Shubhashaya News

ಮುನ್ನಹಳ್ಳಿ ಶಾಂತಲಿಂಗೇಶ್ವರ ಮಠ ಲೋಕಾರ್ಪಣೆ

“ಮಠಾಧೀಶರು, ರಾಜಕಾರಣಿಗಳು ಮಿತಿಯಲ್ಲಿ ನಡೆದುಕೊಳ್ಳಲಿ”

ಆಳಂದ: ಮುನ್ನಹಳ್ಳಿ ಶಾಂತಲಿಂಗೇಶ್ವರ ಮಠದ ನೂತನ ಕಟ್ಟಡ ಲೋಕಾರ್ಪಣೆ ಸಮಾರಂಭದಲ್ಲಿ ಉಜ್ಜಯನಿ ಜಗದ್ಗುರುಗಳು ಆಶೀರ್ವಚನ ನೀಡಿದು. ಕಂಡಗಂಚಿ, ಚಿಣಮಗೇರಾ ಶ್ರೀಗಳಿದ್ದರು.

ಆಳಂದ: “ಇಂದಿನ ಸಮಾಜದಲ್ಲಿ ಧರ್ಮಗುರುಗಳು, ಮಠಾಧೀಶರು ಮತ್ತು ರಾಜಕಾರಣಿಗಳು ತಮ್ಮ ಇತಿಮಿತಿಯನ್ನು ಮೀರುತ್ತಿದ್ದಾರೆ. ಇದು ಒಳ್ಳೆಯದಿಲ್ಲ. ಪ್ರತಿಯೊಬ್ಬರೂ ತಮ್ಮ ಧರ್ಮ, ಕರ್ತವ್ಯ ಮತ್ತು ನಿಯಮಾನುಸಾರ ನಡೆದುಕೊಳ್ಳಬೇಕು ಎಂದು ಉಜ್ಜಯಿನಿಯ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಕೇಂದ್ರ ಶಿವಾಚಾರ್ಯ ಭಗವತ್ಪಾದರು ತಮ್ಮ ಆಶೀರ್ವಚನ ನೀಡುವ ವೇಳೆ ತೀಕ್ಷ್ಣ ಸಂದೇಶವನ್ನು ನೀಡಿದರು.
ತಾಲೂಕಿನ ಮುನ್ನಹಳ್ಳಿ ಗ್ರಾಮದ ಶ್ರೀ ಶಾಂತಲಿಂಗೇಶ್ವರ ಮಠದ ನೂತನ ಕಟ್ಟಡ ಲೋಕಾರ್ಪಣೆ, ಮೂರ್ತಿ ಪ್ರತಿμÁ್ಠಪನೆ ಮತ್ತು ಕಳಸಾರೋಹಣ ಮಹೋತ್ಸವ ಹಾಗೂ ಭಕ್ತಾದಿಗಳು ಕೈಗೊಂಡ ತಮ್ಮ ಅಡ್ಡಪಲ್ಲಕ್ಕಿ ಉತ್ಸವ ಸಮಾರಂಭದ ದಿವ್ಯ ಸಾನ್ನಧ್ಯ ವಹಿಸಿ ಅವರು ಮಾತನಾಡಿದರು.
ಮಠಾಧೀಶರು ಭಕ್ತರಲ್ಲಿ ಭಕ್ತಿ, ಸಂಸ್ಕøತಿ ಮತ್ತು ನೀತಿ ಬೋಧಿಸಬೇಕು; ಗುರುವಾದವನ್ನು ಸಮಾಜಕ್ಕಾಗಿ ಬದುಕು ಮೀಸಲಿಡಬೇಕು. ರಾಜಕಾರಣಗಳ ಬಾಗುವುದಲ್ಲ. ಬಡವನಾಗಲಿ ಶ್ರೀಮಂತನಿರಲ್ಲಿ ಕೊಟ್ಟರು ಸರಿ ಕೊಡದಿದ್ದರು ಸರಿ ಸರ್ವರನ್ನು ಸಮಾನಾಗಿ ಕಾಣುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ರಾಜಕಾರಣಿಗಳು ಸಹ ಜನಸೇವೆಗೆ ಸಮರ್ಪಿತರಾಗಬೇಕು. ಅಹಂಕಾರ, ಅಧಿಕಾರದ ದುರುಪಯೋಗದಿಂದ ಮಠ ಅಥವಾ ರಾಜಕೀಯ ಕಳಂಕಿತರಾಗಬಾರದು” ಎಂದು ಅವರು ಖಡಕ್ ಎಚ್ಚರಿಕೆ ನೀಡಿದರು.
