ಆಳಂದ: ಕೃಷಿ ಅಧಿಕಾರಿಯಾಗಿ ಪಟ್ಟಣ ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಬಡ್ತಿ ಹೊಂದಿದ ವಿಲಾಸ್ ಹರಸೂರ ಅವರನ್ನು ಸಿಬ್ಬಂದಿಗಳು ಮತ್ತು ರೈತರು ಸನ್ಮಾನಿಸಿ ಸ್ವಾಗತಿಸಿದರು.
ಹಿಂಗಾರು ಹೆಚ್ಚಿನ ಇಳುವರಿಗಾಗಿ ಕೃಷಿ ಅಧಿಕಾರಿ ವಿಲಾಸ ಹರಸೂರ ಸಲಹೆ
ಆಳಂದ: ಹಿಂಗಾರು ಹಂಗಾಮಿನ ಬೆಳೆಗಳಲ್ಲಿ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸುವ ಮೂಲಕ ಹೆಚ್ಚಿನ ಇಳುವರಿ ಪಡೆದುಕೊಳ್ಳಬಹುದು ಎಂದು ಕೃಷಿ ಅಧಿಕಾರಿ ವಿಲಾಸ ಹರಸೂರ ಸಲಹೆ ನೀಡಿದರು.
ಸಹಾಯಕ ಕೃಷಿ ಅಧಿಕಾರಿಯಿಂದ ಕೃಷಿ ಅಧಿಕಾರಿಯಾಗಿ ಬಡ್ತಿ ಪಡೆದ ಹಿನ್ನೆಲೆಯಲ್ಲಿ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವೈಜ್ಞಾನಿಕರ ತಂಡವು ಜಿಲ್ಲೆಯಲ್ಲಿ ಪ್ರತಿ ಗುರುವಾರ ‘ರ್ಯಾಪಿಡ್ ಸರ್ವೇ’ ಮೂಲಕ ಮಾಹಿತಿಯನ್ನು ಸಂಗ್ರಹಿಸಿ ತೊಗರಿ, ಜೋಳ, ಕಡಲೆ ಸೇರಿದಂತೆ ಪ್ರಮುಖ ಬೆಳೆಗಳಿಗೆ ಸಂಬಂಧಿಸಿದ ಸೂಕ್ತ ಕೃಷಿ ಸಲಹೆಗಳನ್ನು ನೀಡುತ್ತಿದೆ. ರೈತರು ಈ ಮಾರ್ಗದರ್ಶನವನ್ನು ಪರಿಣಾಮಕಾರಿ ರೀತಿಯಲ್ಲಿ ಬಳಸಿಕೊಳ್ಳಬೇಕೆಂದು ಹರಸೂರ ಮನವಿ ಮಾಡಿದರು.
ತೊಗರಿ ಗೊಡ್ಡು ರೋಗ ನಿಯಂತ್ರಣ ಕ್ರಮಗಳು:
ತೊಗರಿಯಲ್ಲಿ ಕಾಣುವ ಗೊಡ್ಡು ರೋಗ ನಿವಾರಣೆಗೆ ರೋಗಗ್ರಸ್ತ ಗಿಡಗಳನ್ನು ಹಾಗೂ ಕೂಳೆ ಆವರಿಸಿರುವ ಭಾಗಗಳನ್ನು ತೆಗೆದು ನಾಶ ಮಾಡುವುದು ಅತ್ಯಗತ್ಯ. ಪೆÇಪರ್ಜಾಯಟ್, ಸ್ಟೆಫೆರೊಮೆಸಿಫೆನ್, ಅಬಾಮಿಕಿನ್, ಫೆನಝಕೀನ್ ಸಲ್‍ಫರ್ ಮುಂತಾದ ರಾಸಾಯನಿಕಗಳಲ್ಲಿ ಯಾವುದಾದರೂ ಒಂದನ್ನು ಒಂದು ಮಿಲಿ ಲೀಟರ್ ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಿದರೆ ಪರಿಣಾಮಕಾರಿ ನಿಯಂತ್ರಣ ಸಾಧ್ಯ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಲು ಅವರು ಸಲಹೆ ನೀಡಿದರು.
ರಿಯಾಯಿತಿ ಬಲಕೆಂದ ಗುಣಮಟ್ಟದ ಬೀಜ ವಿತರಣೆ:
ತೊಗರಿ ಹಾಗೂ ಇತರೆ ಬೆಳೆಗಳಲ್ಲಿ ಕೀಟಬಾಧೆ ಕಡಿಮೆ ಮಾಡಲು ಹೂಂಡಾ ಸ್ಪ್ರೇಯರ್ ಯಂತ್ರಗಳನ್ನು ಸಾಮಾನ್ಯ ರೈತರಿಗೆ 50% ಹಾಗೂ ಪರಿಶಿಷ್ಟ ಜಾತಿ–ಪಂಗಡ ರೈತರಿಗೆ 75% ರಿಯಾಯಿತಿಯಲ್ಲಿ ವಿತರಿಸಲಾಗುತ್ತಿದೆ. ಹಿಂಗಾರು ಜೋಳ ಮತ್ತು ಕಡಲೆ ಬೀಜ ವಿತರಣೆಯೂ ಸಹ ಅದೇ ರೀತಿ ನಡೆಯುತ್ತಿದೆ ಎಂದು ಅವರು ಹರಸೂರ ತಿಳಿಸಿದರು.
