Shubhashaya News

ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರಗೆ ಮತ್ತೊಂದು ಪಿ.ಹೆಚ್ಚ್.ಡಿ ಪದವಿ

ಆಳಂದ: ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಪೆÇ್ರ. ಆರ್. ಆರ್. ಬಿರಾದಾರ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಎರಡನೇ ಪಿ.ಹೆಚ್ಚ್.ಡಿ ಪದವಿ ಪ್ರದಾನ ಮಾಡಲಾಯಿತು.
ಸಿಎಂಡಿಆರ್ ಧಾರವಾಡದ ಪ್ರಾಧ್ಯಾಪಕಿ ಪೆÇ್ರ. ನಯನತಾರಾ ಎಸ್. ನಾಯಕ ಅವರ ಮಾರ್ಗದರ್ಶನದಲ್ಲಿ ಅವರು “ಕೋಶೀಯ ಕಾರ್ಯಕ್ಷಮತೆ ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ಕೋಶೀಯ ನೀತಿ ಸುಧಾರಣೆಯ ಪರಿಣಾಮ: ಭಾರತದ ಪ್ರಮುಖ ರಾಜ್ಯಗಳ ಒಂದು ವಿಶ್ಲೇಷಣೆÀ” ಎಂಬ ವಿಷಯದ ಮೇಲೆ ಸಂಶೋಧನೆ ಮಾಡಿದ್ದಾರೆ.
ಈ ಅಧ್ಯಯನವು ಮುಖ್ಯವಾಗಿ ಕಂಡುಹಿಡಿದಿರುವುದೇನೆಂದರೆ, ಆರ್ಥಿಕ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ2003 (ಈಖಃಒಂ) ಜಾರಿಗೆ ಮಾಡಿದ್ದರ ಪ್ರಯುಕ್ತವಾಗಿ ಕೇಂದ್ರ ಸರ್ಕಾರದ ಆರ್ಥಿಕ ಶಿಸ್ತು ಭಾರತದ ಎಲ್ಲಾ ರಾಜ್ಯ ಸರ್ಕಾರಗಳಿಗಿಂತ ಉತ್ತಮವಾಗಿ ಸುಧಾರಿಸಿದೆ. ದೇಶದಲ್ಲಿನ ಎಲ್ಲಾ ರಾಜ್ಯ ಸರ್ಕಾರಗಳು ಮೂಲಸೌಕರ್ಯಗಳನ್ನು ಸೃಷ್ಟಿಸಲು ಬಂಡವಾಳ ವೆಚ್ಚವನ್ನು ಹೆಚ್ಚಿಸಬೇಕು ಮತ್ತು ಅನುಉತ್ಪಾದಕ ರಾಜಸ್ವ ವೆಚ್ಚ ಮತ್ತು ಖಾಸಗಿ ಬಂಡವಾಳ ಹೂಡಿಕೆಯ ಮೇಲೆ ದುಷ್ಪರಿಣಾಮ ಬೀರುವ ಸಾರ್ವಜನಿಕ ಸಾಲವನ್ನು ಕಡಿಮೆ ಮಾಡಬೇಕು ಎಂದು ಅಧ್ಯಯನವು ಸೂಚಿಸುತ್ತದೆ.
ಪೆÇ್ರ. ಬಿರಾದಾರ ಅವರು 4 ಪುಸ್ತಕಗಳು, 3 ಮನೋಗ್ರಾಫ್ಸ್‍ಗಳು, ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ 107ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸೆಮಿನಾರ್ ಮತ್ತು ಸಮ್ಮೇಳನಗಳಲ್ಲಿ 120ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಸ್ತುತಪಡಿಸಿದ್ದಾರೆ. ಅಲ್ಲದೆ, ದಿನÀಪತ್ರಿಕೆಗಳಲ್ಲಿ 70ಕ್ಕೂ ಹೆಚ್ಚು ಜನಪ್ರಿಯ ಲೇಖನಗಳು ಪ್ರಕಟವಾಗಿವೆ. ಐಸಿಎಸ್ಎಸ್ಆರ್, ಯುಜಿಸಿ ಮತ್ತು ರಾಜ್ಯ ಸರ್ಕಾರಗಳಿಂದ ಪ್ರಾಯೋಜಿಸಲ್ಪಟ್ಟ 13ಕ್ಕೂ ಹೆಚ್ಚು ಸಂಶೋಧನಾ ಪ್ರಾಜೆಕ್ಟ್ಸ್‍ಗಳನ್ನು ಅವರು