ಆಳಂದ ತಹಸೀಲ್ದಾರ ಕಚೇರಿಯಲ್ಲಿ ಆಧಾರ್ ಕೇಂದ್ರ ಪುನರಾರಂಭ ಸಾರ್ವಜನಿಕರಿಗೆ ನಿಟ್ಟುಸಿರು, ಖಾಸಗಿ ಕೇಂದ್ರಗಳ ಲೂಟ್ಟಿ ಮುಂದುವರಿಕೆ
ಆಳಂದ: ಪಟ್ಟಣದ ತಾಲೂಕು ಆಡಳಿತದಲ್ಲಿನ ಆಧಾರ ಕೇಂದ್ರ ಶನಿವಾರದಿಂದಲೇ ಪುನಾರಂಭಗೊಂಡಿದೆ.
ಆಳಂದ: ಸುಮಾರು ತಿಂಗಳಿನಿಂದ ಸ್ಥಗಿತಗೊಂಡಿದ್ದ ಆಳಂದ ತಾಲೂಕಾ ಆಡಳಿತ ಸೌಧ (ತಹಸೀಲ್ದಾರ ಕಚೇರಿ)ಯಲ್ಲಿನ ಆಧಾರ್ ಕೇಂದ್ರವು ಶನಿವಾರ ಮತ್ತೆ ಚಾಲನೆ ಪಡೆದು ಸಾರ್ವಜನಿಕರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ಆಧಾರ ತಿದ್ದುಪಡಿ ಮತ್ತು ನವೀಕರಣ ಕಾರ್ಯಕ್ಕಾಗಿ ಇದೀಗ ಸಾರ್ವಜನಿಕರು ನೇರವಾಗಿ ಕಚೇರಿಯ ಆಧಾರ್ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ ಎಂದು ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರು ಶನಿವಾರ ತಿಳಿಸಿದರು.
ಆದರೆ, ಈ ಕುರಿತು ಅಧಿಕೃತ ಮಾಹಿತಿ ಪಟ್ಟಣ ಮತ್ತು ಗ್ರಾಮೀಣ ಭಾಗದ ಜನರಿಗೆ ತಲುಪದಿರುವುದರಿಂದ ಹಲವರು ಇನ್ನೂ ಗೊಂದಲದಲ್ಲಿದ್ದಾರೆ.
ಇನ್ನೊಂದೆಡೆ, ಖಾಸಗಿವಾಗಿ ನೀಡದಲಾದ ಆಧಾರ್ ಕೇಂದ್ರಗಳಲ್ಲಿ ಹಾಗೂ ಆನ್‍ಲೈನ್ ಕೇಂದ್ರಗಳಲ್ಲಿ ನಿಯಮಿತ ಶುಲ್ಕದ ಬದಲು ದ್ವಿಗುಣ ಹಣ ವಸೂಲಿ ನಡೆಯುತ್ತಿದ್ದು, ಜನ ಸಾಮಾನ್ಯರನ್ನು ಹಾಗೂ ಬಡವರನ್ನು ಲೂಟಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ದಾಖಲೆಗಳಲ್ಲಿ ತಪ್ಪು ವಿವರಗಳಾಗುತ್ತಿರುವುದು, ಅರ್ಜಿಗಳು ರಿಜೆಕ್ಟ್ ಆಗುತ್ತಿರುವುದು, ಪದೇ ಪದೇ ಆಧಾರ ಕೇಂದ್ರಗಳಲ್ಲಿ ನವೀಕರಣ ಮತ್ತು ತಿದ್ಧಪಡಿಗೆ ತಿಂಗಳಾನುಗಟ್ಟಲೆ ದಿನಗಳು ತೆಗೆದುಕೊಳ್ಳುತ್ತಿರುವುದು ಸಾರ್ವಜನಿಕರಿಗೆ ಶಾಲಾ, ಕಾಲೇಜು ಮಕ್ಕಳಿಗೆ ಸಮಸ್ಯೆಯಾಗಿಕಾಡತೊಡಗಿದೆ. ಆಧಾರ ಕೇಂದ್ರಗಳ ಏಜ್‍ನ್ಸಿ ಮೂಲಕ ಪರವಾನಿಗೆ ಪಡೆದ ಸಿಬ್ಬಂದಿಯಿಂದ ಮಾರ್ಗದರ್ಶನದ ಕೊರತೆ ನಿರ್ವಹಣೆ ತಾಂತ್ರಿಕ ಮಾಹಿತಿ ಕೊರತೆ ಕಂಡುಬರುತ್ತಿರುವುದು ಸಕಾಲಕ್ಕೆ ಆಧಾರ ಕಾರ್ಡ್‍ಗಳು ಕೈಗೆ ಬಾರದೇ ಇರುವುದು ಸಾರ್ವಜನಿಕರನ್ನು ಮತ್ತಷ್ಟು ಪರದಾಡುವಂತೆ ಮಾಡಿದೆ.
ತಾಲೂಕಿನಲ್ಲಿ ಆಧಾರ ಕೇಂದ್ರಗಳ ಸ್ಥಗಿಗೊಂಡ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಎಚ್ಚೆತ್ತುಕೊಂಡು ತಾಲೂಕಿನಲ್ಲಿ ಆಧಾರ್ ಕೇಂದ್ರಗಳು ಚುರುಕಿನಿಂದ ಕಾರ್ಯಾರಂಭಿಸುತ್ತಿರುವುದು ಸಂತಸದ ವಿಷಯವಾದರೂ, ಜನರ ಕಷ್ಟಕ್ಕೆ ಕಾರಣವಾಗುತ್ತಿರುವ ಖಾಸಗಿ ಕೇಂದ್ರಗಳ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಮೇಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಸಕಾಲಕ್ಕೆ ಅರ್ಜಿಗಳಿಗೆ ಮಂಜೂರಾತಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಆಧಾರ ನಿರ್ವಹಣೆ ಕೇಂದ್ರ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
Comments are closed.