಅಪಾಯಗಳು ಉಂಟಾಗಿವೆ. ನಿಲ್ದಾಣಕ್ಕೆ ಹೊಂದಿಕೊಂಡ ಎಪಿಎಂಸಿ ಖಾಲಿ ಸ್ಥಳವನ್ನು ಬಳಸದಿರುವ ನಿಗಮದ ನಿಬರ್ಂಧಗಳು ಸ್ಥಳೀಯರಲ್ಲಿ ಕೋಪವನ್ನು ಹೆಚ್ಚಿಸಿದೆ.

ನಿರ್ಮಾಣ ವಿವರಗಳು: 500 ಲಕ್ಷ ವೆಚ್ಚದ ಆಧುನಿಕ ಯೋಜನೆ, ಆದರೆ ತಾತ್ಕಾಲಿಕ ಸೌಲಭ್ಯಗಳ ಕೊರತೆ, ನೂತನ ಬಸ್ ನಿಲ್ದಾಣವು ಒಟ್ಟು 2442.33 ಚದರ ಮೀಟರ್ (ಸುಮಾರು 26,285 ಚದರ ಅಡಿ) ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿದ್ದು, ಮೊದಲನೇ ಅಂತಸ್ತು ಸಹಿತ ರೂ. 500 ಲಕ್ಷ (5 ಕೋಟಿ) ವೆಚ್ಚದಲ್ಲಿ ಪೂರ್ಣಗೊಳ್ಳಲಿದೆ. ಈ ಯೋಜನೆಗೆ ನಗರ ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್‍ಟಿ)ಯಿಂದ ರೂ. 250 ಲಕ್ಷ ಮತ್ತು ನಿಗಮದ ಬಂಡವಾಳ ವೆಚ್ಚದಿಂದ ರೂ. 250 ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ವಿನ್ಯಾಸವನ್ನು ಬೆಂಗಳೂರಿನ ಮೆಸರ್ಸ್ ಶ್ರÀಯಾಸ್ ಕನ್ಸಲ್ಟೆಂಟ್‍ಗಳು ತಯಾರಿಸಿದ್ದು, ಕಲಬುರಗಿಯ ಪ್ರಥಮ ದರ್ಜೆ ಗುತ್ತಿಗೆದಾರ ಮೀರ್ಜಾ ಬಶೀರ್ ಬೇಗ್ ಅವರಿಂದ ಕಾಮಗಾರಿ ನಡೆಸಲಾಗುತ್ತಿದೆ.

ಈ ನಿಲ್ದಾಣದಲ್ಲಿ ಒಂದೇ ಸಮಯದಲ್ಲಿ 12 ಬಸ್‍ಗಳ ನಿಲುಗಡೆ ಸೌಲಭ್ಯ, ಪ್ರಯಾಣಿಕರ ಪ್ರಾಂಗಣ, ಬೆಳಕು ವ್ಯವಸ್ಥೆ, ಉಪಹಾರ ಗೃಹ, ಪುರುಷ-ಮಹಿಳಾ ಶೌಚಾಲಯಗಳು, ಆಸನಗಳು, ವಾಣಿಜ್ಯ ಮಳಿಗೆಗಳು, ಶುದ್ಧ ಕುಡಿಯುವ ನೀರಿನ ಘಟಕ, ಮಹಿಳಾ ವಿಶ್ರಾಂತಿ ಕೊಠಡಿ ಮತ್ತು ಮಗು ಆರೈಕೆ ಕೊಠಡಿ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಒದಗಿಸುವ ಯೋಜನೆ ಹೊಂದಲಾಗಿದೆ.

ಹಳೆಯ 40 ವರ್ಷಗಳ ಬಸ್ ನಿಲ್ದಾಣವು ಕಡಿಮೆ ಸ್ಥಳದಲ್ಲಿ ಇರುವುದರಿಂದ ಮಳೆಗಾಲದಲ್ಲಿ ನೀರು ತುಂಬುವ ಸಮಸ್ಯೆಯನ್ನು ಎದುರಿಸುತ್ತಿತ್ತು. ಈ ನೂತನ ನಿಲ್ದಾಣವು ಆಳಂದದ ಸಾರಿಗೆ ಸೌಲಭ್ಯವನ್ನು ಸುಧಾರಿಸುವ ನಿರೀಕ್ಷೆಯಲ್ಲಿದ್ದರೂ, ಕಾಮಗಾರಿ ಆರಂಭವಾದ ನಂತರದ ತಾತ್ಕಾಲಿಕ ವ್ಯವಸ್ಥೆಗಳ ಕೊರತೆಯಿಂದಾಗಿ ಪ್ರಯಾಣಿಕರು ತೊಂದರೆಗೊಳಗಾಗಿದ್ದಾರೆ.