ತುಂತುರು ನೀರಾವರಿ ಮತ್ತು ಹನಿ ನೀರಾವರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ ರೈತರಿಗೆ ಜೇಷ್ಠತಾ ಆಧಾರದ ಮೇಲೆ ಪರಿಕರಗಳನ್ನು ವಿತರಿಸಲಾಗುತ್ತಿದೆ. ಟ್ರ್ಯಾಕ್ಟರ್ ಚಾಲಿತ ಸಾಧನಗಳಾದ ರೂಟವೇಟರ್, ನೇಗಿಲು, ಕುಂಟೆ ಮುಂತಾದ ಕೃಷಿ ಪರಿಕರಗಳೂ ಇದೇ ತರಹ ವಿತರಣೆಗೊಳಗಾಗುತ್ತಿವೆ ಎಂದು ವಿವರಿಸಿದರು.
ರೈತ ಸಂಪರ್ಕ ಕೇಂದ್ರದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೀಟನಾಶಕ, ಕರಡುಪೆÇೀಷಕ ಲಭ್ಯವಿದೆ. ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಗೆ ಡಿಸೆಂಬರ್ ಒಳಗಾಗಿ ನೋಂದಣಿ ಪೂರ್ಣಗೊಳಿಸಬೇಕು. ‘ಮೇಘದೂತ್’ ಆಪ್ ಮೂಲಕ ಹವಾಮಾನ ಮಾಹಿತಿ ಪಡೆದು ನೀರಾವರಿಯನ್ನು ಸಮತೋಲನಗೊಳಿಸಬೇಕು, ಅತಿ ನೀರನ್ನು ತಪ್ಪಿಸಬೇಕು ಎಂದು ಹರಸೂರ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸೋಮಶೇಖರ್ ಗೌಡ ಪೆÇಲೀಸ್ ಪಾಟೀಲ್, ಈರಣ್ಣ ತಾಳಿಕೋಟಿ, ಜಗದೀಶ್ ಜಮಾದಾರ್, ರಾಣೇಶ್ ಜಮಾದಾರ್, ಸಿದ್ದು ಕುಂಬಾರ, ಶರಣಬಸಪ್ಪ ಗೌಡ ಕೊಳ್ಳೂರ, ಅಣ್ಣಾರಾಯ ತಾಳಿಕೋಟೆ, ಹಣಮಂತರಾಯ ಬಿರಾದಾರ್ ಸೇರಿದಂತೆ ಅನೇಕ ರೈತರು ಭಾಗವಹಿಸಿದರು. ತಾಂತ್ರಿಕ ಅಧಿಕಾರಿ ಅಜಯ ಭೀಮನಳ್ಳಿ ಸ್ವಾಗತಿಸಿ ಮಾತನಾಡಿದರು. ಲೆಕ್ಕಾಧಿಕಾರಿ ಕಾಶಿರಾಯ ಗೆರಗೋಲ್ ವಂದಿಸಿದರು. ಸಿಬ್ಬಂದಿ ಹಾಗೂ ರೈತರು ಶಾಲು, ಪುಷ್ಪಗುಚ್ಛ ಹಾಗೂ ಫಲತಾಂಬೂಲ ನೀಡಿ ಗೌರವಿಸಿದರು.
“ರೈತರ ಬದುಕು ಹಸನಾಗಿಸಲು ಸೇವೆ”
ನಾನು ಕೃಷಿ ಇಲಾಖೆಯಲ್ಲಿ ಮಾಡುತ್ತಿರುವ ಸೇವೆ ಕೇವಲ ಉದ್ಯೋಗವಲ್ಲ; ರೈತರ ಬದುಕನ್ನು ಸುಧಾರಿಸುವ ಬದ್ಧತೆ. ಹೊಸ ಹುದ್ದೆಯ ಜವಾಬ್ದಾರಿಯನ್ನು ಪ್ರತಿಯೊಂದು ಗ್ರಾಮದ ರೈತರು, ರೈತ ಮಹಿಳೆಯರು ಮತ್ತು ಯುವ ರೈತರಿಗೆ ಸಮರ್ಪಿಸುತ್ತೇನೆ ಎಂದು ಕೃಷಿ ಅಧಿಕಾರಿ ವಿಲಾಸ ಹರಸೂರ ಹೇಳಿದರು.
Comments are closed.