ಗಡಿನಾಡಿನ ಕನ್ನಡಾಭಿವೃದ್ಧಿಗೆ ನಿರ್ಲಕ್ಷ್ಯ – ಕಬ್ಬು ದರ, ಭ್ರμÁ್ಟಚಾರ ಸೇರಿದಂತೆ ಸಮಸ್ಯೆಗಳ ಮೇಲೆ ಆಕ್ರೋಶ
ವಿವಿಧ ಕ್ಷೇತ್ರಗಳಲ್ಲಿ ಆಡಳಿತ ವೈಫಲ್ಯ; ಸಮಸ್ಯೆಗಳು ಬಗೆಹರಿಸದಿದ್ದರೆ ತೀವ್ರ ಹೋರಾಟಕ್ಕೆ ಎಚ್ಚರಿಕೆ
ಆಳಂದ: ಪಟ್ಟಣದಲ್ಲಿ ಕರೆದ ಜಂಟಿ ಪತ್ರಿಕಾ ಘೋಷ್ಠಿಯಲ್ಲಿ ಯುವ ಮುಖಂಡ ಶರಣಗೌಡ ಪಾಟೀಲ ದೇವಂತಗಿ, ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯ ಕಾರ್ಯದರ್ಶಿ ರಮೇಶ ಜಗತಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ವೆಂಕಟೇಶ ರಾಠೋಡ ಮಾತನಾಡಿದರು
ಆಳಂದ: ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯ ಕಾರ್ಯದರ್ಶಿ ರಮೇಶ್ ಜಗತಿ, ಯುವ ಮುಖಂಡ ಶರಣಗೌಡ ಪಾಟೀಲ್ ಮತ್ತು ಭ್ರμÁ್ಟಚಾರ ವಿರೋಧಿ ಹೋರಾಟಗಾರ ವೆಂಕಟೇಶ್ ರಾಠೋಡ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿನ ಕನ್ನಡದ ಅಭಿವೃದ್ಧಿ, ಕಬ್ಬು ದರ, ಕ್ರೀಡಾ ಕ್ಷೇತ್ರದ ನಿರ್ಲಕ್ಷ್ಯ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಅವರು ಜನಪ್ರತಿನಿಧಿಗಳ ಪಾತ್ರವನ್ನು ಪ್ರಶ್ನಿಸಿದರು.
ಕಬ್ಬು ದರದಲ್ಲಿ ಅನ್ಯಾಯ, ಶಾಸಕರ ನಿರ್ಲಕ್ಷ್ಯ: ಆರೋಪ
ಯುವ ಮುಖಂಡ ಶರಣಗೌಡ ಪಾಟೀಲ್ ದೇವಂತಗಿ ಮಾತನಾಡಿ, ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ನೀಡುತ್ತಿರುವ ಕಡಿಮೆ ದರ “ಭಾರಿ ಅನ್ಯಾಯ” ಎಂದು ಹೇಳಿದರು.
ಬೇರೆ ಜಿಲ್ಲೆಗಳು ಮತ್ತು ರಾಜ್ಯಗಳಲ್ಲಿ ಹೆಚ್ಚಿನ ದರ ನಿಗದಿಯ ಉದಾಹರಣೆಗಳನ್ನು ನೀಡಿದ ಅವರು, ಆಳಂದ ಮತ್ತು ಸುತ್ತಮುತ್ತಲಿನ ರೈತರ ಪರವಾಗಿ ಸ್ಥಳೀಯ ಶಾಸಕ ಬಿ.ಆರ್. ಪಾಟೀಲ್ ನಿಲ್ಲದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.
