ವೃತ್ತಿಯಲ್ಲಿ ಕಾರ್ ಚಾಲಕ, ಲಾಕ್ ಡೌನ್ ನಂತರ ಈಗ ಅಪ್ಪಟ ಯುವ ರೈತ. ಸೂರ್ಯ ನಗರಿ, ಬಿಸಿಲಿನ ನಗರಿ ಎಂದೇ ಖ್ಯಾತಿ ಪಡೆಕೊಂಡಿರುವ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ನಿಡಗುಂದಾ ಗ್ರಾಮದ ಯುವ ರೈತ ಅನಿಲ ಅವರ ಬದುಕಿಗೆ ತಿರುವ ಕೊಟ್ಟ ಪರಿ.

ತಮ್ಮದೇ ಆದ ಸ್ವಂತ ಎರಡು ಎಕರೆ ತೊಟ್ಟದಲ್ಲಿ ಈಗ ಶೇಂಗಾ ಬೇಳೆಯುವುದರ ಮೂಲಕ ತಮ್ಮ ಕುಟುಂಬದವರಿಗೆ ಮೆಚ್ಚುಗೆಯ ಮಗನಾಗಿದ್ದು, ಈ ಹಿಂದೆ ತೊಟ್ಟದ ಕೆಲಸ ತಂದೆ ಮತ್ತು ಅಣ್ಣ ಇಬ್ಬರು ನೋಡಿಕೊಳ್ಳುತ್ತಿದ್ದರೂ, ಲಾಕ್ ಡೌನ್ ನಂತರ ಇವರು ವಾಹನ ಚಾಲನೆಯು ಕೂಡ ಬಿಡುವಂತೆ ಮಾಡಿತ್ತು, ಆದರೆ ಹೊಲದಲ್ಲಿ ಕೆಲಸ ಮಾಡುವಾಗಿದ್ದ, ಭೂಮಿ ಮಾತ್ರ ಕೈ ಬಿಡಲಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶೇಂಗಾ ಬಿತ್ತುವುದಕ್ಕೆ ಮೊದಲು ಹೊಲವನ್ನು ಚೆನ್ನಾಗಿಹದ ಮಾಡಬೇಕು, ಆದನ್ನು ನಾ ಮಾಡದೆ. ನಂತರ ಬಿತ್ತುವುದಕ್ಕೆ ಮುಂದಾಗಬೇಕು. ನಮ್ಮ ತಂದೆ ಹೊಲವನ್ನು ಬಿತ್ತಿಕೊಟ್ಟರು. ಈ ಮಧ್ಯ ತಂದೆಗೆ ಬೇರೆ ಕೆಲಸ ಇರುವ ಕಾರಣ ಹೊಲದ ಕೆಲಸದಲ್ಲಿ ಹೆಚ್ಚಾಗಿ ನಾನೆ ತೊಡಗದೆ. ಈಗ ಯಾವುದೇ ವಾಹನ ಚಾಲನೆ ಮಾಡುವ ಕಡೆಗೆ ಆಸಕ್ತಿ ಇಲ್ಲ, ಮುಂದೆನಿದ್ದರೂ ಹೊಲದಲ್ಲೇ ಕೆಲಸ ಮಾಡುವ ಆಸಕ್ತಿ ಹೆಚ್ಚಾಗಿದೆ ಎಂದು ತಿಳಿಸುತ್ತಾನೆ ಯುವ ರೈತ ಅನಿಲ.

ಮಾರುಕಟ್ಟೆಯಿಂದ ಒಂದುವರೆ ಕುಂಟಲ ಶೇಂಗಾ ಬೀಜ ತೆಗೆದುಕೊಂಡು ಬರಲಾಯಿತು. ಅದಕ್ಕೆ ಸುಮಾರು 12000 ರೂ.ಗಳು ವೆಚ್ಚ ತಗಲಿತ್ತು.ಇಷ್ಟು ಶೇಂಗಾ ಬೀಜ ಬಿತ್ತಿದ ನಂತರ ಎರಡು ಬಾರಿ ಕಳೆ ತೆಗೆಯಲಾಯಿತು. ಕಳೆ ತೆಗೆಯುವುದಕ್ಕೆ ಪ್ರತಿ ಬಾರಿ 10000 ರೂ.ಗಳು ವೆಚ್ಚ ಮಾಡಲಾಯಿತು. ಒಂದು ಬಾರಿ ಶೇಂಗಾ ಬೇಳೆಗೆ ಎಣ್ಣೆ ಸಿಂಪಡಣೆ ಮಾಡಲಾಯಿತು.ಕಾರಣ ಕೀಟಗಳು ಹರಡದಂತೆ ಮಾಡಲು.ಶೇಂಗಾ ಬೆಳೆಯುವುದಕ್ಕೆ ನೀರು ಪ್ರಮುಖವಾಗಿ ಬೇಕಾಗಿದ್ದು, ಅದು 8 ದಿನಗಳಲ್ಲಿ 1 ದಿನ ಭೂಮಿ ಚೆನ್ನಾಗಿ ಭೂಮಿ ಹದ ಮಾಡಬೇಕು. 8 ದಿನಕ್ಕೊಮ್ಮೆ ನೀರು ಬಿಡುತ್ತ, ಕೀಟಗಳು ಹರದಂತೆ ನೋಡಿಕೊಳ್ಳುತ್ತಾ ಇರಬೇಕು.
