ಆಳಂದ್ ತಾಲೂಕಿನ ಸೇವಾ ನಗರ ತಾಂಡಾದಲ್ಲಿ ವಕೀಲರ ಸಂಘದ ನೂತನ ಅಧ್ಯಕ್ಷ ಕಮಲ್ ರಾಠೋಡ್ ಅವರಿಗೆ ಅಭಿನಂದನ ಸಮಾರಂಭದಲ್ಲಿ ಸನ್ಮಾನಿಸಲಾಯಿತು
ಆಳಂದ್: ಆಳಂದ್ ವಕೀಲರ ಸಂಘದ ಎರಡನೇ ಬಾರಿಗೆ ಅಧ್ಯಕ್ಷ ಕಮಲ್ ರಾಠೋಡ್ ಅವರಿಗೆ ತಾಲೂಕಿನ ಸೇವಾ ನಗರ ತಾಂಡಾದಲ್ಲಿ ಶ್ರೀ ತಪಸ್ವಿ ನಾಯಕ್ ಸೇವಾ ಟ್ರಸ್ಟ್ ಆಯೋಜಿಸಲ್ಪಟ್ಟ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಭಾಷಣ ಮಾಡಿದ ಕಮಲ್ ರಾಕೋಡ್ ಅವರು, “ಕಾನೂನು ಎಂದರೆ ಕೇವಲ ನ್ಯಾಯಾಲಯಗಳಲ್ಲಿ ನಡೆಯುವ ಪ್ರಕ್ರಿಯೆಯಲ್ಲ, ಅದು ನಮ್ಮ ದೈನಂದಿನ ಜೀವನದ ಭಾಗವಾಗಬೇಕು. ಸಾಮಾನ್ಯ ಜನರು ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲದೇ ಇರುವುದು ಅನ್ಯಾಯದ ಮೂಲ. ನಾನು ವಕೀಲರ ಸಂಘದ ಅಧ್ಯಕ್ಷನಾಗಿ, ಜನಸಾಮಾನ್ಯರಿಗೆ ಕಾನೂನು ಸಹಾಯವನ್ನು ತಲುಪಿಸುವ ಗುರಿಯನ್ನು ಹೊಂದಿದ್ದೇನೆ” ಎಂದು ಹೇಳಿದರು.
ಇಂದಿನ ಸಮಾಜದಲ್ಲಿ ಗ್ರಾಮೀಣ ಮತ್ತು ನಗರೀಯ ಜನರಿಗೆ ಕಾನೂನು ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಅತ್ಯಗತ್ಯ., ಮಹಿಳಾ ಹಕ್ಕುಗಳು, ದಲಿತ ಮತ್ತು ಹಿಂದುಳಿದ ರ‍್ಗಗಳ ಸುರಕ್ಷತೆ, ಭೂಮಿ ಹಕ್ಕುಗಳು, ಶ್ರಮಿಕರ ಕಾನೂನು ಸೌಲಭ್ಯಗಳು – ಇವೆಲ್ಲವನ್ನೂ ಸರಳ ಭಾಷೆಯಲ್ಲಿ ಜನರಿಗೆ ತಿಳಿಸುವ ಕರ‍್ಯಕ್ರಮಗಳನ್ನು ಆಯೋಜಿಸುತ್ತೇವೆ. ರಾಜ್ಯದಲ್ಲಿ ನಡೆಯುತ್ತಿರುವ ಕಾನೂನು ಸಹಾಯ ಕೇಂದ್ರಗಳನ್ನು (ಐegಚಿಟ ಂiಜ Seಡಿviಛಿes) ಇನ್ನಷ್ಟು ಶಕ್ತಿಯುತಗೊಳಿಸಿ, ಬಡವರು ಮತ್ತು ಅಸಹಾಯಕರಿಗೆ ಉಚಿತ ಕಾನೂನು ಸಲಹೆ ನೀಡುವುದು ನಮ್ಮ ಆದ್ಯತೆ” ಎಂದು ಒತ್ತಿ ಹೇಳಿದರು.
ಗ್ರಾಮದಲ್ಲಿ ಭೂಮಿ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿರುವ ರೈತನಿಗೆ ಸರಳ ಕಾನೂನು ಅರಿವು ಇದ್ದರೆ, ಅವನು ತನ್ನ ಹಕ್ಕುಗಳನ್ನು ಕಳೆದುಕೊಳ್ಳದೇ ಇರಬಹುದು. ಅಂತೆಯೇ, ಮಹಿಳೆಯರು ರ‍್ಷಣೆಯಿಂದ ರಕ್ಷಣೆ ಪಡೆಯಲು PಔಅSಔ ಕಾನೂನು ಅಥವಾ ಆಗಿ ಕಾಯಿದೆಯ ಬಗ್ಗೆ ತಿಳಿದಿರುವುದು ಅವರ ಜೀವನವನ್ನು ಬದಲಾಯಿಸಬಲ್ಲದು. ನಾವು ಸಾಮಾಜಿಕ ಮಾಧ್ಯಮಗಳು, ಗ್ರಾಮೀಣ ಸಭೆಗಳು ಮತ್ತು ಶಾಲಾ ಕರ‍್ಯಕ್ರಮಗಳ ಮೂಲಕ ತಾಲೂಕು ಕಾನೂನು ಸೇವಾ ಸಮಿತಿ ಈ ಅರಿವು ಹಬ್ಬಿಸುತ್ತೇವೆ.” ಉಚಿತ ಕಾನೂನು ಸೇವೆಯ ಲಾಭವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು
ಈ ಸಂರ‍್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಾಂಡುರಂಗ ರಾಠೋಡ್ ,
ನೆಹರು ಯುವ ಕೇಂದ್ರದ ಅಧಿಕಾರಿ ದಯಾನಂದ ರಾಠೋಡ್, ನಿವೃತ್ತ ಪೊಲೀಸ್ ಅಧಿಕಾರಿ ಗಂಗಾರಾಮ್ ಆಡೆ ಸೇರಿದಂತೆ ಡಾಕುರಾ ರಾಠೋಡ್
, ವಿಜಯ ನಾಯಕ್, ಅಪ್ಪು ಶಿವಲಾಲ್, ಮಹೇಶ್, ಶಾಮ್, ಮನೋಜ್, ರಾಹುಲ್, ಸುರೇಶ್, ಪ್ರೇಮ್ನಾಥ ಆಡೆ ಪ್ರಕಾಶ್ ರಾಥೋಡ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
Comments are closed.