“ಮಠಗಳು ಧರ್ಮಶಿಕ್ಷಣದ ಕೇಂದ್ರವಾಗಬೇಕು, ರಾಜಕಾರಣಿಗಳು ಜನರ ವಿಶ್ವಾಸದ ದಾರಿಯಾಗಬೇಕು. ಧರ್ಮವನ್ನು ವ್ಯಾಪಾರ, ರಾಜಕಾರಣವನ್ನು ಸ್ವಾರ್ಥದ ಸಾಧನ ಮಾಡುವವರು ಸಮಾಜದ ಶತ್ರುಗಳು. ಈ ಪ್ರವೃತ್ತಿ ಬದಲಾಗದಿದ್ದರೆ ಮಠಗಳಿಗೂ, ರಾಜಕಾರಣಕ್ಕೂ ಭವಿಷ್ಯ ಕತ್ತಲೆಯಲ್ಲಿದೆ” ಎಂದು ಗಂಭೀರ ಎಚ್ಚರಿಕೆ ನೀಡಿದರು.
ಮುನ್ನೊಹಳ್ಳಿಯ ಶಾಂತಲಿಂಗೇಶ್ವರ ಮಠದ ನೂತನ ಕಟ್ಟಡ ಗೋಪುರ ಹಾಗೂ ಕಳಸಾರೋಹಣ ಏಕಕಾಲಕ್ಕೆ ನೆರವೇರಿದ್ದು, ಐತಿಹಾಸಿಕ ಕಾರ್ಯಕವಾಗಿದೆ. ನಿಮ್ಮೆಲ್ಲರಿಗೂ ಅನಂತ ಸನ್ಮಂಗಲಗಳನ್ನು ಅನುಗ್ರಹಿಸಲಿ, ಒಳ್ಳೆಯ ಬೆಳೆಯಾಗಲಿ ಬೆಳಗೆ ತಕ್ಕ ಮಾರುಕಟ್ಟೆ ಬೆಲೆ ದೊರೆತು. ಈ ದೇಶದ ಬೆನ್ನೆಲುಬು ಅನ್ನಿಸಿಕೊಂಡಂತಹ ಅನ್ನದಾತ ರೈತನ ಬದುಕು ಉತ್ತಮಗೊಳ್ಳಲಿ ವ್ಯವಹಾರ ವ್ಯಾಪಾರ ಉದ್ಯೋಗಗಳು ಅಭಿವೃದ್ಧಿಯಾಗಲಿ ವಧು ವರರ ಕಲ್ಯಾಣವಾಗಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ದಂಪತಿಗಳಿಗೆ ಸರಕಾರವಂತ ಧರ್ಮ ನಿಷ್ಠ ಕಾರ್ಯಗಳು ಸಾಗಲಿ, ಗ್ರಾಮದ ಪಟ್ಟಣದ ರಾಜ್ಯದ ದೇಶದಲ್ಲಿ ಜನರು ಜಾಸ್ತಿ ಅವರು ಜನಾಂಗದವರು ಧರ್ಮದವರು ಅನ್ನೋದಕ್ಕಿಂತ ಬದಲಾಗಿ ನಾವೆಲ್ಲರೂ ಈ ದೇಶದ ಸತ್ವಜೆಗಳು ಭಾರತ ಮಾತೆ ಮಕ್ಕಳು ನಾವೆಯಲ್ಲರೂ ಭಾರತೀಯರು ಅನ್ನುವಂತ ಸಮನ್ವಯ ಬಾಬಾ ಎಲ್ಲರಲ್ಲೂ ಒಡಹುಡುವಂತೆÀ ಆಗಲಿ ಎಂದು ಹೇಳಿದರು.
ಯುವಕ ಯುವತಿಯರು ಲಹು ಜಿಹಾದ್‍ನಂತ ಕೆಟ್ಟದಕ್ಕೆ ಆಸ್ಪದ ನೀಡದೆ, ತಂದೆ, ತಾಯಿಗಳ ಮಾತಿನಂತೆ ನಡೆದು ಉತ್ತಮ ಬದುಕನ್ನು ಕಟ್ಟಿಕ್ಟೊಂಡು ಸಮಾಜದ ಸ್ವಾಸ್ಥ್ಯವನ್ನು ಗಟ್ಟಿಗೊಳಿಸಬೇಕು ಎಂದು ಸಲಹೆ ನೀಡಿದರು.
ಶಾಂತಲಿಂಗೇಶ್ವರ ಮಠವು ಭಕ್ತರಿಗೆ ಧಾರ್ಮಿಕ ಜಾಗೃತಿ, ನೀತಿವಂತ ಜೀವನ ಹಾಗೂ ಸಮಾಜದ ಶಾಂತಿಯ ಸಂಕೇತವಾಗಿದೆ. ಇಂತಹ ಮಠಗಳು ಜನರಲ್ಲಿ ಭಕ್ತಿ, ತಾಳ್ಮೆ ಮತ್ತು ಸಂಸ್ಕøತಿಯನ್ನು ಬೋಧಿಸುತ್ತವೆ” ಎಂದು ಜಗದ್ಗುರು ಆಶೀರ್ವಚನ ನೀಡಿದರು.
