Shubhashaya News

ಉಜ್ಜಯನಿಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸೆ.1ಕ್ಕೆ 

ಮುನ್ನಹಳ್ಳಿ ಶಾಂತಲಿಂಗೇಶ್ವರ ಮಠದ ಕಟ್ಟಡ ಲೋಕಾರ್ಪಣೆ

ಆಳಂದ: ಮುನ್ನಹಳ್ಳಿಯ ಶ್ರೀ ಶಾಂತಲಿಂಗೇಶ್ವರ ಮಠದ ಧಾರ್ಮಿಕ ಸಮಾರಂಭದ ವಾಲ್‍ಪೋಸ್ಟ್‍ರ ಗ್ರಾಪಂ ಅಧ್ಯಕ್ಷ ರಾಜುಕುಮಾರ ಡಿ. ಚವ್ಹಾಣ ಬಿಡುಗಡೆಗೊಳಿಸಿದರು. ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ಕಮಾಜಿ, ಮಾರುತಿರಾವ್ ಕುಲಕರ್ಣಿ ಇತರರು ಇದ್ದರು.

 

ಆಳಂದ: ಸೆ.1ರಂದು ತಾಲೂಕಿನ ಮುನ್ನಹಳ್ಳಿ ಗ್ರಾಮದ ಶ್ರೀ ಶಾಂತಲಿಂಗೇಶ್ವರ ಮಠದ ನೂತನ ಕಟ್ಟಡದ ಲೋಕಾರ್ಪಣೆ, ಶಾಂತಲಿಂಗೇಶ್ವರ ಮೂರ್ತಿಯ ಪ್ರಾಣ ಪ್ರತಿμÁ್ಠಪನೆ ಹಾಗೂ ಕಳಸಾರೋಹಣ ಸೇರಿದಂತೆ ಧಾರ್ಮಿಕ ಸಮಾರಂಭವು ಉಜ್ಜಯಿನಿಯ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ನೆರವೇರಲಿವೆ.

ಈ ಕುರಿತು ಶುಕ್ರವಾರ ಪಟ್ಟಣದಲ್ಲಿ ಶ್ರೀಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ವಿಶ್ವನಾಥ ಕಮಾಜಿ ಹಾಗೂ ಹಿರಿಯ ಮುಖಂಡ ಮಾರುತಿರಾವ್ ಕುಲಕರ್ಣಿ ಅವರ ಸಮ್ಮುಖದಲ್ಲಿ ಸಮಾರಂಭದ ವಾಲ್‍ಪೋಸ್ಟರ್ ಬಿಡುಗಡೆ ಕೈಗೊಂಡು ಮುಖಂಡರು ಜಂಟಿಯಾಗಿ ಮಾಹಿತಿ ನೀಡಿದರು.

ಈ ಸಮಾರಂಭದ ನಿಮಿತ್ತವಾಗಿ ಶ್ರೀಮಠದಲ್ಲಿ ಅ. 22ರಿಂದ 31 ವರೆಗೆ ವರೆಗೆ ಪ್ರತಿದಿನ ಸಂಜೆ 7:30ಗಂಟೆಗೆÉ ಶ್ರೀ ಶಾಂತಲಿಂಗೇಶ್ವರ ಪುರಾಣವನ್ನು ಐನಾಪೂರ ಮಲ್ಲಯ್ಯಾ ಶಾಸ್ತ್ರಿಗಳಿಂದ ಜರುಗಿವುದು. ಪುರಾಣಕ್ಕೆ ಗವಾಯಿ ಶರಣಕುಮಾರ ಹಿತ್ತಲಶಿರೂರ, ಮಹೇಶಕುಮಾರ ನರಿಬೋಳ ಹಾಗೂ ತಬಲಾ ಅಶೋಕ ಆಳಂದ, ಮಲ್ಲಿಕಾರ್ಜುನ ಶಹಾಪೂರ ನಡೆಸಿಕೊಡುವರು.  ಸಂಚಾಲನೆಯನ್ನು ಶಂಭುಲಿಂಗಯ್ಯಾ ಎಸ್. ಹಿರೇಮಠ ಅವರು ನಡೆಸಿಕೊಡಲಿದ್ದಾರೆ ಎಂದು ಹೇಳಿದರು.

ಸೆ.1ರಂದು ಬೆಳಗಿನ ಜಾವ ಮೂರ್ತಿ ಪ್ರತಿಷ್ಠಾಪನೆ ವಿಶೇಷ ಪೂಜೆ ತಾಯಂದಿರಿಗೆ ಉಡು ತುಂಬುವ ಕಾರ್ಯಕ್ರಮದ ಬಳಿಕ ಪ್ರಮುಖ ರಸ್ತೆಗಳಲ್ಲಿ ಉಜ್ಜಯನಿಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ವಾದ್ಯ ವೈಭವಗಳೊಂದಿಗೆ ನೆರವೇರಲಿದೆ ಎಂದು ಹೇಳಿದರು.

