ಆಳಂದ್: ಪಟ್ಟಣದಲ್ಲಿ ಪ್ರತಿಭಾಕಾರಂಜಿ ಕಲೋತ್ಸವಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಸ್ವಾಮಿ ಶೆಟ್ಟಿ ಅವರು ಉದ್ಘಾಟಿಸಿದರು. ನರಸಪ್ಪ ಬಿರಾದಾರ್, ಅಣ್ಣಪ್ಪ ಹಾದಿಮನಿ, ಮುಖ್ಯ ಶಿಕ್ಷಕ ತಾನಾಜಿ ಮುಂತಾದವರಿದ್ದರು.
ಆಳಂದ: ಆಳಂದ ದಕ್ಷಿಣ ಕ್ಲಸ್ಟರ್ನ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ–2025 ಕಾರ್ಯಕ್ರಮವನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಂಗಸ್ವಾಮಿ ಶೆಟ್ಟಿ ಸಸಿಗೆ ನೀರುಹಾಕುವ ಮೂಲಕ ಭಾವೈಕ್ಯತೆಯ ಸಂಕೇತವಾಗಿ ಶುಭಾರಂಭ ಮಾಡಿದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು“ಪ್ರತಿಭಾ ಕಾರಂಜಿ ಮಕ್ಕಳ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ಕಲಾತ್ಮಕ ಕೌಶಲ್ಯಗಳನ್ನು ಹೊರತೆಗೆದು ಬರುವ ವೇದಿಕೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವಕ್ಕಿಂತಲೂ ಭಾಗವಹಿಸುವ ಹಂಬಲ, ಅನುಭವದಿಂದ ಕಲಿಯುವ ಶಕ್ತಿ ಹಾಗೂ ವ್ಯಕ್ತಿತ್ವ ವಿಕಾಸವನ್ನು ಹೆಚ್ಚಿಸುತ್ತವೆ. ಶಿಕ್ಷಕರು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದಾರೆ. ಆಳಂದ ದಕ್ಷಿಣ ಕ್ಲಸ್ಟರ್ ಶಿಕ್ಷಣದಲ್ಲಿ ಮಾದರಿಯಾಗಬೇಕೆಂಬುದು ನಮ್ಮ ಆಶಯ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಅಣ್ಣಪ್ಪ ಹಾದಿಮನಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಕ್ಕಳ ಕಲಾತ್ಮಕ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಶ್ಲಾಘಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರೆದ್ದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಭಾ ಕಾರಂಜಿಯ ಮಹತ್ವ, ಶಿಕ್ಷಕರ ಶ್ರಮ ಹಾಗೂ ವಿದ್ಯಾರ್ಥಿಗಳ ಉತ್ಸಾಹವನ್ನು ಗಮನಾರ್ಹವಾಗಿ ಹೊಗಳುತ್ತಾ, “ಇದು ಕೇವಲ ಸ್ಪರ್ಧೆ ಅಲ್ಲ; ಶಾಲಾ ಶಿಕ್ಷಣದ ಹಬ್ಬ” ಎಂದು ಹೇಳಿದರು. ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮನಸ್ಸುರ ಮುಜ್ಜಾವರ್ ಅವರು ಅತಿಥಿ ಸ್ಥಾನವನ್ನು ವಹಿಸಿಕೊಂಡು ಕಾರ್ಯಕ್ರಮಕ್ಕೆ ಬೆಂಬಲ ಮತ್ತು ಹರ್ಷ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಸರ್ಕಾರಿ ಪ್ರೌಢಶಾಲೆ ಬಾಲಕರ, ಆಳಂದದ ಮುಖ್ಯಗುರು ತಾನಾಜಿ ಅವರು ವಹಿಸಿಕೊಂಡಿದ್ದರು.
ಸಮಾರಂಭವನ್ನು ಆಳಂದ ದಕ್ಷಿಣ ಕ್ಲಸ್ಟರ್ನ ಸಿ.ಆರ್.ಪಿ ವೀರೇಶ್ ಬೋಳಶೆಟ್ಟಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕ್ಲಸ್ಟರ್ನ ಎಲ್ಲಾ ಮುಖ್ಯಗುರುಗಳು, ಶಿಕ್ಷಕರು ಹಾಗೂ ನೂರಾರು ಕುತೂಹಲಭರಿತ ಮುದ್ದು ಮಕ್ಕಳು ಭಾಗವಹಿಸಿ ಪ್ರತಿಭಾ ಕಾರಂಜಿಯನ್ನು ಸಾಂಸ್ಕøತಿಕ–ಶೈಕ್ಷಣಿಕ ಹಬ್ಬವನ್ನಾಗಿ ಮಾಡಿದರು. ಕಾರ್ಯಕ್ರಮ ಸಪ್ತಕ ಬಣ್ಣಗಳಿಂದ ಕಂಗೊಳಿಸಿಕೊಂಡು ಯಶಸ್ವಿಯಾಗಿ ನೆರವೇರಿತು.
Comments are closed.