ಶೇಂಗಾ ಈಗಾಗಲೇ ಅರ್ಧ ಎಕರೆ ಕೆತ್ತಲಾಗಿದೆ, ಕೆತ್ತಿರುವ ಅರ್ಧ ಎಕರೆಯಲ್ಲಿ 5-6 ಕುಂಟಲ ಲೆಕ್ಕ ಬರುತ್ತಿದೆ. ಮಾರುಕಟ್ಟೆಯಲ್ಲಿ ಈಗ ಶೇಂಗಾ ಬೆಲೆ ಸುಮಾರು 5000 ರಿಂದ 6000 ರೂ.ಗಳು ಇದೆ. ಈ ಅರ್ಧ ಎಕರೆಯಲ್ಲಿ 30000 ರಿಂದ 36000 ರೂ.ಗಳು ಬಂದಿವೆ. ಇನ್ನುಳಿದ ಶೇಂಗಾವನ್ನು ಇದೇ ಲೆಕ್ಕಕ್ಕೆ ತೆಗೆದುಕೊಂಡರೆ, ನನ್ನ ಲೆಕ್ಕದ ಪ್ರಕಾರ ಒಂದು ಲಕ್ಷದ ಮೂವತ್ತರಿಂದ ನಲವತ್ತು ಸಾವಿರ ರೂ.ಗಳು ಬರಬಹುದು ಎಂದು ಆಶಾಭಾವನೆ ಹೊಂದಿದ್ದಾರೆ.
ಒಂದು ಲಕ್ಷ ಮೂವತ್ತರಿಂದ ನಲವತ್ತು ಸಾವಿರದಲ್ಲಿ ಖರ್ಚು ವೆಚ್ಚವನ್ನು ತೆಗೆದಾಗ ನನಗೆ ಕಳೆದ 4-5 ತಿಂಗಳಲ್ಲಿ 80000 ಸಾವಿರದಿಂದ ಒಂದು ಲಕ್ಷ ಲಾಭವಾಗುವ ನಂಬಿಕೆ ಎಂದು ಆತ್ಮ ವಿಶ್ವಾಸದಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಹಿಂದೆ ತೊಟ್ಟದಲ್ಲಿ ಸತತವಾಗಿ ಮೂರು ವರ್ಷ ನಮ್ಮ ತಂದೆ ಮತ್ತು ಅಣ್ಣ ಜೊತೆಗೂಡಿ ಕಬ್ಬು ಬೆಳೆಯುತ್ತಿದ್ದರು. ಅದು ಕೂಡ ಉತ್ತಮ ಲಾಭ ತಂದಕೊಟ್ಟಿದೆ.ಮೂರು ವರ್ಷದ ನಂತರ ಕಬ್ಬಿಗೆ ಪರ್ಯಾಯವಾಗಿ ಬೇರೆ ಬೇಳೆ ಹಾಕಬೇಕಾಯಿತ್ತು. ಈಗ ಶೇಂಗಾ ಹಾಕಿರುವೆ ಜೊತೆಗೆ ಅಲ್ಪಸ್ವಲ್ಪ ಈರುಳ್ಳಿ ಮತ್ತು ಇನ್ನತರರ ಮನೆಗೆ ಬೇಕಾದ ತರಕಾರಿ ಬೆಳೆಗಳನ್ನು ಹಾಕಿ ಬೆಳೆಯುತ್ತೇವೆ.
ವಿಶೇಷ ವರದಿ:- ಸಂಜೀವಕುಮಾರ ಎಸ್. ನಿಡಗುಂದಾ
ತಾ.ಚಿಂಚೋಳಿ ಜಿ.ಕಲಬುರಗಿ