ಆಳಂದ: ಪಟ್ಟಣದ ಕಿಸಾನಸಭಾ ಕಚೇರಿಯಲ್ಲಿ ನಾನಾ ಪಾಟೀಲ ಮತ್ತು ಅಣ್ಣಾ ಬಾಹುಸಾಟೆ ಅವರ ಜಯಂತಿಯಯಲ್ಲಿ ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಭಾವಚಿತ್ರಕ್ಕೆ ಪುಷ್ಪಮಾಲೆ ನೆರವೇರಿಸಿದರು. ಪಂಡಿತ ಸಲಗರ, ರಾಮಮೂರ್ತಿ ಗಾಯಕವಾಡ ಇತರರು ಇದ್ದರು.
ಆಳಂದ: ಸ್ವಾತಂತ್ರ್ಯ ಹೋರಾಟಗಾರ ನಾನಾ ಪಾಟೀಲ ಅವರ ತ್ಯಾಗ ಹಾಗೂ ಚಲೆಜಾವ ಚಳವಳಿಗೆ ದೇಶಕ್ಕೆ ಮಾದರಿಯಾಗಿದೆ. ಅವರು ಅಂದು ಬ್ರಿಟಿಷ್ ಚಲೇಜಾವ ಚಳವಳಿ ಕೈಗೊಂಡು ಸುಧಾರಣೆಗೆ ಭಾಗವಾಗಿ ನಾವು ಇಂದು ಕಾಪೆರ್Çರೇಟ್‍ಶಾಹಿ ವಿರುದ್ಧ ಹೊಸ ಚಳವಳಿ ಆರಂಭಿಸಿದ್ದೇವೆ ಎಂದು ಕಿಸಾನಸಭಾ ರಾಜ್ಯಾಧ್ಯಕ್ಷ ಮೌಲಾ ಮುಲ್ಲಾ ಹೇಳಿದರು.
ಪಟ್ಟಣದಲ್ಲಿ ಸಿಪಿಐ ಮತ್ತು ಕಿಸಾನಸಭಾ ಕಚೇರಿಯಲ್ಲಿ ಭಾನುವಾರ ಅಖಿಲ ಭಾರತ ಕಿಸಾನ್ ಸಭಾ ಮತ್ತು ಆಲ್ ಇಂಡಿಯಾ ತಂಜಿಮ ಎ- ಇನ್ಸಾಪ್ ಹಾಗೂ ದಲಿತ ಹಕ್ಕುಗಳ ಆಂದೋಲನ ಮಂಡಳಿಯಿಂದ ಹಮ್ಮಿಕೊಂಡ ಕಿಸಾನಸಭಾ ರಾಷ್ಟ್ರೀಯ ಅಧ್ಯಕ್ಷ ನಾನಾ ಪಾಟೀಲ ಮತ್ತು ಸಾಹಿತ್ಯ ರತ್ನ ಅಣ್ಣಾಬಾಹು ಸಾಟೆ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಕೈಗೊಂಡು ಅವರು ಮಾತನಾಡಿದರು.
“ನಾನಾ ಪಾಟೀಲ ಅವರು 1942 ರಲ್ಲಿ ಸಾತರಾ ಭಾಗದಲ್ಲಿ ರಾಷ್ಟ್ರಧ್ವಜ ಹಾರಿಸಿ ಬ್ರಿಟಿಷರನ್ನು ಹೊರಹಾಕಿದ ‘ಚಲೆಜಾವ’ ಚಳವಳಿಗೆ ನಾಯಕತ್ವ ನೀಡಿದರು. ಸಂಸತ್ತಿನಲ್ಲಿ ಎಂಎಸ್‍ಪಿ ಹಾಗೂ ಎಪಿಎಂಸಿ ಕಾಯ್ದೆ ಬಗ್ಗೆ ಧ್ವನಿ ಎತ್ತಿದ ಮೊದಲನೇ ಸಿಪಿಐ ಸಂಸದರಾಗಿದ್ದರು. ಆದರೆ ಇಂದಿಗೂ ಕೇಂದ್ರ ಸರ್ಕಾರಗಳು ಎಂಎಸ್‍ಪಿಗೆ ಕಾನೂನುಬದ್ಧ ಗ್ಯಾರಂಟಿ ನೀಡಿಲ್ಲ” ಎಂದು ಅಕ್ಷೇಪ ವ್ಯಕ್ತಪಡಿಸಿದರು.
