ಆಳಂದ: ಸ್ಥಳೀಯ ಪುಸಭೆ ಸಿಬ್ಬಂದಿ ಅಂಬಾರಾಯ ಲೋಕಾಣೆ ಅವರಿಗೆ ಬಡ್ತಿ ವರ್ಗಾವಣೆ ಹಿನ್ನೆಲೆ ಪೌರನೌಕರ ಸಂಘದ ಅಧ್ಯಕ್ಷ ಶಿವರಾಯ ಸರಸಂಬಿ ಸನ್ಮಾನಿಸಿದರು. ಪುರಸಭೆ ಅಧ್ಯಕ್ಷ ಫೀರದೋಸ್ ಅನ್ಸಾರಿ, ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರಿಗೆ ಲೋಕಾಣೆ ಪ್ರತಿಯಾಗಿ ಸನ್ಮಾನಿಸಲಾಯಿತು.
ಆಳಂದ: ಪುರಸಭೆಯ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಕರ್ತವ್ಯಿಷ್ಠರಾಗಿ ಉತ್ತಮ ಕೆಲಸ ನಿರ್ವಹಿಸಿದರೆ ಆಡಳಿತಕ್ಕೆ ಕೀರ್ತಿ ಮತ್ತು ಗೌರವ ತರುತ್ತದೆ ಎಂದು ಪುರಸಭೆ ಅಧ್ಯಕ್ಷ ಫಿರ್ದೋಸ್ ಅನ್ಸಾರಿ ಅವರು ಹೇಳಿದರು.
ಪಟ್ಟಣದಲ್ಲಿನ ಪುರಸಭೆಯ ಸಿಬ್ಬಂದಿ ಅಂಬಾರಾಯ ಲೋಕಾಣೆ ಅವರು ದ್ವಿತೀಯ ದರ್ಜೆ ಸಹಾಯಕ ಬಡ್ತಿಯೊಂದಿಗೆ ಜಿಲ್ಲಾ ಯೋಜನಾ ನಿರ್ದೇಶಕರ ಕಚೇರಿಗೆ ವರ್ಗಾವಣೆಯಾದ ಸಂದರ್ಭದಲ್ಲಿ ಆಯೋಜಿಸಲಾದ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಮಳೆಗಾಲದಲ್ಲಿ ರಸ್ತೆ ಸ್ವಚ್ಛತೆ, ಕೊಳಚೆ ನಿರ್ಮೂಲನೆ, ಮತ್ತು ಚರಂಡಿಗಳ ನಿರ್ವಹಣೆಗೆ ವಿಶೇಷ ಒತ್ತು ನೀಡಬೇಕು ಎಂದು ಅವರು ಪೌರ ಕಾರ್ಮಿಕರಿಗೆ ಸಿಬ್ಬಂದಿಗಳಿಗೆ ಸೂಚಿಸಿದರು.
ಪುರಸಭೆಯ ಮುಖ್ಯಾಧಿಕಾರಿ ಸಂಗಮೇಶ್ ಪನಶೆಟ್ಟಿ ಮಾತನಾಡಿ, “ನೌಕರರು ಸರ್ಕಾರ ನಿಗದಿಪಡಿಸಿದ ಸ್ಥಳದಲ್ಲಿ ದಕ್ಷತೆ ಮತ್ತು ನಿμÉ್ಠಯಿಂದ ಕಾರ್ಯನಿರ್ವಹಿಸಿದರೆ, ವೃತ್ತಿಜೀವನಕ್ಕೆ ಘನತೆ ಮತ್ತು ಗೌರವ ದೊರೆಯುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು,” ಪಟ್ಟಣದಲ್ಲಿ ರಸ್ತೆ ಅಗಲೀಕರಣ ಸೇರಿದಂತೆ ಮಹತ್ವ ಕೆಲಸಗಳಿಗೆ ನಾಗರಿಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಪೌರಕಾರ್ಮಿಕ ನೌಕರರ ಸಂಘದ ಅಧ್ಯಕ್ಷ ಶಿವರಾಜ್ ಸರಸಂಬಿ ಲೋಕಾಣೆ ಅವರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಸಂಜಯ ನಾಯಕ್, ಸಿದ್ದು ಪೂಜಾರಿ, ಪರಿಸರ ಅಭಿಯಂತರ ರವಿಕಾಂತ್ ಮಿಸ್ಕಿನ್, ತೈಯಬ್ ಶೇಖ, ಕಚೇರಿ ವ್ಯವಸ್ಥಾಪಕಿ ಜೈ ಭಾರತಿ ಬೊಮ್ಮನಳ್ಳಿ, ಸಮುದಾಯ ಸಂಘಟನಾ ಅಧಿಕಾರಿ ಗಾಯತ್ರಿ ಮುತಪಕಳ್ಳಿ, ಆರ್.ಐ. ಹರೀಶ್ ಗೋವಿಂದ್, ಶಿವರಾಯ ಮಂಗಲಗಿ, ಎಸ್.ಐ. ಲಕ್ಷ್ಮಣ್ ತಳವಾರ್, ಶಹಾಜಿ ಮೂರೇ, ಮೋಹಿನ್ ಸಾವಳಗಿ, ಜಯಶ್ರೀ ಟಿ. ಸಿಂಧೆ, ಮೌಲಾ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಅಂಬಾರಾಯ ಲೋಕಾಣಿ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಅಂಬಾರಾಯ ಲೋಕಾಣೆ ಅವರು ಪ್ರತಿಯಾಗಿ ಅಧ್ಯಕ್ಷರಿಗೆ ಮತ್ತು ಮುಖ್ಯಾಧಿಕಾರಿಗೆ ಸನ್ಮಾನಿಸಿದರು.
Comments are closed.