ಆಳಂದ: ಪಟ್ಟಣದಲ್ಲಿ ನಡೆದ ಜೆಸ್ಕಾಂ ಕಾರ್ಯಕ್ರಮಕ್ಕೆ ಅಧಿಕಾರಿಗಳು ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕದೇ ಶಿಷ್ಟಾಚಾರ ಉಲ್ಲಂಘಿಸಿ ಅವಮಾನಿಸಲಾಗಿದೆ. ಇಂಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಪುರಸಭೆ ಉಪಾಧ್ಯಕ್ಷೆ ಕವಿತಾ ಸಂಜಯ ನಾಯಕ ಅವರು ಜಿಲ್ಲಾಧಿಕಾರಿಗಳು ದೂರು ಸಲ್ಲಿಸಿ ಒತ್ತಾಯಿಸಿದ್ದಾರೆ.
ನಾನು ಮಹಿಳೆ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಕಾರಣಕ್ಕಾಗಿ ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಎಮ್.ಎ. ಮಠÀಪತಿ ಕಾರ್ಯನಿರ್ವಾಹಕ ಅಭಿಯಂತರರು (ವಿ) ಗ್ರಾಮೀಣ ವಿಭಾಗ- ಜೇಸ್ಕಾ ಕಲಬುರಗಿ ರವರು ಸೆ.3ರಂದು ಪಟ್ಟಣದ ವೀರಶೈವ ಲಿಂಗಾಯತ ಭವನ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ. ಈ ಸದರಿ ಕಾರ್ಯಕ್ರಮದಲ್ಲಿ ನನ್ನ ಹೆಸರನ್ನು ಹಾಗೂ ಹುದ್ದೆ ಹಾಕದೆ ಆಹ್ವಾನ ಪತ್ರಿಕೆಯನ್ನು ಕೊಟ್ಟಿರುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ವಿಚಾರಿಸಿದಾಗ ಶಿಷ್ಟಾಚಾರ ಪ್ರಕಾರ ನಿಮ್ಮ ಹೆಸರು ಹಾಕಲು ಬರುವುದಿಲ್ಲ ಎಂದು ತಿಳಿಸಿರುತ್ತಾರೆ. ಮತ್ತೆ ಬೇರೆಯವರಿಂದ ಈ ವಿಷಯ ಇಲ್ಲಿ ಬಿಟ್ಟುಕೊಡಲು ದೂರವಾಣಿಯಲ್ಲಿ ಹೇಳಿರುತ್ತಾರೆ ಎಂದು ದೂರಿನಲ್ಲಿ ಅವರು ಅಸಮಾದಾನ ತೋಡಿಕೊಂಡಿದ್ದಾರೆ.
ಪುರಸಭೆಯ ಉಪಾಧ್ಯಕ್ಷ ಸ್ಥಾನ ಶಿಷ್ಟಾಚಾರನಲ್ಲಿ ಬರುವುದಿಲ್ಲ ಎಂಬುವವರ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಮನವಿ ಮಾಡಿದ್ದಾರೆ.
Comments are closed.