ಆಳಂದ: ಪಟ್ಟಣದಲ್ಲಿ ನಡೆದ ದಸರಾ ಕ್ರೀಡಾ ಕೂಟದಲ್ಲಿ ಕ್ರೀಡಾ ಪಟುಗಳಿಗೆ ದೈಹಿಕ ಶಿಕ್ಷಣದ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ ಅವರು ಪ್ರಮಾಣ ಪತ್ರ ನೀಡಿ ಗೌರವಿಸಿದರು. ವ್ಯವಸ್ಥಾಪಕ ಸಂತೋಷ ರಾಠೋಡ, ಕಲ್ಲಪ್ಪ ಶೃಂಗೇರಿ, ದೈಹಿಕ ಶಿಕ್ಷಣದ ಶಿಕ್ಷಕ ಮಹಾದೇವ ಗುಣಕಿ ಇತರರು ಇದ್ದರು.
ಆಳಂದ: ಕ್ರೀಡೆಗಳು ಯುವಜನರಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಬೆಳೆಸುವುದರ ಜೊತೆಗೆ ಒಗ್ಗಟ್ಟು, ಶಿಸ್ತು ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ತರುತ್ತವೆ. ಈ ದಸರಾ ಕ್ರೀಡಾಕೂಟವು ತಾಲೂಕಿನ ಯುವ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇರುವ ಉತ್ತಮ ವೇದಿಕೆಯ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಾಲೂಕ ದೈಹಿಕ ಶಿಕ್ಷಣದ ಶಿಕ್ಷಣಾಧಿಕಾರಿ ಅರವಿಂದ್ ಭಾಸಗಿ ಅವರು ಕರೆ ನೀಡಿದರು.
ಪಟ್ಟಣದ ಮಟಕಿ ರಸ್ತೆಯಲ್ಲಿರುವ ತಾಲೂಕ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಲಬುರಗಿ ಆಶ್ರಯದಲ್ಲಿ 2025-26ನೇ ಸಾಲಿನ ತಾಲೂಕ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ದಸರಾ ಕ್ರೀಡಾಕೂಟವು ಆಳಂದ ತಾಲೂಕಿನ ಯುವ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮ ಛಾಪನ್ನು ಮೂಡಿಸಲು ಒಂದು ಅಮೂಲ್ಯ ವೇದಿಕೆಯಾಗಿದೆ,” ಎಂದು ತಿಳಿಸಿದರು.
“ನಮ್ಮ ಯುವ ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಸೌಕರ್ಯಗಳನ್ನು ಒದಗಿಸಿದರೆ, ಅವರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಬಲ್ಲರು,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಕ್ರೀಡೆಗಳು ಯುವಕರಿಗೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಧೈರ್ಯ ಮತ್ತು ಸಹನೆಯನ್ನು ಕಲಿಸುತ್ತವೆ. ಈ ಕಾರ್ಯಕ್ರಮದ ಮೂಲಕ ಆಳಂದ ತಾಲೂಕಿನ ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಂಡು ಭವಿಷ್ಯದಲ್ಲಿ ದೊಡ್ಡ ಸಾಧನೆಗಳನ್ನು ಮಾಡಲು ಪ್ರೇರಣೆ ಪಡೆಯಬೇಕು. ಜಿಲ್ಲಾ ಆಡಳಿತ ಮತ್ತು ಕ್ರೀಡಾ ಇಲಾಖೆಯು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಬೆಳಕು ಚೆಲ್ಲುವ ಕಾರ್ಯ ಮಾಡುತ್ತಿದೆ,” ಎಂದು ಹೇಳಿದರು.
ಈ ಸಂದರ್ಭಧಲ್ಲಿ ಇಲಾಖೆಯ ಕ್ರೀಡಾ ಸಂಘಟಕ ವ್ಯವಸ್ಥಾಪಕ ಸಂತೋಷ ರಾಠೋಡ, ಕಲ್ಲಪ್ಪ ಶೃಂಗೇರಿ, ದೈಹಿಕ ಶಿಕ್ಷಣದ ಶಿಕ್ಷಕ ಮಹಾದೇವ ಗುಣಕಿ, ಸಂಗೀತಾ ಪಿ.ಜಿ, ಸುವರ್ಣ ಮಂಟಗಿ, ನೂರಜಹಾ, ಬಿಸಮಿಲ್ಲಾ, ಅಕ್ಕಮಹಾದೇವಿ, ಶಂಕಲಿಂಗ, ಶರಣು ವಾಲಿಕರ, ಸುರೇಶ ಕೌಲಗಿ, ವಿರೂಪಾಕ್ಷಿ ಹಿರೇಮಠ, ಮನೋಹರ ರೋಕೆ, ಅಶೋಕ ಬೋಧನ, ಯಶ್ವಂತ ಜಮಶೆಟ್ಟಿ, ರಾಜಕುಮಾರ ಕಲಶಟ್ಟಿ, ಶಾಂತಪ್ಪ ನೆಲ್ಲಗಿ ಸೇರಿ ಹಾಜರಿದ್ದು ಕ್ರೀಡಾಕೂಟವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಓಟ, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, ಕಬಡ್ಡಿ, ವಾಲಿಬಾಲ್, ಖೋ-ಖೋ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಘ, ಸಂಸ್ಥೆಗಳಿಂದ ಕ್ರೀಡಾ ತಂಡಗಳು ಭಾಗವಹಿ ಕ್ರೀಡಾ ಪ್ರದರ್ಶನ ನೀಡಿದರು. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿಜೇತರಿಗೆ ಇಲಾಖೆಯ ಪ್ರಮಾಣ ಪತ್ರ ನೀಡಲಾಯಿತು.
Comments are closed.