Shubhashaya News

ಜಿಎಸ್‍ಟಿ ದರ ಕಡಿತ ಜನಾನೂರಾಗಿ ಆಗಲಿದೆ: ಪೂಜಾ ಲೋಹಾರ

ಆಳಂದ: ಕೇಂದ್ರ ಸರಕಾರದ ಇತ್ತೀಚಿನ ಜಿಎಸ್‍ಟಿ ದರ ಕಡಿತಗಳನ್ನು ಸ್ವಾಗತಾರ್ಹವೆಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಪೂಜಾ ರಮೇಶ ಲೋಹಾರ್ ಹೇಳಿದ್ದಾರೆ.
ನಿನ್ನೆ ನಡೆದ 56ನೇ ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಹಲವು ವಸ್ತುಗಳ ಮೇಲಿನ ತೆರಿಗೆ ದರಗಳನ್ನು ಕಡಿಮೆಗೊಳಿಸಿ, ಪ್ರಮುಖವಾಗಿ ಔಷಧಿಗಳು, ಕೃಷಿ ಸಂಬಂಧಿತ ವಸ್ತುಗಳು, ಹೈನು ಉತ್ಪನ್ನಗಳು, ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಸಾಮಗ್ರಿಗಳ ಮೇಲೆ ದರ ಕಡಿತ ಮಾಡಲಾಗಿದೆ.
ಇದರಿಂದಾಗಿ ಸಾಮಾನ್ಯ ಜನರ ಬದುಕು ಸುಗಮವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕ್ಯಾನ್ಸರ್ ಮುಂತಾದ ಮಾರಕ ರೋಗಗಳ ಔಷಧಿಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗಿದ್ದು, ಇತರ ಔಷಧಿಗಳ ಮೇಲಿನ 12% ತೆರಿಗೆಯನ್ನು 5%ಕ್ಕೆ ಇಳಿಸಲಾಗಿದೆ. ಇದಲ್ಲದೆ, ಶಿಕ್ಷಣ ಸೇವೆಗಳು, ಕೃಷಿ, ಹೈನುಗಾರಿಕೆ, ಗೃಹೋಪಯೋಗಿ ವಸ್ತುಗಳ ಮೇಲೂ ತೆರಿಗೆ ಕಡಿಮೆ ಮಾಡಲಾಗಿದೆ ಎಂದು ಪೂಜಾ ರಮೇಶ ಲೋಹಾರ್ ತಿಳಿಸಿದ್ದಾರೆ.
ಈ ಬಗ್ಗೆ ಗುರುವಾರ ಮಾಧ್ಯಮಕ್ಕೆ ಪ್ರತಿಕ್ರಿಯೆಸಿ ಮಾತನಾಡಿದ ಅವರು, “ಕೇಂದ್ರ ಸರಕಾರ ಜಿಎಸ್‍ಟಿ ದರಗಳನ್ನು ಕಡಿತಗೊಳಿಸಿದ್ದು ಸ್ವಾಗತಾರ್ಹ. ಇಷ್ಟು ದಿನ ಜನ ಸರಕಾರದ ತೆರಿಗೆಯಿಂದ ಬೇಸತ್ತಿದರು ಈಗ ಸ್ವಲ್ಪ ನಿರಾಳವಾದಂತಾಗಿದೆ. ಕ್ಯಾನ್ಸರ್ ನಂತ ಮಾರಕ ರೋಗಕ್ಕೆ ಟ್ಯಾಕ್ಸ್ ವಿನಾಯಿತಿ ಕೊಟ್ಟು ಇತರೆ ಔಷಧಿಗಳ ಮೇಲಿನ 12 ಪ್ರತಿಶತ ಇರುವ ಟ್ಯಾಕ್ಸ್ 5ಕ್ಕೆ ಇಳಿಸಿದ್ದು ಮತ್ತು ಶಿಕ್ಷಣ, ಒಕ್ಕಲುತನ, ಹೈನುಗಾರಿಕೆ, ಗ್ರಹುಪಯೋಗಿ ವಸ್ತುಗಳ ಮೇಲೂ ಕೂಡ ತೆರಿಗೆ ಕಡಿಮೆ ಮಾಡಿದ್ದು ನಾಗರಿಕರಿಗೆ ಸಂತೋಷ ತಂದಿದೆ. ಕಾರು, ಟಿವಿ, ಫ್ರಿಜ್, ಇಲೆಕ್ಟ್ರಾನಿಕ್ ವಸ್ತುಗಳು ಅಗ್ಗ ಆಗುತ್ತವೆ. ಒಟ್ಟಾರೆ ಜನರ ಬದುಕು ಸ್ಥಿರವಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಈ ಹಣಕಾಸು ಯೋಜನೆ ಜನಾನೂರಾಗಿ ಆಗಲಿದೆ” ಎಂದು ಹೇಳಿದ್ದಾರೆ.

Comments are closed.

Don`t copy text!