“ದೆಹಲಿಯ ರೈತರ ಹೋರಾಟಕ್ಕೆ ಬೆಂಬಲಿಸುವ ಶಾಸಕರು, ತಮ್ಮದೇ ಕ್ಷೇತ್ರದ ರೈತರಿಗೆ 3300 ರೂ ದರ ಕೊಡಿಸುವಲ್ಲಿ ವಿಫಲರಾಗಿದ್ದಾರೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆಗಳ ಮೇಲೆ ಒತ್ತಡ ತರದೆ ದರ ವಿಷಯವನ್ನು ಕಡೆಗಣಿಸಿದಿರುವುದು “ಶಾಸಕರ ಅಸಹ್ಯಕರ ವೈಖರಿ” ಎಂದು ಟೀಕಿಸಿದರು.
ಗಡಿನಾಡು ಕನ್ನಡಾಭಿವೃದ್ಧಿ ಕುಸಿತ
ಕನ್ನಡ ಭವನವಿಲ್ಲದಿರುವುದು ಲಜ್ಜಾಸ್ಪದ:
ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯ ಕಾರ್ಯದರ್ಶಿ ರಮೇಶ್ ಜಗತಿ ಮಾತನಾಡಿ, ಗಡಿನಾಡಿನಲ್ಲಿ ಕನ್ನಡ ಪರ ಚಟುವಟಿಕೆಗಳು ಕುಂಠಿತವಾಗಿರುವುದಕ್ಕೆ ಆಡಳಿತ ಮತ್ತು ಸ್ಥಳೀಯ ಶಾಸಕರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು. “ಆಳಂದ ತಾಲ್ಲೂಕಿನಲ್ಲಿ ಕನ್ನಡ ಭವನವೇ ಇಲ್ಲ. ನಾಲ್ಕು ಬಾರಿ ಶಾಸಕರಾಗಿದ್ದರೂ ಕನ್ನಡ ಶಿಕ್ಷಣ ಬಲವರ್ಧನೆಗೆ ಕ್ರಮ ತೆಗೆದುಕೊಂಡಿಲ್ಲ,” ಎಂದು ಅವರು ತೀವ್ರ ಟೀಕೆ ಮಾಡಿದರು.
ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಕೊರತೆ, ಯುವಕರಿಗೆ ಅಗತ್ಯ ಸೌಲಭ್ಯಗಳಿಲ್ಲದಿರುವುದು, ಹಲವು ಕಾಮಗಾರಿಗಳು ತಿಂಗಳಿನಿಂದ ನಡೆಯುತ್ತಿರುವುದು ಸೇರಿದಂತೆ ಅನೇಕ ವಿಚಾರಗಳನ್ನು ಅವರು ಆಡಳಿತದ ವಿಫಲತೆ ಎಂದು ಟೀಕಿಸಿದರು.
ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ್ ಪಾದಯಾತ್ರೆಯಲ್ಲಿ ಕನ್ನಡದ ಧ್ವಜ ಬಳಕೆ “ರಾಜಕೀಯ ನಾಟಕ” ಎಂದು ಅವರು ಅಭಿಪ್ರಾಯಪಟ್ಟರು.
ವಸತಿ ನಿಲಯಗಳಲ್ಲಿ ಭ್ರμÁ್ಟಚಾರ
ಸ್ಪಂದನೆ ಇಲ್ಲದಿದ್ದರೆ ತೀವ್ರ ಹೋರಾಟಕ್ಕೆ ಎಚ್ಚರಿಕೆ:
ತಾಲೂಕಿನ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಶಾಸಕ ಹಾಗೂ ಆಡಳಿತಕ್ಕೆ ಮುಖಂಡರು ಜಂಟಿಯಾಗಿ ಮನವಿ ಮಾಡಿದರು.
“ಸಮಸ್ಯೆಗಳು ಬಗೆಹರಿಯದಿದ್ದರೆ ಜನರನ್ನು ಜೊತೆಗಿಟ್ಟು ದೊಡ್ಡ ಮಟ್ಟದ ಹೋರಾಟ ನಡೆಸಲಾಗುತ್ತದೆ” ಎಂದು ಅವರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಶರಣು ಮುನ್ನೊಳ್ಳಿ ಇದ್ದರು.
Comments are closed.