ಪೂರ್ಣಗೊಳಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ 150ಕ್ಕೂ ಹೆಚ್ಚು ವಿಶೇಷ ಮತ್ತು ಆಹ್ವಾನಿತ ಉಪನ್ಯಾಸಗಳನ್ನು ನೀಡಿದ್ದಾರೆ. ಅವರ ಸಂಶೋಧನಾ ಕೊಡುಗೆಯನ್ನು ಗಮನಿಸಿ ಕರ್ನಾಟಕ ಸರ್ಕಾರವು 2020ರಿಂದ 2023ರ ಅವಧಿಯಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯರಾಗಿ ನಾಮನಿರ್ದೇಶನ ಮಾಡಿತು.
ಇದಲ್ಲದೆ, ಅವರಿಗೆ 2025 ರಲ್ಲಿ ಜೇವರ್ಗಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್‍ನಿಂದ ‘ಕಲ್ಯಾಣ ಕರ್ನಾಟಕ ಕೌಟಿಲ್ಯ’ ಪ್ರಶಸ್ತಿ, 2021ರಲ್ಲಿ ಬೆಂಗಳೂರಿನ ಐಎಸ್‍ಬಿಆರ್ ಬಿಸಿನೆಸ್ ಸ್ಕೂಲ್‍ದಿಂದÀ ‘ಗುರು ಶ್ರೇಷ್ಠ’ ಪ್ರಶಸ್ತಿ, 2019ರಲ್ಲಿ ಇಂಡಿಯನ್ ಇಕನಾಮಿಕ್ ಅಸೋಸಿಯೇಷನ್‍ದಿಂದ ‘ಪೆÇ್ರ. ಟಿ.ಎಸ್. ಪಪೆÇೀಲಾ ಮೆರಿಟ್ ಅವಾರ್ಡ್’, 2018ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದಡಾ. ಎಸ್. ಟಿ. ನಂಡಿಬೇವೂರ್ ‘ಅತ್ಯುತ್ತಮ ಸಂಶೋಧಕ ಸ್ವರ್ಣ ಪದಕ’,2008ರಲ್ಲಿ ನವದೆಹಲಿಯ ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆ (ಓIPಈP) ‘ದ್ವಿತೀಯ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ, 2007ರಲ್ಲಿ ನವದೆಹಲಿ ಐಸಿಎಸ್ಎಸ್ಆರ್‍ದಿಂದÀ ‘ಇಂಡೋ-ಚೈನಾ ಸಾಂಸ್ಕøತಿಕ ವಿನಿಮಯ ಕಾರ್ಯಕ್ರಮ’, 2006ರಲ್ಲಿ ರತನ್ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯಿಂದ ‘ಸರ್ ರತನ್ ಟಾಟಾ ವಿಜಿಟಿಂಗ್ ಫೆಲೋಶಿಪ್’ ಮತ್ತು 2005ರಲ್ಲಿ ನವದೆಹಲಿಯಇಂಡಿಯನ್ ಸೊಸೈಟಿ ಆಫ್ ಲೇಬರ್ ಎಕನಾಮಿಕ್ಸ್‍ದಿಂದ ಸಂಜಯ್ ಠಾಕೂರ್ ‘ಯಂಗ್ ಲೇಬರ್ ಎಕನಾಮಿಸ್ಟ್ ಅವಾರ್ಡ್’ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.ಇವು ಅವರು ಅರ್ಥಶಾಸ್ತ್ರದಲ್ಲಿ ಮಾಡಿದ ಅನೇಕ ಸಂಶೇಧನೆಗಳಿಗೆ ಸಂದ ಗೌರವಗಳಾಗಿವೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹಾಗೂ ಧಾರವಾಡದ ಸಿಎಂಡಿಆರ್ ನಿರ್ದೇಶಕರಾದ ಪೆÇ್ರ. ಬಸವಪ್ರಭು ಜಿರ್ಲಿ ಅವರು ಪೆÇ್ರ. ಬಿರಾದಾರರ ಶೈಕ್ಷಣಿಕ ಬದ್ಧತೆ ಮತ್ತು ಸಾಧನೆಗಳಿಗೆ ಅಭಿನಂದಿಸಿದ್ದಾರೆ.

Comments are closed.

Don`t copy text!