ಶ್ರೀಮಠದಲ್ಲಿ ಶಾಂತಲಿಂಗೇಶ್ವರ ಪುರಾಣವನ್ನು ಐನಾಪೂರ ಮಲ್ಲಯ್ಯಾ ಶಾಸ್ತ್ರಿಗಳು ಮಂಗಲಗೊಳಿಸಿದರು ಶಿವಶರಣಪ್ಪ ಪೂಜಾರಿ, ಮಹೇಶಕುಮಾರ ನರಿಬೋ¼ ಸಂಗೀತ ನಡೆಸಿದರು.
ಈ ಸಂದರ್ಭದಲ್ಲಿ ಕಡಗಂಚಿ ಸಂಸ್ಥಾನ ಮಠದ ಶ್ರೀ ವೀರಭದ್ರ ಶಿವಾಚಾರ್ಯರು, ಚಿಣಮಗೇರಾ ಮಹಾಂತೇಶ್ವರ ಮಠದ ಶ್ರೀ ಸಿದ್ದರಾಮ ಶಿವಾಚಾರ್ಯರು, ಆಳಂದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು, ಶ್ರೀ ಶಾಂತಲಿಂಗ ಶಿವಾಚಾರ್ಯರು, ಬಂಗರಗಾ ಶ್ರೀ, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಜೆಡಿಎಸ್ ನಾಯಕಿ ಮಹೇಶ್ವರಿ ಎಸ್. ವಾಲಿ, ಪಂಚ ಗ್ಯಾರೆಂಟಿ ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ, ಬಿಜೆಪಿ ಮುಖಂಡ ಆನಂದ ಪಾಟೀಲ, ಜಿಪಂ ಎಇಇ ಸಂಗಮೇಶ ಬಿರಾದಾರ, ಬಸವರಾಜ ವಾಲಿ, ಬಾಬುರಾವ್ ಫುಲಾರ ಸೇರಿದಂತೆ ಗಣ್ಯರನ್ನು ವೇದಿಕೆಯಲ್ಲಿ ಶ್ರೀಗಳಿಂದಾ ಆಶೀರ್ವದಿಸಲಾಯಿತು.
ಗ್ರಾಮದ ಹಿರಿಯ ಮುಖಂಡ ಮಾರುತಿರಾವ್ ಕುಲಕರ್ಣಿ, ಶ್ರೀಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ವಿಶ್ವನಾಥ ಕಮಾಜಿ, ಉಪಾಧ್ಯಕ್ಷ ಭವಾನಿ ಜಮಾದಾರ, ಕಾರ್ಯದರ್ಶಿ ಚದಪ್ಪ ಬೆಳ್ಳೆ, ಮುಖಂಡ ಶಂಭುಲಿಂಗಯ್ಯಾ ಹಿರೇಮಠ, ರೇವಣಪ್ಪ ಜಿ. ಬಿರಾದಾರ, ಶಿವಶರಣಪ್ಪ ಬುಜುರ್ಕೆ, ವಿಠ್ಠಲ ದೇಗಾಂವ, ಪ್ರಲ್ಹಾದ ಜಮಾದಾರ, ಮಲ್ಲಯ್ಯಾ ಗುತ್ತೇದಾರ, ಶಾಂತಯ್ಯಾ ಸ್ವಾಮಿ, ಗುಂಡೇರಾವ್ ಇಂಗಳೆ, ಸಿದ್ಧು ವೇದಶೆಟ್ಟಿ, ನಂದಕುಮಾರ ಬುಜುರ್ಕೆ,ಶಿವುಪುಜಪ್ಪ ಬಿರಾದಾರ, ಭೀಮಾಶಂಕರ ಸಿರಗೂರೆ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಗ್ರಾಮ ಸೇರಿದಂತೆ ನೆರೆಹೊರೆಯ ಗ್ರಾಮಗಳಿಂದ ನೂರಾರು ಭಕ್ತಾದಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

Comments are closed.

Don`t copy text!