ಆಳಂದ: ‘ಮನೆ ಮನಗಳಲ್ಲಿ’ ಶ್ರೀ ಮೌನೇಶ್ವರರ ವಚನಗಳ ಚಿಂತನ–ಮಂಥನ ಕಾರ್ಯಕ್ರಮದಲ್ಲಿ ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಡಾ. ಮೋನಪ್ಪ ಸುತಾರ, ಅಪ್ಪಾಸಾಬ ತೀರ್ಥೆ, ದೇವಿಂದ್ರಪ್ಪ ಮಾಸ್ಟರ್ ಇತರರು ಇದ್ದರು.
ಆಳಂದ: “ಶ್ರೀ ಮೌನೇಶ್ವರರ ಲಭ್ಯವಿರುವ 800ಕ್ಕೂ ಹೆಚ್ಚು ವಚನಗಳಲ್ಲಿ ಬಸವಣ್ಣ ಎಂಬ ಅಂಕಿತನಾಮವಿದೆ. 12ನೇ ಶತಮಾನದ ವಿಶ್ವಗುರು ಬಸವಣ್ಣನವರ ಆದರ್ಶಗಳನ್ನು ಅನುಸರಿಸಿ 16ನೇ ಶತಮಾನದಲ್ಲಿ ಮೌನೇಶ್ವರರು ಬರೆದ ವಚನಗಳು ಬಸವ ತತ್ವಕ್ಕೆ ಸಾಮೀಪ್ಯ ಹೊಂದಿವೆ. ಹೀಗಾಗಿ ಬಸವಣ್ಣನವರನ್ನು ವಿಶ್ವಗುರು ಎಂದರೆ, ಮೌನೇಶ್ವರರನ್ನು ಜಗದ್ಗುರು ಎಂದೇ ಕರೆಯುವುದು ರೂಢಿಯಾಗಿದೆ,” ಎಂದು ಸಂಬುದ್ಧ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ. ಮೋನಪ್ಪ ಎಲ್. ಸುತಾರ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದ ಸಂಗೋಳಗಿ (ಜಿ), ಪುನರವಸತಿಯಲ್ಲಿ ಮಾಜಿ ಸೈನಿಕ ಸಿದ್ದಲಿಂಗ ಬಿ. ಸುತಾರ ಅವರ ನಿವಾಸದಲ್ಲಿ ಹಮ್ಮಿಕೊಂಡ ‘ಮನೆ ಮನಗಳಲ್ಲಿ’ ಶ್ರೀ ಮೌನೇಶ್ವರರ ವಚನಗಳ ಚಿಂತನ–ಮಂಥನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
“ಸುರಪುರದಲ್ಲಿ ಆದ್ಯ ವಚನಕಾರ ಜೇಡರ ದಾಸಿಮಯ್ಯನವರ ಜನಿಸಿದ ನೆಲದಲ್ಲೇ ಗೋನಾಳದಲ್ಲಿ ಶ್ರೀ ಮೌನೇಶ್ವರರು ಜನಿಸಿದ್ದು, ಅದೇ ವಚನ ಕ್ರಾಂತಿಯ ತವರೂರಾಗಿದೆ. ಮೌನೇಶ್ವರರು ಸೇರಿದಂತೆ ಶರಣ ಸಂತರ ವಚನಗಳು ಕೇವಲ ಪದಗಳಲ್ಲ, ಅವು ಜೀವನದ ದಿಕ್ಕು ತೋರಿಸುವ ದಾರಿದೀಪಗಳು. ಭಾವೈಕ್ಯತೆ ಸಾಮರಸ್ಯ ಸಮಾನತೆಯ ಈ ತತ್ವಗಳನ್ನು ಅಳವಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು,” ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಅಫಜಲಪೂರ ಮೂರ್ಜಾವದೀಶ್ವರ ಮಠದ ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮೌನೇಶ್ವರರು ಕೇವಲ ಆದ್ಯಾತ್ಮೀಕ ಪುರುಷರನ್ನಾಗಿ ನೋಡದೇ ಅವರು ಸಾಮಾಜಿಕ ಮೌಲ್ಯಗಳು ಜೀವನ ಪದ್ಧತಿ ಬರೆದ ವಚನಗಳನ್ನು ಪ್ರತಿಯೊಬ್ಬರು ಮನೆ, ಮನೆಗಳಲ್ಲಿ ಚಿಂತನೆ ನಡೆಯಲಿ, ಅವರು ಹಾಕಿಕೊಟ್ಟ ಪರಂಪರೆಯನ್ನು ಮುನ್ನೆಡೆಸಿ ಶಿಕ್ಷಣ, ಸಂಘಟನೆ ಸಂಸ್ಕಾರವಂತರಾಗಿ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸ ನೀಡಿದ ಬಾಬುರಾವ್ ಸುತಾರ ಅವರು, ಮೌನೇಶ್ವರರ ವಚನಗಳಲ್ಲಿ ಭಾವೈಕ್ಯ ಮತ್ತು ಅನುಭಾವದ ತತ್ವಗಳು ಒಳಗೊಂಡಿವೆ. ಪ್ರತಿಯೊಬ್ಬರು ವಚನಗಳ ಅಧ್ಯಯನದಲ್ಲಿ ತೊಡಗಬೇಕು ಎಂದು ಹೇಳಿದರು.
ವಿಶ್ವಕರ್ಮ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ವಿಶ್ವಕರ್ಮ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪ್ಪಾಸಾಹೇಬ ತೀರ್ಥೆ ಮಾತನಾಡಿದರು.
ಈ ಸಂದರ್ಭದಲ್ಲಿ ಶಿವಲಿಂಗಪ್ಪ ಮಂಟಗಿ, ದೇವಿಂದ್ರಪ್ಪ ಪೆÇೀದ್ದಾರ, ಬಸವಣ್ಣಪ್ಪ ಸುತಾರ, ಮನೋಹರ ಪೆÇೀದ್ದಾರ, ಬಸವರಾಜ ಸುತಾರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶ್ರೀಕಾಂತ ಸುತಾರ ಸ್ವಾಗತಿಸಿ, ರಾಮಣ್ಣ ಸುತಾರ ನಿರೂಪಿಸಿದರು, ಶಿವಾನಂದ ಸುತಾರ ವಂದಿಸಿದರು.
Comments are closed.