ಆಳಂದ: ನಂದಗೂರ ಸರ್ಕಾರಿ ಶಾಲೆಗೆ ಕೆಕೆಆರ್‍ಡಿಬಿ ಪೂರೈಸಿದ ಕುಡಿಯುವ ನೀರಿನ ಶುದ್ಧ ಘಟಕ ಸ್ಥಾಪಿಸಿದ್ದು, ಮುಖ್ಯ ಶಿಕ್ಷಕ ಪಂಪಾಪತಿ, ಎಸ್‍ಡಿಎಂಸಿ ಉಪಾಧ್ಯಕ್ಷ ಬಾಲಾಜಿ ಬಿರಾದಾರ, ಶಿಕ್ಷಕ ರವಿಂದ್ರ ರುದ್ರವಾಡಿ ಮಕ್ಕಳು ಸೇರಿ ನೀರು ಕುಡಿದು ಸಂಭ್ರಮಿಸಿದರು.
ಆಳಂದ: ತಾಲೂಕಿನ ನಂದಗೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಪೂರೈಕೆಯಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಪಂಪಾಪತಿ ಎಸ್. ಗಾಣಿಗೇರ, ಗ್ರಾಮೀಣ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸಿದ ಕಲ್ಯಾಣ ಕರ್ನಾಟಕ ಮಂಡಳಿ, ಅಧ್ಯಕ್ಷರು, ಕಾರ್ಯದರ್ಶಿಗಳು, ಸ್ಥಳೀಯ ಶಾಸಕರು ಮತ್ತು ಸರಕಾರಕ್ಕೆ ಧನ್ಯವಾದ ಸಲ್ಲಿಸಿದರು.
ಎಸ್‍ಡಿಎಮ್‍ಸಿ ಉಪಾಧ್ಯಕ್ಷ ಬಾಲಾಜಿ ಬಿರಾದಾರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಿದರು. ಶಾಲೆಯ ಸಹ ಶಿಕ್ಷಕ ರವೀಂದ್ರ ರುದ್ರವಾಡಿ, ಬಸವರೆಡ್ಡಿ ಪಾಟೀಲ್ ಮತ್ತು ಶಾಲಾ ಸಂಸತ್ತಿನ ಪ್ರಧಾನ ಮಂತ್ರಿ ಪ್ರಜ್ಞಾ ಅಂಬಾದಾಸ ಕಾಂಬಳೆ ಸೇರಿದಂತೆ ಇತರ ವಿದ್ಯಾರ್ಥಿ ಪ್ರತಿನಿಧಿಗಳು ಶುದ್ಧ ಕುಡಿಯುವ ನೀರಿನ ಘಟಕಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಸಾಂಕ್ರಾಮಿಕ ರೋಗಗಳು ಹಬ್ಬುತ್ತಿದ್ದವು. ಈ ನೂತನ ಘಟಕದಿಂದ ಮಕ್ಕಳಿಗೆ ಮತ್ತು ಶಾಲೆಯ ಅಡುಗೆಗೆ ಶುದ್ಧ ನೀರು ಲಭ್ಯವಾಗುವುದರಿಂದ ನೀರಿನಿಂದ ಉಂಟಾಗುವ ಕಾಯಿಲೆಗಳನ್ನು ತಡೆಯಬಹುದು, ಮಕ್ಕಳು ಆರೋಗ್ಯಯುತವಾಗಿ ವಿದ್ಯಾಭ್ಯಾಸ ಮಾಡಬಹುದು ಎಂದು ಶಾಲಾ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು.
Comments are closed.