ಬೆಳಗಿನ 11:00ಗಂಟೆಗೆ ನಡೆಯುವ ಧಾರ್ಮಿಕ ಸಮಾರಂಭದಲ್ಲಿ ಜಗದ್ಗುರುಗಳಿಗೆ ನಿರ್ಮಲಾ ಶಿವಶರಣಪ್ಪ ಬುಜುರ್ಕೆ ಅವರು ತುಲಾಬಾರ ಸೇವೆ ನೆರವೇರಿಸುವರು.

ಈ ಸಮಾರಂಭದಲ್ಲಿ ಕಡಗಂಚಿ ಸಂಸ್ಥಾನ ಕಟ್ಟಿ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಚಿಣಮಗೇರಾ ಮಹಾಂತೇಶ್ವರ ಮಠದ ಶ್ರೀ ಸಿದ್ದರಾಮ ಶಿವಾಚಾರ್ಯರು, ಜಿಡಗಾ, ಮುಗಳಖೋಡ ಮಠದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಬಡದಾಳ ತೇರಿನ ಮಠದ ಡಾ. ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು, ಚಿಣಮಗೇರಾ ಮಠದ ವೀರಮಂತ ಶಿವಾಚಾರ್ಯರು, ಆಳಂದ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು, ಕಿಣ್ಣಿಸುಲ್ತಾನ ಗ್ರಾಮದ ಶಾಂತೇಶ್ವರ ಮಠದ ಶ್ರೀ ಶಾಂತಲಿಂಗ ಶಿವಾಚಾರ್ಯರು, ಮುನ್ನಹ, ಕಡಗಂಚಿಯ ಶ್ರೀ ಕರಬಸಯ್ಯ ಶಿವಾಚಾರ್ಯರು ಸಮ್ಮುಖದಲ್ಲಿ ಸೇರಿದಂತೆ ಅನೇಕ ಮಠಾಧೀಶರ ಆಗಮನದೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರು ಮತ್ತು ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ್ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸುಭಾಸ ಆರ್ ಗುತ್ತೇದಾರ್, ಸಂಸದ ಸಾಗರ್ ಖಂಡ್ರೆ, ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕ ಶಾಸಕ ಅಲ್ಲಮಪ್ರಭು ಪಾಟೀಲ್, ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೊಡ್, ಎಂಎಲ್ಸಿ ಬಿ.ಜಿ. ಪಾಟೀಲ, ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ, ಜೆಡಿಎಸ್ ನಾಯಕಿ ಮಹೇಶ್ವರಿ ಎಸ್. ವಾಲಿ, ಕೆಎಂಎಫ್ ಅಧ್ಯಕ್ಷ ಆರ್ ಕೆ ಪಾಟೀಲ್, ಜಿಪಂ ಮಾಜಿ ಉಪಾಧ್ಯಕ್ಷ ಹμರ್Áನಂದ್ ಎಸ್. ಗುತ್ತೇದಾರ್, ಬಿಜೆಪಿ ಮುಖಂಡ ಹಣಮಂತರಾಯ ಮಲಾಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ್ ಡಿ. ಚವ್ಹಾಣ್ ಸೇರಿದಂತೆ ಅನೇಕ ರಾಜಕೀಯ ಗುರುಣರು, ಹರಗುರು ಚರಮೂರ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆಹೊರೆಯ ಗ್ರಾಮಸ್ಥರು ಪಾಳ್ಗೊಂಡು ಜಗದ್ಗುರುಗಳ ಹಾಗೂ ಶ್ರೀಮಠದ ಶಾಂತಲಿಂಗೇಶ್ವರ ದರ್ಶನಾಶೀರ್ವಾದ ಪಡೆದುಕೊಳ್ಳಬೇಕು ಎಂದು ಅವರ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ರಾಜಕುಮಾರ ಡಿ. ಚವ್ಹಾಣ, ಶಾಂತಲಿಂಗೇಶ್ವರ ಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ವಿಶ್ವನಾಥ ಕಮಾಜಿ,ಉಪಾಧ್ಯಕ್ಷ ಭವಾನಿ ಜಮಾದಾರ, ಕಾರ್ಯದರ್ಶಿ ಚದಪ್ಪ ಬೆಳ್ಳೆ, ಮುಖಂಡ ಶಂಭುಲಿಂಗಯ್ಯಾ ಹಿರೇಮಠ, ರೇವಣಪ್ಪ ಜಿ. ಬಿರಾದಾರ, ಶಿವಶರಣಪ್ಪ ಬುಜುರ್ಕೆ, ವಿಠ್ಠಲ ದೇಗಾಂವ, ಪ್ರಲ್ಹಾದ ಜಮಾದಾರ, ಮಲ್ಲಯ್ಯಾ ಗುತ್ತೇದಾರ, ಶಾಂತಯ್ಯಾ ಸ್ವಾಮಿ, ಗುಂಡೇರಾವ್ ಇಂಗಳೆ, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಸಿದ್ಧು ವೇದಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Comments are closed.

Don`t copy text!