Shubhashaya News

ಸಂವಿಧಾನ ರಕ್ಷಕರಾಗಬೇಕು ಕಾನೂನು ವಿದ್ಯಾರ್ಥಿಗಳು: ನ್ಯಾಯಾಧೀಶ ಚೆನ್ನಪ್ಪಗೌಡ ಸಂದೇಶ

ಆಳಂದ: ಸಿಯುಕೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ಹಮ್ಮಿಕೊಂಡ ಸಂವಿಧಾನ ದಿನಾಚರಣೆಯನ್ನು ಸತ್ರ ನ್ಯಾಯಾಧೀಶ ಚೆನ್ನಪ್ಪಗೌಡ ಉದ್ಘಾಟಿಸಿದರು. ಸಿವಿಲ್ ನ್ಯಾಯಾಧೀಶ ಶ್ರೀನಿವಾಸ್ ನವಲೆ, ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಮತ್ತು ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಇದ್ದರು.

ಆಳಂದ: ಕಾನೂನು ವಿದ್ಯಾರ್ಥಿಗಳು ಭಾರತದ ಸಂವಿಧಾನದ ರಕ್ಷಕರಾಗಬೇಕು. ಅವರು ನಿಯಮಗಳನ್ನು ಪಾಲಿಸಿ, ಸಮಾಜ ಮತ್ತು ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡಬೇಕು,” ಎಂದು ಕಲಬುರಗಿಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚೆನ್ನಪ್ಪಗೌಡ ಅವರು ಕರೆ ನೀಡಿದರು.
ತಾಲೂಕಿನ ಕಡಗಂಚಿ ಬಳಿಯಿರುವ ಸಿಯುಕೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಮಹತ್ವವನ್ನು ವಿವರಿಸಿದ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಉಲ್ಲೇಖಿಸಿ, “ಸಾಂವಿಧಾನಿಕ ಪರಿಹಾರಗಳು ಸಂವಿಧಾನದ ಹೃದಯ ಹಾಗೂ ಆತ್ಮ” ಎಂದು ಹೇಳಿದರು.
“ಭಾರತದ ಸಂವಿಧಾನವು ಎಲ್ಲಾ ಕಾನೂನುಗಳ ತಾಯಿ. ನ್ಯಾಯಾಂಗ, ಶಾಸಕಾಂಗ ಮತ್ತು ಕಾಯಾರ್ಂಗ ಈ ಮೂರು ರಾಜ್ಯಾಂಗಗಳು ಸಂವಿಧಾನದ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುತ್ತವೆ,” ಎಂದು ವಿವರಿಸಿದರು. ಭಾರತದ ಸಂವಿಧಾನದ ಸ್ವರೂಪವನ್ನು ರಕ್ಷಿಸಲು ನ್ಯಾಯಾಂಗವು ರೂಪಿಸಿದ ಮೂಲಭೂತ ರಚನಾ ತತ್ವದ ಮಹತ್ವವನ್ನೂ ಅವರು ಒತ್ತಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ್ ನವಲೆ ಮಾತನಾಡಿ, “ಕಾನೂನು ವಿದ್ಯಾರ್ಥಿಗಳು ಸಾಮಾಜಿಕ ಸೇವಾ ಮನಸ್ಸನ್ನು ಬೆಳೆಸಿಕೊಳ್ಳಬೇಕು. ಧ್ವನಿಯಿಲ್ಲದವರ ಧ್ವನಿಯಾಗಿ ನಿಲ್ಲುವುದು, ತಾರತಮ್ಯವನ್ನು ದೂರಿಸುವುದು, ಶಾಂತಿಯನ್ನು ಹರಡುವುದು ಮತ್ತು ಸಮಾನತೆಯನ್ನು ಕಾಪಾಡುವುದು ಸಂವಿಧಾನದ ಮೂಲ ಉದ್ದೇಶ” ಎಂದರು.
ಸಿಯುಕೆ ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ್, “ಕಾನೂನು ಜ್ಞಾನವನ್ನು ಜನರಿಗೆ ತಲುಪಿಸುವಲ್ಲಿ ಹಾಗೂ 2047ರೊಳಗೆ ವಿಕಸಿತ ಭಾರತ ಸಾಧನೆಗೆ ಸಂವಿಧಾನ ದಿನ ಆಚರಣೆ ಮಹತ್ವದ ಪಾತ್ರ ವಹಿಸುತ್ತದೆ” ಎಂದು ತಿಳಿಸಿದರು.
ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಮಾತನಾಡಿ “ಸಮಾಜದ ಅಶಾಂತಿ ಮತ್ತು ಅನಿಶ್ಚಿತತೆಯನ್ನು ನಿಯಂತ್ರಿಸುವ ಶಕ್ತಿಯೇ ಸಂವಿಧಾನ. 140 ಕೋಟಿ ಜನಸಂಖ್ಯೆಯ ದೇಶದಲ್ಲಿ ನಾವು ನಿಯಮಗಳನ್ನು ಪಾಲಿಸದಿದ್ದರೆ ಏನಾಗುತ್ತದೆ ಎಂದು ಊಹಿಸಿ. ಕರ್ತವ್ಯಗಳನ್ನು ಮರೆತು ಕೇವಲ ಹಕ್ಕುಗಳಿಗಾಗಿ ಹೋರಾಡುವುದು ಸರಿಯಲ್ಲ,” ಎಂದು ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಡೀನ್ ಡಾ. ಬಸವರಾಜ ಎಂ. ಕುಬಕಡ್ಡಿ ಸ್ವಾಗತ ಕೋರಿದರು. ಡಾ. ರೇಣುಕಾ ಎಸ್. ಗುಬ್ಬೇವಾಡ ವಂದಿಸಿದರು, ಡಾ. ಜಯಂತ ಬೋರುವಾ ನಿರೂಪಿಸಿದರು. ಡೀನ್‍ರು, ವಿಭಾಗ ಮುಖ್ಯಸ್ಥರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comments are closed.

Don`t copy text!