ಹೊಸಳ್ಳಿ ಗ್ರಾಮದಲ್ಲಿ ನಡೆದ ಜಯಂತಿ ಉತ್ಸವದಲ್ಲಿ ಕೃಷಿಕ ಸಮಾಜ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ, ಮುಖಂಡ ರೇವಣಸಿದ್ಧಪ್ಪ ನಾಗೂರೆ,ಶ್ರೀಶೈಲ ಖಜೂರಿ, ಮಲ್ಲಿಕಾರ್ಜುನ ಕಂದಗುಳೆ, ಪ್ರಕಾಶ ಮಾನೆ ಅನೇಕರು ಬಸವ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಆಳಂದ: ವೈಚಾರಿಕತೆ, ಸಮಾನತೆ ಮತ್ತು ಸಹೋದರತ್ವದ ಸಮಾಜ ಕಟ್ಟಲು ಹೋರಾಡಿ ಬಸವಣ್ಣನವರ ವಚನಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ. ಬಸವಣ್ಣನವರ ಜಯಂತಿ ಆಚಣೆಯಿಂದ ಸಮಾಜದಲ್ಲಿ ಸೌಹಾರ್ದತೆಯ ತಂದುಕೊಳ್ಳಬೇಕಿದೆ ಎಂದು ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ ಅವರು ಹೇಳಿದರು.
ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಬಸವಣ್ಣನವರ 892ನೇ ಜಯಂತಿ ಉತ್ಸವದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಇಂತಹ ಜಯಂತಿಗಳ ಮೂಲಕ ಶರಣರ ಮೌಲ್ಯಗಳು ಪ್ರಸಾರಗೊಳ್ಳಬೇಕು,” ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
.ಶರಣ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, “ಬಸವಣ್ಣನವರ ವಿಚಾರಗಳು ಜಾಗತಿಕ ಮಟ್ಟದಲ್ಲಿ ಇಂದು ಪ್ರಸ್ತುತವಾಗಿವೆ,” ಅವುಗಳನ್ನು ಮೈಗೂಡಿಸಕೊಳ್ಳುವುದು ಇಂದಿನ ಸಮಸ್ಯೆಗೆ ಪರಿಹಾರವಾಗಲಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ವೀರಮಹಾಂತ ಶಿವಾಚಾರ್ಯರು ಸತ್ಯಶುದ್ಧ ಕಾಯಕವೇ ಶ್ರೇಷ್ಠ ಧರ್ಮವಾಗಿದ್ದು, ಪ್ರತಿಯೊಬ್ಬರೂ ಕಾಯಕದಿಂದ ಸಂತೃಪ್ತ ಜೀವನ ನಡೆಸಬಹುದು. ಶರಣರು ಕಾಯಕ, ದಾಸೋಹ ಮತ್ತು ಉತ್ತಮ ನಡೆನುಡಿಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ ಬಸವಾದಿ ಶರಣರು ಮತ್ತು ಮಹಾತ್ಮರ ಚಿಂತನೆಗಳನ್ನು ಜಯಂತಿಗಳಲ್ಲಿ ಸ್ಮರಿಸುವುದರ ಜೊತೆಗೆ, ಅವುಗಳನ್ನು ಜೀವನದಲ್ಲಿ ಆಚರಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಗ್ರಾಮದ ಮುಖಂಡ ವೀರಭದ್ರಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಮಹಾಸಭಾ ತಾಲೂಕು ಉಪಾಧ್ಯಕ್ಷ ಶ್ರೀಶೈಲ ಖಜೂರಿ, ಮುಖಂಡ ರೇವಣಸಿದ್ದಪ್ಪ ನಾಗೂರೆ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೋಳೆ, ರಾಮಚಂದ್ರಪ್ಪ ಇಂಗಳಗಿ, ಶಂಕರ ಪಾಟೀಲ, ಬಸವರಾಜ ಡಿಗ್ರಿ, ಭೀಮಣ್ಣ ಬಬಲಾದ, ಆನಂದ ನಡಗೇರಿ, ಕಲ್ಲಪ್ಪ ಕಾಪಸೆ, ಮೌನೇಶ ಕೋರೆ, ಜ್ಯೋತಿಲಿರ್ಂಗ ಬೇಡಜೀರ್ಗೆ, ಗುಂಡ ಕೋರೆ, ಜ್ಯೋತಿರ್ಲಿಂಗ ಬೇಡಜೀರ್ಗಿ, ಗುಂಡಪ್ಪ ಮಾನೆ, ಅಮರ ಮಾನೆ, ಮಹೇಶ ಮಾನೆ, ಜಮಾದಾರ, ಮಹ್ಮದ್ ಹುಸೇನ, ಜಡೇಶ ಪಾಟೀಲ, ನಾಗಪ್ಪ ಭೀಮಳ್ಳಿ, ಮಲ್ಲಪ್ಪ ಪಾಟೀಲ ಸೇರಿದಂತೆ ಮತ್ತಿತರು ಇದ್ದರು.
ಶಿಕ್ಷಕ ಮಹೇಶ ಪಾಟೀಲ ನಿರೂಪಿಸಿದರು. ಬಿಜೆಪಿ ಕಾರ್ಯದರ್ಶಿ ಪ್ರಕಾಶ ಮಾನೆ ಸ್ವಾಗತಿಸಿದರು. ಡಾ. ಮಹಾಂತೇಶ ಪಾಟೀಲ ವಂದಿಸಿದರು. ನಂತರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಬಸವಣ್ಣನವರ ಪುತ್ಥಳಿಯ ಭವ್ಯ ಮೆರವಣಿಗೆ ನಡೆಯಿತು.
Comments are closed.