ಆದರೆ ಕೇಂದ್ರ ಸರ್ಕಾರಗಳು ಎಂಎಸ್‍ಪಿ ನಿಗದಿ ಮಾಡುವ ಬದಲು, ತೆರಿಗೆ ರಹಿತ ಕೃಷಿ ಉತ್ಪನ್ನಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಮೂಲಕ ದೇಶೀಯ ಕೃಷಿಗೆ ಮಾರಾಟದ ಅವಕಾಶ ಕಡಿಮೆಯಾಗುವಂತೆ ಹುನ್ನಾರ ರೂಪಿಸುತ್ತಿವೆ. ಇದನ್ನು ತಕ್ಷಣ ನಿಲ್ಲಿಸಬೇಕು. ವಿದೇಶಿ ಕಂಪನಿಗಳೊಂದಿಗೆ ನಡೆಯುತ್ತಿರುವ ಒಪ್ಪಂದ ಮಾತುಕತೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
“ಅಂದು ಬ್ರಿಟಿμïಗಳನ್ನು ಓಡಿಸಿದ ಚಳೆಜಾವ ಚಳವಳಿಯು ಇಂದು ಕಾಪೆರ್Çರೇಟ್ ಕಂಪನಿಗಳ ವಿರುದ್ಧ ನಿಲ್ಲಬೇಕಾಗಿದೆ. ಇದರ ಭಾಗವಾಗಿ ಆಳಂದ ತಾಲ್ಲೂಕಿನಿಂದ ಜಾಥಾ ಪ್ರಾರಂಭಿಸಲಾಗಿದೆ” ಎಂದು ತಿಳಿಸಿದರು.
ತೆರಿಗೆ ರಹಿತ ಕೃಷಿ ಉತ್ಪನ್ನ ಆಮದು ನಿಲ್ಲಿಸಬೇಕು. ಹಳೆಯ (10 ವರ್ಷಗಳಷ್ಟು ಹಳೆಯ) ಕೃಷಿ ಟ್ರಾಕ್ಟರ್‍ಗಳಿಗೆ ಚಾಲನೆ ಪರವಾನಗಿ ರದ್ದುಪಡಿಸಬೇಕು. ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರ ಬ್ಯಾಂಕ್ ಹಾಗೂ ಮೈಕ್ರೋಫೈನಾನ್ಸ್ ಸಾಲಗಳನ್ನು ಮನ್ನಾ ಮಾಡಬೇಕು ಎಂಬ ಹಲವು ಬೇಡಿಕೆಗಾಗಿ ರಾಷ್ಟ್ರವ್ಯಾಪಿ ಅಗಸ್ಟ್ 13 ರಂದು ‘ಬ್ರಿಟಿμï ಹೋಗು’ ದಿನವನ್ನು ‘ಕಾಪೆರ್Çರೇಟ್ ಹೋಗು’ ಹೋರಾಟದ ರೂಪದಲ್ಲಿ ಆಚರಿಸುವ ಪ್ರತಿಭಟನೆಗೆ ಬೆಂಬಲಿಸಿ ಆ ದಿನ ಆಳಂದ ಪಟ್ಟಣದಲ್ಲಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಮೌಲಾ ಮುಲ್ಲಾ ಘೋಷಿಸಿದರು.
ನಾನಾ ಪಾಟೀಲ್ ಮತ್ತು ಲೋಕಶಾಹಿ ಅಣ್ಣ್ಣಾಬಾಹು ಅವರ ಕ್ರಾಂತಿಕಾರಿ ಕೊಡುಗೆಗಳಾಗಿವೆ “ಈ ಇಬ್ಬರು ಮಹಾನ್ ವ್ಯಕ್ತಿಗಳು ರೈತರ ಹಕ್ಕುಗಳಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಮತ್ತು ದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಅವರ ತತ್ವಗಳು ಇಂದಿಗೂ ನಮಗೆ ಮಾರ್ಗದರ್ಶನ ನೀಡುತ್ತವೆ,” ಎಂದು ಹೇಳಿದರು.
ಸಮಾರಂಭದಲ್ಲಿ ಪ್ರಗತಿಪರ ರೈತ ಕಲ್ಯಾಣಿ ಅವುಟೆ, ರಾಮಮೂರ್ತಿ ಗಾಯಕ್ವಾಡ್, ನ್ಯಾಯವಾದಿ ಪಂಡಿತ್ ಸಲಗರೆ, ರೈತ ತುಕಾರಾಂ ಕುಂಬಾರ್, ಬಾಲಾಜಿ ಪಾಟೀಲ್, ಅರಿಫ್ ಅಲಿ ಲಂಗಡೆ, ಕಬೀರಾ ಬೇಗಂ ಮುಂತಾದ ಗಣ್ಯರು ಉಪಸ್ಥಿತರಿದ್ದರು.
Comments are closed.