ಆಳಂದ: ತಾಲೂಕಿನಲ್ಲಿ ಇತ್ತಿಚೆಗೆ ಸುರಿದ ಭಾರಿ ಮಳೆಯಿಂದ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯುಂಟಾಗಿದ್ದು, ಕೂಡಲೇ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಕರವೇ ಹೋಬಳಿ ಅಧ್ಯಕ್ಷ ಬಸವರಾಜ ಯಳಸಂಗಿ ಆಗ್ರಹಿಸಿದ್ದಾರೆ.
ಈ ಕುರಿತು ಸಿಎಂ ಅವರಿಗೆ ಲಿಖಿತ ಪತ್ರ ಬರೆದಿರುವ ಅವರು, ಉದ್ದು, ಹೆಸರು, ಸೋಯಾಬೀನ್, ತೋಗರಿ, ಬಾಳೆ ಸೇರಿದಂತೆ ಇನ್ನಿತರ ಪ್ರಮುಖ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ಸರ್ಕಾರ ಕೂಡಲೇ ಎಕರೆಗೆ 20 ಸಾವಿರ ಪರಿಹಾರ ಒದಗಿಸುವುದಲ್ಲದೇ ರೈತರಿಗೆ ಪುನರ್ ಬಿತ್ತನೆಗೆ ಭೀಜ ಗೊಬ್ಬರ ಉಚಿತವಾಗಿ ವಿತರಿಸಬೇಕು ಎಂದಿದ್ದಾರೆ.
Next Post
Comments are closed.