ಆಳಂದ: ಮಾದನಹಿಪ್ಪರಗಾದಲ್ಲಿ ಫೆ. 13ರಂದು ಹಮ್ಮಿಕೊಂಡ ಧಾರ್ಮಿಕ ಹಾಗೂ ಸಾಮಾಜಿಕ ಸಮಾರಂಭಕ್ಕೆ ಗುಜರಾತಿನ ಸಚಿವ ಪ್ರವೀಣ ಜಿ.ಮಾಲಿ ಅವರನ್ನು ಭಕ್ತ ಮಂಡಳಿಯ ಪರ ಸಿದ್ದರಾಮ ತೋಳನೂರ, ಆಳಂದದ ಮಲ್ಲಿಕಾರ್ಜುನ ವಣದೆ, ಗ್ರಾಮದ ಮಲ್ಲಿನಾಥ ತೋಳನೂರೆ ಸನ್ಮಾನಿಸಿ ಆಮಂತ್ರಿಸಿದರು.
ಆಳಂದ: ತಾಲೂಕಿನ ಮಾದನಹಿಪ್ಪರಗಾ ಗ್ರಾಮದ ಶ್ರೀ ಸಂಗಮೇಶ್ವರ ಮತ್ತು ಶ್ರೀ ಖಂಡೇಶ್ವರ ದೇವಾಲಯದ ನೂತನ ಮಹಾದ್ವಾರದ ಕಳಸಾರೋಹಣ ಬಸವಪುರಾಣದ ಪ್ರಯುಕ್ತ ಸಾಮೂಹಿಕ ವಿವಾಹ ಸೇರಿದಂತೆ ಧಾರ್ಮಿಕ ಹಾಗೂ ಸಾಮಾಜಿಕವಾಗಿ ಫೆ. 13ರಂದು ನಡೆಯಲಿರುವ ಸಮಾರಂಭಕ್ಕೆ ಗುಜರಾತ್ ರಾಜ್ಯದ ಸಚಿವರಿಗೆ ಭಕ್ತಾದಿಗಳು ಭೇಟಿ ಮಾಡಿ ಆಮಂತ್ರಿಸಿದರು.
ಗುಜರಾತ್ ರಾಜ್ಯದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಹಾಗೂ ಸಾರಿಗೆ ಖಾತೆಯ ರಾಜ್ಯ ಸಚಿವರಾದ ಪ್ರವೀಣ್ ಗೋರ್ಧಾಂಜಿ ಮಾಲಿ ಅವರನ್ನೂ ಈ ಮಹೋತ್ಸವಕ್ಕೆ ವಿಶೇಷ ಆಹ್ವಾನಿಸಲಾಗಿದೆ. ದೇವಾಲಯದ ಹಿರಿಯ ಮುಖಂಡರಾದ ಮಾಳಿ ಮಾಲ್ಗಾರ ಸಮಾಜದ ಸಿದ್ದರಾಮ ತೋಳನೂರ, ಆಳಂದದ ಮಲ್ಲಿಕಾರ್ಜುನ ವಣದೆ, ಗ್ರಾಮದ ಮಲ್ಲಿನಾಥ ತೋಳನೂರೆ ಸೇರಿ ಮತ್ತಿತರರು ಸಚಿವರನ್ನು ಭೇಟಿಯಾಗಿ ಆಮಂತ್ರಣ ನೀಡಿದ್ದು, ಸಚಿವರು ಈ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.
ಜನವರಿ 30 ರಿಂದ ಫೆಬ್ರುವರಿ 13ರವರೆಗೆ ಗ್ರಾಮದಲ್ಲಿ ನಡೆಯಲಿರುವ ಬಸವ ಪುರಾಣ ಬೃಹತ್ ಧಾರ್ಮಿಕ ಕಾರ್ಯಕ್ರಮಗಳ ಸರಣಿಯಲ್ಲಿ ಫೆಬ್ರುವರಿ 13ರಂದು ನಡೆಯಲಿರುವ ಮುಖ್ಯ ಸಮಾರಂಭಕ್ಕೆ ಗುಜರಾತ್ ಸಚಿವರು ಆಗಮಿಸಲಿದ್ದಾರೆ. ದೇವಾಲಯದ ಭಕ್ತ ಮಂಡಳಿಯ ಸದ ಮುಖಂಡರು ಸ್ವತಃ ಗುಜರಾತ್‍ಗೆ ತೆರಳಿ ಸಚಿವರನ್ನು ಆಮಂತ್ರಿಸಿ ಗೌರವಿಸಿದ್ದಾರೆ. ಈಗಾಗಲೇ ಭಕ್ತಮಂಡಳಿಯಿಂದ ಕಾರ್ಯಕ್ರಮ ಆಯೋಜನೆಯ ಭರದ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮತ್ತು ನಾಡಿನಾದ್ಯಂತ ಸಾರ್ವಜನಿರು ಪಾಲ್ಗೊಂಡು ಶ್ರೀ ಸಂಗಮೇಶ್ವರ ಮತ್ತು ಶ್ರೀ ಖಂಡೇಶ್ವರ ದೇವರ ಕೃಪೆಗೆ ಪಾತ್ರರಾಗಲು ಮುಖಂಡರು ಮನವಿ ಮಾಡಿದ್ದಾರೆ.
Comments are closed.