ಆಳಂದ: ಸುದ್ದಿಗೋಷ್ಠಿಯಲ್ಲಿ ರಘುನಂದನ್ ಪಿ, ಗುರುನಾಥ ರೆಡ್ಡಿ ಹಾಗೂ ಬಿ. ರಾಜೇಶ್ ಅವರು ಮಾಹಿತಿ ಮಾತನಾಡಿದರು.
ಆಳಂದ: ವಿದ್ಯಾರ್ಥಿಗಳ ಭವಿಷ್ಯದ ಹಾದಿಗೆ ಮಾರ್ಗದರ್ಶಿಯಾದ ‘ದಿ ಹಿಂದೂ ಎಜುಕೇಶನ್ ಪ್ಲಸ್ ಕೆರಿಯರ್ ಕೌನ್ಸೆಲಿಂಗ್’ ಕಾರ್ಯಕ್ರಮದ 23ನೇ ಆವೃತ್ತಿಯು ರಾಜ್ಯಾದ್ಯಂತ ಆರಂಭಗೊಂಡಿದ್ದು ಕಲಬುರಗಿಯಲ್ಲಿ ಮೇ 18ರಂದು ಭಾನುವಾರ ಶರಣಬಸವ ವಿಶ್ವವಿದ್ಯಾಲಯ ಆವರಣದಲ್ಲಿರುವ ಪೂಜ್ಯ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳ ನೋಂದಣಿ ಬೆಳಿಗ್ಗೆ 9:00 ಗಂಟೆಗೆ ಪ್ರಾರಂಭವಾಗಲಿದ್ದು 9:30ಕ್ಕೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನುಮ್ ಹಾಗೂ ಪೆÇಲೀಸ್ ಕಮೀಷನರ್ ಎಸ್.ಡಿ. ಶರಣಪ್ಪ ಅವರು ಕೇಂದ್ರ ಲೋಕಸೇವಾ ಆಯೋಗದ (UPSಅ) ಪರೀಕ್ಷೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುವರು ಎಂದು ದಿ ಹಿಂದೂ ಪತ್ರಿಕೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ರಘುನಂದನ್ ಪಿ, ಸೀನಿಯರ್ ಮ್ಯಾನೇಜರ್ ಗುರುನಾಥ ರೆಡ್ಡಿ ಹಾಗೂ ಸೀನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಬಿ. ರಾಜೇಶ್ ಅವರು ಮಾಹಿತಿ ನೀಡಿದ್ದಾರೆ.
ಈ ಕುರಿತು ಕಲಬುರಗಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರವಾದ ಮಾಹಿತಿ ನೀಡಿದ ಅವರು ವೈದ್ಯಕೀಯ, ಎಂಜಿನಿಯರಿಂಗ್, ಸಹಿತ ವೃತ್ತಿಪರ ಕೋರ್ಸುಗಳು, ಸಿಇಟಿ, ನೀಟ್, ಸಿಎ, ಸಿಎಸ್ ನಂತಹ ಪ್ರವೇಶ ಪರೀಕ್ಷೆಗಳು, ವಿಜ್ಞಾನ, ಕಲಾ, ವಾಣಿಜ್ಯ ಹಾಗೂ ಕಾನೂನು, ಹೀಗೆ ವಿವಿಧ ಪದವಿ ಮತ್ತಿತರ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ತಜ್ಞರು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡುವರು ಎಂದರು.
ಸಿ. ಎ. ಸುಮಿತ್ ಆರ್. ಭರಡಿಯ ಅವರು ಚಾರ್ಟೆಡ್ ಅಕೌಂಟೆಂಟ್ ಕುರಿತು, ಡಾ. ಸಂಗಪ್ಪ ಎಸ್.ಬಿ ಅವರು ಇಂಜಿನಿಯರಿಂಗ್ ಕೋರ್ಸುಗಳ ಕುರಿತು, ವಿಶ್ವೇಶ್ವರಾಯ ತಾಂತ್ರಿಕ ಮಹಾವಿದ್ಯಾಲಯದ ಕಲಬುರಗಿಯ ಪ್ರಾದೇಶಿಕ ಡಾ. ಬಿ. ಶಂಭುಲಿಂಗಪ್ಪ ಸ್ನಾತಕೋತ್ತರ ಶಿಕ್ಷಣ ಕುರಿತು ಉಪಯುಕ್ತ ಮಾಹಿತಿ ನೀಡಲಿದ್ದಾರೆ. ಸಿಇಟಿ ಪರೀಕ್ಷೆಯ ಬಗ್ಗೆ ಮಾತನಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೋಡಲ್ ಅಧಿಕಾರಿ ನಾಗರಾಜ್ ಎಂ ಹಾಗೂ ಇನ್ನಿತರ ಶಿಕ್ಷಣಗಳ ಕುರಿತು ಮಾಹಿತಿ ನೀಡಲು ಸಿಗ್ಮಾ ಸಂಸ್ಥೆಯ ಸಯ್ಯದ್ ಸಾದತ್ ಪಾμÁ ಆಗಮಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಕಲ್ಯಾಣ ಕರ್ನಾಟಕದ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ನ ಅಧ್ಯಕ್ಷರಾದ ಶರಣಪ್ಪ ಎಂ. ಪಪ್ಪ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಪ್ರಥಮ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ ಹಾಗೂ ಪಾಸಾದ ವಿದ್ಯಾರ್ಥಿಗಳು ಹಾಗೂ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಕೆರಿಯರ್ ಕೌನ್ಸಿಲಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು. ವಿದ್ಯಾರ್ಥಿಗಳು ಮತ್ತು ಪೆÇೀಷಕರು ಹಾಗೂ ಶಿಕ್ಷಣ ಸಂಸ್ಥೆಗಳ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುವ ಈ ಕೆರಿಯರ್ ಕೌನ್ಸೆಲಿಂಗ್ ನ ಸೂಕ್ತ ಮಾರ್ಗದರ್ಶನದಿಂದಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಸರಿಯಾದ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಲು ನೆರವಾಗಲಿದೆ.
ಪ್ರವೇಶವು ಉಚಿತವಾಗಿದ್ದು ವಿದ್ಯಾರ್ಥಿಗಳ ಜೊತೆಗೆ ಪೆÇೀಷಕರೂ ಕೂಡ ಭಾಹವಹಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಕೋರ್ಸುಗಳ ಬಗ್ಗೆ ಹಾಗೂ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒಳಗೊಂಡಿರುವ “ದಿ ಹಿಂದು ಪತ್ರಿಕೆಯ ಕೇರಿಯರ್ ಕೌನ್ಸೆಲಿಂಗ್ ಹಾಂಡ್ ಬುಕ್” ಅನ್ನೂ ಕೂಡ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ದಿ ಹಿಂದೂ ಪತ್ರಿಕೆಯ ಸಿ ಬಿ. ರಾಜೇಶ್ (ಮೊಬೈಲ್: 9448871815) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
Comments are closed.