Shubhashaya News

ನನ್ನ ಕ್ಷೇತ್ರಕ್ಕೆ 17 ಕೋಟಿ ಅನುದಾನ ಬಂದಿರುವ ಕುರಿತು ಮಾಹಿತಿಯೇ ಇಲ್ಲ : ಬಿ.ಆರ್ ಪಾಟೀಲ್ ಮತ್ತೊಂದು ಆರೋಪ

ಕಲಬುರ್ಗಿ : ವಸತಿ ಯೋಜನೆಯ ಅಡಿ ಮನೆ ನೀಡಲು ಲಂಚ ಪಡೆದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ. ಆಡಿಯೋ ವಿಚಾರದ ಬಗ್ಗೆ ಸಿಎಂ ಕರೆದಿಲ್ಲ ಆದರೆ ಕರೆದರೆ ಖಂಡಿತ ಹೋಗುತ್ತೇನೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಚರ್ಚೆಗೆ ಕರೆದರು ಹೋಗುತ್ತೇನೆ ಎಂದು ಕಲಬುರ್ಗಿಯಲ್ಲಿ ಆಳಂದ ಕ್ಷೇತ್ರದ ಶಾಸಕ ಬಿ ಆರ್ ಪಾಟೀಲ್ ಹೇಳಿಕೆ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಈ ಕುರಿತು ಕರೆದಿಲ್ಲ ಕರೆದರೆ ಹೋಗಿ ಮಾತನಾಡುತ್ತೇನೆ. ಸಚಿವರ ಪಿ.ಎಸ್ ಜೊತೆಗೆ ಸಂಭಾಷಣೆ ಆಡಿಯೋ ಸೋರಿಕೆಯ ಬಗ್ಗೆ ನನಗೆ ಗೊತ್ತಿಲ್ಲ. ಸರ್ಫರಾಜ್ ಖಾನ್ ಗೆ ಒಂದು ಮನವಿ ಮಾಡಲು ನಾನು ಕರೆ ಮಾಡಿದ್ದೆ. ಈ ಹಿಂದೆ ನಾನು ಕೇಳಿದರು ಒಂದು ಮನೆಯನ್ನು ಮಂಜೂರು ಆಗಿರಲಿಲ್ಲ.

ಆದ್ದರಿಂದ ನನ್ನ ಮೊಬೈಲ್ ನಿಂದಲೇ ಸರ್ಫರಾಜ್ ಗೆ ಕರೆ ಮಾಡಿದ್ದೆ. ಸಚಿವ ಕೃಷ್ಣ ಭೈರೇಗೌಡ ಹೇಳಿದ್ದು ಅಷ್ಟು ಸೀರಿಯಸ್ ಆಗಲಿಲ್ಲ ಆದರೆ ನನ್ನ ಆಡಿಯೋ ಯಾಕೆ ಇಷ್ಟು ಸೀರಿಯಸ್ ಆಗುತ್ತದೆ ಗೊತ್ತಾಗುತ್ತಿಲ್ಲ. ನಾನು ಬ್ಲಾಕ್ ಮೇಲ್ ಮಾಡಿ ಮಂತ್ರಿ ಆಗುವವನಲ್ಲ ಎಂದು ಶಾಸಕ ಬಿ ಆರ್ ಪಾಟೀಲ್ ಹೇಳಿಕೆ ನೀಡಿದರು. ನನ್ನ ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಇಲಾಖೆಯಿಂದ 17 ಕೋಟಿ ಬಂದಿದೆ.17 ಕೋಟಿ ಹಣ ಬಂದಿರೋ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎಂದರು.

ಶಾಲಾ ಕಟ್ಟಡ ನಿರ್ಮಾಣ ಗುದ್ದಲಿ ಪೂಜೆಗೆ ನನ್ನನ್ನು ಕರೆದೇ ಇಲ್ಲ. ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಮೌಲಾನಾ ಆಜಾದ್ ಶಾಲಾ ಕಟ್ಟಡ ಕಟ್ಟುತ್ತೇವೆ ಎಂದಿದ್ದಾರೆ. ಈಗಾಗಲೇ ಕೆಕೆಆರ್‌ಡಿಬಿ ಅನುದಾನದಿಂದ ಕಾಮಗಾರಿ ಆರಂಭವಾಗಿದೆ. ಇದರಲ್ಲಿ ಯಾರೊಬ್ಬರ ಹಸ್ತಕ್ಷೇಪವಿದೆ ಎಂದು ಆರೋಪ ಮಾಡುತ್ತಿಲ್ಲ. ಆದರೆ ಕ್ಷೇತ್ರದ ಶಾಸಕನಾಗಿ ನನಗೆ ಮಾಹಿತಿ ಇರಬೇಕಿತ್ತಲ್ವಾ? ಎಂದು ಕಲ್ಬುರ್ಗಿಯಲ್ಲಿ ಆಳಂದ್ ಶಾಸಕ ಬಿ.ಆರ್ ಪಾಟೀಲ್ ಹೇಳಿಕೆ ನೀಡಿದರು.

Leave A Reply

Your email address will not be published.