ಕಾಮಗಾರಿ ಆರಂಭದ ನಂತರದ ತೊಂದರೆಗಳು: ಧೂಳು, ದಟ್ಟಣೆ ಮತ್ತು ಸುರಕ್ಷತಾ ಆತಂಕವಾಗಿ ಮಾರ್ಪಟ್ಟಿದೆ. ಉದ್ಘಾಟನೆಯಿಂದ ಎರಡು ತಿಂಗಳುಗಳ ನಂತರ ಅಕ್ಟೋಬರ್ 2025 ರಲ್ಲಿ ಕಾಮಗಾರಿ ಆರಂಭವಾಗಿದ್ದರೂ, ನಿಲ್ದಾಣದ ಮಧ್ಯ ಭಾಗದಲ್ಲಿನ ಕಟ್ಟಡ ತೆರವು ಕಾರ್ಯ ಕೈಗೆತ್ತಿಕೊಂಡಿದ್ದರಿಂದ ಬಸ್‍ಗಳು ಕಾಮಗಾರಿ ಸ್ಥಳದಲ್ಲೇ ನಿಲ್ಸುತ್ತಿವೆ, ಇದು ಪ್ರಯಾಣಿಕರಿಗೆ ಗಂಟೆಗಟ್ಟಲೆ ತೊಂದರೆಯನ್ನುಂಟುಮಾಡುತ್ತಿದೆ. ಸ್ಥಳೀಯರ ಪ್ರಕಾರ, ಒಂದೇ ಜೆಸಿಬಿ ಮಷಿನ್‍ನ ಮೂಲಕ ಕಟ್ಟಡ ತೆರವು ಕಾರ್ಯ ನಡೆಯುತ್ತಿದ್ದು, ಮತ್ತಷ್ಟು ವಿಳಂಬವಾಗಿದೆ. ಅಲ್ಲದೆ, ಕಲ್ಲು-ಬಂಡೆಗಳು ವಾಹನದಲ್ಲಿ ತುಂಬುವಾಗ ಕಲ್ಲುಗಳು ಚದರಿಸಿ ಬಸ್ ಅಥವಾ ಪ್ರಯಾಣಿಕರ ಮೇಲೆ ಬಡಿಯುವ ಸಾಧ್ಯತೆಯಿದೆ. “ಇದು ಅಪಘಾತಕ್ಕೆ ಕಾರಣವಾಗಬಹುದು. ನಿಗಮ ಅಧಿಕಾರಿಗಳು ಇದನ್ನು ತಡೆಯಲು ಇದುವರೆಗೂ ಯಾವುದೇ ಕ್ರಮ ತೆಗೆದಿಲ್ಲ” ಎಂದು ಸ್ಥಳೀಯ ಪ್ರಯಾಣಿಕರು ಆಕ್ಷೇಪಿಸಿದ್ದಾರೆ. ಆಳಂದ ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯ ಕೇವಲ ಮಾತಾಗದೆ,

ಧೂಳು ಮತ್ತು ಗಾಳಿ ಮಾಲಿನ್ಯದಿಂದಾಗಿ ಉಸಿರಾಟದ ತೊಂದರೆ, ಕಣ್ಣು ತುರ್ತು ಮತ್ತು ಚರ್ಮ ರೋಗಗಳು ಸೃಷ್ಟಿಯಾಗುತ್ತಿವೆ, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಿಗೆ. ಬಸ್ ನಿಲುಗಡೆಗೆ ಸ್ಥಳಾವಕಾಶ ಕಡಿಮೆಯಾಗಿರುವುದರಿಂದ ವಾಹನಗಳ ದಟ್ಟಣೆಯು ರಸ್ತೆ ಸಂಚಾರವನ್ನು ತೊಡಕು ಮಾಡುತ್ತಿದ್ದು, ಕಾಮಗಾರಿ ಕಾರ್ಮಿಕರ ಓಡಾಟ ಮತ್ತು ಪ್ರಯಾಣಿಕರ ನಡುವೆ ಘರ್ಷಣೆಯ ಸಾಧ್ಯತೆ ಹೆಚ್ಚಾಗಿದೆ.

