ಆಳಂದ: ಶ್ರೀಚಂದ ಶಾಲೆಯಲ್ಲಿ ನಡೆದ ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮ ಬಿಎಚ್‍ಇಒ ಮಾಹದೇವಿ ಹಟಿ ಉದ್ಘಾಟಿಸಿದರು. ಎಚ್‍ಎಂ ಸುನಿತಾ ಸಂಗಪಾ ಇತರರು ಇದ್ದರು.
ಆಳಂದ: ಸಮುದಾಯ ಆರೋಗ್ಯ ಕೇಂದ್ರ ನರೋಣಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಗೋಳಾ ಬಿ ವತಿಯಿಂದ ಶ್ರೀ ಚಂದ್ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮದಡಿ “ಹದಿಹರೆಯರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ” ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಬಿಎಚ್‍ಇಒ ಮಾಹದೇವಿ ಹಟಿ ಅವರು ಉತ್ತಮ ಮಾನಸಿಕ ಆರೋಗ್ಯ ಮತ್ತು ಕ್ಷಯರೋಗ ತಡೆ ಕುರಿತು ಸಲಹೆ ನೀಡಿ, “ದೂರವಿರಿ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ” ಎಂದರು.
ಶಾಲಾ ಮುಖ್ಯಗುರು ಸುನಿತಾ ಸಂಗಪಾ ಅವರು ವಿದ್ಯಾರ್ಥಿಗಳನ್ನು ಸ್ನೇಹ ಕ್ಲಿನಿಕ್ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಲು ಪ್ರೇರೇಪಿಸಿದರು.
ಆಪ್ತ ಸಮಾಲೋಚಕ ಚಂದ್ರಕಾಂತ ಕೋರೆ ಅವರು WIಈS ಮಾತ್ರೆಗಳ ವಿತರಣೆ, ಮಾನಸಿಕ–ದೈಹಿಕ–ಸಾಮಾಜಿಕ ಆರೋಗ್ಯ, ವೈಯಕ್ತಿಕ ಸ್ವಚ್ಛತೆ, ಬಾಲ್ಯ ವಿವಾಹ, ಟೀನ್ ಪ್ರೆಗ್ನನ್ಸಿ, ತಂಬಾಕು ಉತ್ಪನ್ನಗಳ ದುಷ್ಪರಿಣಾಮ ಹಾಗೂ ಮುಟ್ಟಿನ ನೈರ್ಮಲ್ಯದ ಕುರಿತು ಮನವರಿಕೆ ಮಾಡಿಸಿದರು.
ದತ್ತು ಪೂಜಾರಿ ಅವರು ಪೌಷ್ಟಿಕಾಂಶ, ಸ್ವಚ್ಛತೆ, ಸಾಂಕ್ರಾಮಿಕ ರೋಗಗಳು ಹಾಗೂ ಊಟಜ ರೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ನೀಡಿದರು. ಶ್ರೀ ರಫಿಕ್ ಅವರು ವಿದ್ಯಾರ್ಥಿನಿಯರಿಗೆ ಮುಂಜಾಗೃತಿ, ಶುಚಿ ವಿಲೇವಾರಿ ವಿಧಾನ ಮತ್ತು ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ-ಶಿಕ್ಷಕಿಯರು, ಆಪ್ತ ಸಮಾಲೋಚಕರು, ಆಶಾ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು. ಕಾವೇರಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ದೈಹಿಕ ಶಿಕ್ಷಕ ಶ್ರೀಶೈಲ ಸ್ವಾಗತಿಸಿದರು.
Comments are closed.