Shubhashaya News

ಕಲಬುರಗಿಯಲ್ಲಿ “ಭಾರತೀಯ ಮಾದರಿಯ ಪಠ್ಯಕ್ರಮ ವಿನ್ಯಾಸ” ರಾಷ್ಟ್ರೀಯ ವಿಚಾರ ಸಂಕಿರಣ ನಾಳೆ

ಆಳಂದ: ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತ ಕಲಬುರಗಿ ಜಿಲ್ಲೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಶೆಟ್ಟಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ “ಭಾರತೀಯ ಮಾದರಿಯ ಪಠ್ಯಕ್ರಮ ವಿನ್ಯಾಸ” ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಗಸ್ಟ್ 21, 2025ರಂದು ಬೆಳಿಗ್ಗೆ 10:00 ಗಂಟೆಗೆ ಕಲಬುರಗಿಯ ಶೆಟ್ಟಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಆರ್. ಶಂಕರಾನಂದ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ವಿಜಯಾ ಕೋರಿಶೆಟ್ಟಿ, ಭಾರತೀಯ ಶಿಕ್ಷಣ ಮಂಡಲದ ಕಲಬುರಗಿ ಜಿಲ್ಲಾ ಅಧ್ಯಕ್ಷ ಬಸವರಾಜ ದೇಶಮುಖ ಹಾಗೂ ಶೆಟ್ಟಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷ ಉದಯಶಂಕರ ಶೆಟ್ಟಿ ಗೌರವ ಅತಿಥಿಗಳಾಗಿ ಹಾಜರಾಗಲಿದ್ದಾರೆ.

ಕಾರ್ಯಕ್ರಮಕ್ಕೆ ಭಾರತೀಯ ಶಿಕ್ಷಣ ಮಂಡಲದ ಉತ್ತರ ಪ್ರಾಂತದ ಅಧ್ಯಕ್ಷ ಪೆÇ್ರ. ಬಸವರಾಜ ಅನಾಮಿ ಅಧ್ಯಕ್ಷತೆ ವಹಿಸಲಿದ್ದು, ಪೆÇ್ರ. ನಾರಾಯಣ ಪ್ರಸಾದ್ (ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ), ಪೆÇ್ರ. ಅಜಯ್ ರಾವುಲ್ (ಐಐಟಿ ರೂಪಾರ್), ಡಾ. ಬಸವರಾಜ ಡೋಣೂರ, ಡಾ. ಕಲ್ಯಾಣರಾವ್ ಪಾಟೀಲ ಮತ್ತು ಡಾ. ಜಿ. ಆರ್. ಅಂಗಡಿ ಉಪನ್ಯಾಸಗಳನ್ನು ನೀಡಲಿದ್ದಾರೆ.

 

ಸಮಾರೋಪ ಸಮಾರಂಭದಲ್ಲಿ ಬಿ. ಆರ್. ಶಂಕರಾನಂದ ಭಾಷಣ ಮಾಡುವರು. ಅಂತಿಮ ಹಂತದಲ್ಲಿ ಉದಯಶಂಕರ ಶೆಟ್ಟಿ, ಬಸವರಾಜ ಗಾದಗೆ ಮತ್ತು ಸತೀಶ ಕೈಲಾಸ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟನಾ ಕಾರ್ಯದರ್ಶಿ ಪೆÇ್ರ. ಆರ್. ಎಸ್. ಹೆಗಡಿ ತಿಳಿಸಿದ್ದಾರೆ.

Comments are closed.

Don`t copy text!