ಆಳಂದ: ಜುಲೈ 30ರಂದು ಸಿಯುಕೆಯ ಭೂಗರ್ಭಶಾಸ್ತ್ರ ವಿಭಾಗದಲ್ಲಿ ಬಿಎಸ್‍ಸಿ 5ನೇ ಸೆಮಿಸ್ಟರ್‍ನಲ್ಲಿ ಓದುತ್ತಿದ್ದ ಕುಮಾರಿ ಜಯಶ್ರೀ ನಾಯಕ ಅವರು ಯಮುನಾ ವಸತಿ ನಿಲಯದ ತಮ್ಮ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿμÁದಕರವಾಗಿದೆ. ಈ ದುರಂತದ ಸಂಬಂಧವಾಗಿ ವಿವಿಧ ಉಹಾಪೆÇೀಹಗಳು ಹರಡುತ್ತಿರುವ ಹಿನ್ನೆಲೆಯಲ್ಲಿ, ವಿಶ್ವವಿದ್ಯಾಲಯದ ಕುಲಸಚಿವ ಆರ್.ಆರ್. ಬಿರಾದಾರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸಿಯುಕೆ ಪರ ಪ್ರಕಟಣೆ ನೀಡಿರುವ ಅವರು, ಮೃತ ವಿದ್ಯಾರ್ಥಿನಿಯ ಸಾವಿಗೆ ನಿಖರವಾದ ಕಾರಣ ತಿಳಿದುಬರಬೇಕಾದ್ದು ಪೆÇಲೀಸ್ ತನಿಖೆಯಿಂದ ಮಾತ್ರ ಸಾಧ್ಯ. ಈ ಸಂಬಂಧ ಪೆÇೀಲಿಸರು ವಿದ್ಯಾರ್ಥಿನಿಯ ಮೊಬೈಲ್ ಫೆÇೀನ್ ಮತ್ತು ಸಂಬಂಧಿತ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕರೆ ವಿವರಗಳ ಸಮೀಕ್ಷೆ ನಡೆಯುತ್ತಿದೆ. ಜೊತೆಗೆ ಫೆÇರೆನ್ಸಿಕ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪೆÇಲೀಸರು ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳ ಕಚೇರಿ, ವಸತಿ ನಿಲಯ ಹಾಗೂ ಊಟದ ಕೊಠಡಿಗಳ ಸಿಸಿ ಟಿವಿ ದೃಶ್ಯಾವಳಿಗಳನ್ನೂ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಸ್ಪಷ್ಟನೆ ತನಿಖೆಯ ನಂತರವೇ ದೊರೆಯಲಿದೆ ಎಂದು ತಿಳಿಸಲಾಗಿದೆ.
ಘಟನೆಯ ಮೊದಲು ವಿದ್ಯಾರ್ಥಿನಿ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸಿಲ್ಲ ಎಂದು ಪ್ರಸ್ತಾಪಿಸಲಾಗಿದೆ. ಲೈಂಗಿಕ ಕಿರುಕುಳದಂತಹ ವಿಚಾರಗಳಿಗೆ ಆಂತರಿಕ ದೂರು ಸಮಿತಿಯೇ (ಐಸಿಸಿ) ಸಮರ್ಪಕ ಅಧಿಕಾರ ಹೊಂದಿದ್ದು, ಈ ಕುರಿತು ತಪ್ಪು ಮಾಹಿತಿಗಳನ್ನು ಕೆಲ ಮಾಧ್ಯಮಗಳು ಹರಡುತ್ತಿರುವುದು ಖಂಡನೀಯವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಘಟನೆಯ ವೇಳೆಯಲ್ಲಿ ಭದ್ರತಾ ಸಿಬ್ಬಂದಿ ವಿದ್ಯಾರ್ಥಿನಿಯ ಕೊಠಡಿ ಬಾಗಿಲು ಮುರಿದಿದ್ದು, ಮೇಲ್ವಿಚಾರಕರ ಹಾಗೂ ಸಹವಾಸಿ ವಿದ್ಯಾರ್ಥಿನಿಯರ ಸಮ್ಮುಖದಲ್ಲಿ ಈ ಕ್ರಿಯೆ ನಡೆದಿದೆ. ವೈದ್ಯಾಧಿಕಾರಿಗಳು ಕೂಡ ಭೇಟಿ ನೀಡಿ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ನಂತರ ಪೆÇೀಲಿಸರು ಹಾಗೂ ಪೆÇೀಷಕರಿಗೆ ತಕ್ಷಣವೇ ಮಾಹಿತಿ ನೀಡಲಾಗಿದೆ.
ಘಟನೆ ತನಿಖೆಯ ಹಂತದಲ್ಲಿರುವಾಗಲೇ ಕೆಲವರು ಉಹಾಪೆÇೀಹಗಳ ಮೂಲಕ ತನಿಖೆಗೆ ಅಡ್ಡಿಯಾಗುವ ಪ್ರಯತ್ನ ಮಾಡುತ್ತಿರುವುದನ್ನು ವಿಶ್ವವಿದ್ಯಾಲಯ ಖಂಡಿಸಿದೆ. “ವಿಶ್ವವಿದ್ಯಾಲಯ ಸಾವಿನ ತನಿಖೆಗೆ ಪೂರ್ಣ ಸಹಕಾರ ನೀಡುತ್ತಿದ್ದು, ಮುಂದೆಯೂ ನಿಷ್ಪಕ್ಷಪಾತ ತನಿಖೆಗೆ ಸಹಕರಿಸಲಿದೆ” ಎಂದು ಕುಲಸಚಿವ ಬಿರಾದಾರ ಹೇಳಿದ್ದಾರೆ.
Comments are closed.