ನೆರಳಿನ ಕೊರತೆಯಿಂದ ಪ್ರಯಾಣಿಕರು ಸೂರ್ಯನ ತಾಪಕ್ಕೆ ಒಳಗಾಗಿ ಗಂಟೆಗಟ್ಟಲೆ ನಿಂತು ಅಥವಾ ನಿಲ್ಲುತ್ತಿದ್ದಾರೆ. “ಬಸ್ ಬಂದರೂ ನಿಲುಗಡೆಗೆ ಸ್ಥಳ ಇಲ್ಲ. ಕಾಮಗಾರಿ ಬಳಿಯೆ ನಿಲ್ಲಬೇಕು, ಇದರಿಂದ ದುಬಾರಿಯಾಗಿ ಅಪಾಯಕ್ಕೆ ಒಳಗಾಗುತ್ತೇವೆ” ಎಂದು ಮಹಿಳಾ ಪ್ರಯಾಣಿಕÉ ಕವಿತಾÉ ಎಂಬುವರು ದೂರಿದ್ದಾರೆ.

ಆಳಂದ ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯ ಕೇವಲ ಮಾತಾಗದೆ, ಜಾರಿಗೊಳಿಸುವಲ್ಲಿ ನಿಗಮ ಎಷ್ಟು ಗಂಭೀರವಾಗಿದೆ ಎಂಬುದನ್ನು ಮುಂದಿನ ವಾರಗಳು ತೋರಿಸಬೇಕಿದೆ.

ನಿಗಮದ ನಿರ್ಲಕ್ಷ್ಯ: ನಿಲ್ದಾಣಕ್ಕೆ ಹೊಂದಿಕೊಂಡಿರುವ ಎಪಿಎಂಸಿ ಸುತ್ತಲಿನ ಸ್ಥಳದಲ್ಲಿ ಅಗತ್ಯ ಬಸ್ ನಿಲ್ಲುಗಡೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲು ಅನುಕೂಲಕರವಿದೆ. ಆದರೆ ವೆಚ್ಚಕ್ಕೆ ಹೆದರಿ ನಿಗಮದ ಅಧಿಕಾರಿಗಳು ದಿನದೊಡುತ್ತಿದ್ದಾರೆ ಎನ್ನಲಾಗಿದ. ಎಪಿಎಂಸಿ ಸ್ಥಳದಲ್ಲಿ ಬಸ್ ನಿಲುಗಡೆಗೆ ಸೂಕ್ತವಾಗಿದ್ದರೂ, ಕೆ.ಕೆ.ಆರ್.ಟಿಸಿ ಅಧಿಕಾರಿಗಳು ಅದನ್ನು ಬಳಸಿಕೊಳ್ಳದಿರುವುದು ಪ್ರಯಾಣಿಕರಲ್ಲಿ ಅಸಮಾಧಾನವನ್ನು ಹುಟ್ಟಿಸಿದೆ. “ಅಲ್ಲಿಗೆ ತಾತ್ಕಾಲಿಕ ನಿಲ್ದಾಣ ವ್ಯವಸ್ಥೆ ಮಾಡಿದರೆ ಈ ತೊಂದರೆ ತಪ್ಪುತ್ತಿತ್ತು. ಆದರೆ ನಿಗಮ ಯಾವ ಕಾರಣಕ್ಕಾದರೂ ಇದನ್ನು ತಡೆಯುತ್ತಿದೆ” ಎಂದು ಸ್ಥಳೀಯ ಶ್ರೀಶೈಲ ಬಿಜಾಪೂರೆ ಎಂಬುವರು ಗೋಳು ತೋಡಿಕೊಂಡಿದ್ದಾರೆ.

ಕೆಕೆಆರ್‍ಟಿಸಿ ಸಿಬ್ಬಂದಿಗಳು:

ನಿಗಮದ ಆಳಂದ ಘಟಕದ ಸಿಬ್ಬಂದಿಗಳು ಸಹ  ಅವರು ಮಾಹಿತಿ ನೀಡಿದ್ದು, “ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದ್ದು, ತಾತ್ಕಾಲಿಕ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ” ಎಂದಿದ್ದಾರೆ

ಸ್ಥಳೀಯರ ಆಕ್ರೋಶ, ತಕ್ಷಣ ಕ್ರಮಕ್ಕೆ ಒತ್ತಡ:

ಶಾಸಕ ಬಿ.ಆರ್. ಪಾಟೀಲ ಅವರು ಈ ವಿಷಯದಲ್ಲಿ ನಿಗಮದೊಂದಿಗೆ ಮಾತುಕತೆ ನಡೆಸಿ, ತಾತ್ಕಾಲಿಕ ನಿಲ್ದಾಣಕ್ಕೆ ಸಂಬಂಧಿಸಿದಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಪ್ರಯಾಣಿಕರ ಪರ ಸ್ಥಳೀಯ ಸಾರಿಗೆ ಘಟಕದ ಸಿಬ್ಬಂದಿಗಳು ಸಹ ಸಂಬಂಧಿತ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಕಾಮಗಾರಿ ಸ್ಥಳದಲ್ಲಿ ಬಸ್‍ನಿಲ್ದಾಣ ಹಾಗೂ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಯಾದ ಬಗ್ಗೆ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಮೇಲಾಧಿಕಾರಿಗಳು ಹಾಗೂ ಕಾಮಗಾರಿಯ ಗುತ್ತಿಗೆದಾರರ ಗಮನಕ್ಕೆ ತರಲಾಗಿದೆ ಪರ್ಯಾಯ ವ್ಯವಸ್ಥೆ ಬಗ್ಗೆ ಕಲ್ಪಿಸುವ ಭರವಸೆ ನೀಡಿದ್ದಾರೆ ಕಾಯಲಾಗುತ್ತಿದೆ ಎಂದು ಅವರು ಹೇಳಿಕೊಂಡರು.

ಎಇಇ ದಂಡಗುಲಕರ್ ಪ್ರತಿಕ್ರಿಯೆ: ಪ್ರಯಾಣಿಕರ ಸುರಕ್ಷತೆಗಾಗಿ ಬಸ್ ನಿಲ್ದಾಣ ಕಾಮಗಾರಿ ಆರಂಭಿಸುವ ಮೊದಲು ಪರ್ಯಾಯ ವ್ಯವಸ್ಥೆ ಏಕೆ ಮಾಡಿಕೊಂಡಿಲ್ಲ  ಎಂಬುದಕ್ಕೆ ಪ್ರತಿಕ್ರಿಯೆಸಿದ ನಿಗದ ಎಇಇ ಶಾಂತರೆಡ್ಡಿ ದಂಡಗುಲಕರ್ ಅವರು, ಸ್ಥಳದ ಕೊರತೆಯಿದೆ, ಮಧ್ಯ ಭಾಗದಲ್ಲಿನ ಕಟ್ಟಡ ತೆರವುಗೊಳಿಸಲಾಗುತ್ತಿದೆ. ಅಲ್ಲದೆ, ಬ್ಯಾರಿಕೇಡ್‍ಗಳನ್ನು ಹಾಕಲಾಗಿದೆ. ವಾರದಲ್ಲೇ ಕಟ್ಟಡ ಪೂರ್ಣ ತೆರುವಾದ ಮೇಲೆ ಬ್ಯಾರೆಕೇಡ್ ಹಾಕಿ ಮತ್ತಷ್ಟುಸುರಕ್ಷಿತೆಯೊಂದಿಗೆ ಕಾಮಗಾರಿ ಆರಂಭಿಸುತ್ತೇವೆ. ಈಗಿರುವ ಶೆಡ್ಡ್ ಮತ್ತಷ್ಟು ವಿಸ್ತರಿಸಿ ಅನುಕೂಲ ಮಾಡುತ್ತೇವೆ. ಶೌಚಾಲಯ ವ್ಯವಸ್ಥೆ ಇದೆ ಎಂದು ಹೇಳಿದರು. ನಿಲ್ದಾಣದ ಪರ್ಯಾಯ ವ್ಯವಸ್ಥೆಗೆಗಾಗಿ ಹತ್ತಿರದ ಎಪಿಎಂಸಿಯೊಂದಿಗೆ ನಿಗಮದಿಂದ ಪತ್ರವ್ಯವಹಾರ ನಡೆಯುತ್ತದೆ. ಅನುಮತಿ ಸಿಗುತ್ತಿಲ್ಲ. ಈ ಕುರಿತು ಮೇಲಾಧಿಕಾರಿಗಳ ಮೂಲಕ ಸ್ಥಳದಲ್ಲೇ ಅಥವಾ ಎಪಿಎಂಸಿ ಸ್ಥಳದಲ್ಲಾದರು ಬಸ್ ನಿಲ್ಲುಗಡೆ ವ್ಯವಸ್ಥೆಗೆ ಮುಂದಾಗಲಾಗುವುದು ಎಂದು ಹೇಳಿದರು.

Comments are closed.

Don`t copy text!