ಆಳಂದ: ಕಡಗಂಚಿಯಲ್ಲಿ ನಡೆದ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಸಾಹಿತಿ ಮುಡಬಿ ಗುಂಡೇರಾವ್ ಶಾಸನಗಳ ಮಾಹಿತಿ ನೀಡಿದರು.
ಆಳಂದ: ಕುಂತಲ ನಾಡಿನ ಪ್ರಮುಖ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ವಾಣಿಜ್ಯ ಕೇಂದ್ರವಾಗಿ ಗುರುತಿಸಿಕೊಂಡ ತಾಲೂಕಿನ ಕಡಗಂಚಿ ಗ್ರಾಮವು ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೇರಾವ ಹೇಳಿದರು.
ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ತಾಲೂಕಿನ ಕಡಗಂಚಿಯ ಬಕ್ಕೇಶ್ವರ ದೇವಾಲಯದಲ್ಲಿ ನಡೆದ “ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ” ಕಾರ್ಯಕ್ರಮ–37ರಲ್ಲಿ ಅವರು ಉಪನ್ಯಾಸ ನೀಡಿದರು.
ಕ್ರಿ.ಶ. 1118ರ ಹಾಗೂ 12ನೇ ಶತಮಾನದ ಶಾಸನಗಳ ಆಧಾರದಿಂದ ಕಲ್ಯಾಣ ಚಾಲುಕ್ಯರ ಮಾಂಡಳಿಕ ಅರಸರು ಮಲ್ಲಿಕಾರ್ಜುನ ದೇವಾಲಯಕ್ಕೆ ಜಮೀನು ದಾನ ನೀಡಿದ್ದ ವಿಚಾರವನ್ನು ಅವರು ಉಲ್ಲೇಖಿಸಿದರು.
ಆಳಂದ ಸಾಸಿರ ನಾಡಿನ ಆಡಳಿತಕಾಲದಲ್ಲಿ ಆರನೇ ವಿಕ್ರಮಾಧಿತ್ಯನ ರಾಣಿ ಚಂದಲಾದೇವಿ ಕಡಗಂಚಿ ಆಳಿದ್ದುದರ ಸಾಕ್ಷಿ ಶಾಸನಗಳಲ್ಲಿ ದೊರೆಯುತ್ತದೆ. ನಿಂಬರ್ಗಾ, ಲಾಡ್ ಚಿಂಚೋಳಿ, ಬೋಧನ, ನರೋಣಾ, ಪಡಸಾವಳಗಿ, ಮಾಡ್ಯಾಳ್, ಹೊಡಲ್ ಮುಂತಾದ ಹಳ್ಳಿಗಳು ಆ ಕಾಲದ ಕಲೆ, ಸಾಹಿತ್ಯ, ಸಂಗೀತ, ಚರಿತ್ರೆಗೆ ಸಾಕ್ಷಿಯಾಗಿವೆ ಎಂದು ವಿವರಿಸಿದರು.
ಶಾಂತೇಶ್ವರ, ಮಲ್ಲಿಕಾರ್ಜುನ, ಬಕ್ಕೇಶ್ವರ, ಹನುಮಾನ ದೇವಾಲಯಗಳು, ಹಳೆಯ ಪುಷ್ಕರಣಿ ಹಾಗೂ ಅಗಸಿ ಬಾಗಿಲಿನಂತಹ ಸ್ಮಾರಕಗಳು ಸ್ಥಳೀಯ ಇತಿಹಾಸದ ಮಹತ್ವವನ್ನು ಮೆರೆಯುತ್ತಿವೆ ಎಂದರು.
ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, “ಸ್ಮಾರಕಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆ. ನಮ್ಮೂರಿನ ಇತಿಹಾಸದ ಬಗ್ಗೆ ಹೆಮ್ಮೆ ಹೊಂದಬೇಕು ಹಾಗೂ ಎಲ್ಲೆಡೆ ಜಾಗೃತಿ ಮೂಡಬೇಕು” ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮಲ್ಲಯ್ಯಸ್ವಾಮಿ, ಕಾಶಿನಾಥ ಚೇಂಗಣಿ, ಪದ್ಮಣ್ಣ, ಅಜ್ಜುಸಾಬ್, ಕಲ್ಯಾಣಿ, ಪ್ರಕಾಶ್, ಶರಣಪ್ಪ, ವಿಸ್ವನಾಥ, ವಿನಾಯಕ, ಶಾಂತಪ್ಪ, ಸಿದ್ದಾರೂಡ, ಮಲ್ಲಿಕಾರ್ಜುನ, ಶಾಂತಪ್ಪ, ಮೆಹಬೂಬ್ ಸಾಬ್, ಈರಪ್ಪ, ರಾಜಕುಮಾರ,ಸಿದ್ದಲಿಂಗ, ದೇವೇಂದ್ರಪ್ಪ, ಜೈನೋದ್ದೀನ್, ಸಂತೋಷ್, ವಿಶ್ವನಾಥಸ್ವಾಮಿ, ಶಾಂತಯ್ಯಪ್ಪ, ಸಂತೋಷ, ಸಿದ್ರಾಮಪ್ಪ, ಗುರುಶಾಂತಪ್ಪ, ಶಿವರಾಜ ಇಟಕಾರ್, ಈರಣ್ಣ ಪೂಜಾರಿ, ನಾಗೇಶ್ ಕಣ್ಣಿ, ಶಾಂತಪ್ಪ ಪೂಜಾರಿ, ಶಾಮರಾವ ಇಟಕಾರ್, ಮಲ್ಲಿಕಾರ್ಜುನ ಇಟಕಾರ್, ಪ್ರಶಾಂತ, ಕಾರ್ತಿಕ ಧನ್ನಿ, ಶ್ರೀಶೈಲ್ ಧನ್ನಿ ಸೇರಿದಂತೆ ಗ್ರಾಮದಸನೇಕರು ಭಾಗವಹಿಸಿದ್ದರು.
Comments are closed.