Shubhashaya News

ವ್ಯಕ್ತಿಗೆ ಕಾಲುಕಟ್ಟಿ ಬಾವಿಗೆ: ಶವ ಪತ್ತೆ

ಆಳಂದ: ಪಟ್ಟಣದ ಪಿ.ಎನ್.ಶಹಾ ಎಂಬುವರ ಹೊಲದ ಬಾವಿಯಲ್ಲಿ ಕೈ ಕಾಲು ಕಟ್ಟಿ ಹಾಕಿದ ಅಪರಿಚತ ವ್ಯಕ್ತಿಯ ಶವ ದೊರೆತ್ತಿದ್ದು,

ಆಳಂದ: ಪಟ್ಟಣದ ಹೊರವಲಯದ ಹೊಲವೊಂದರಲ್ಲಿನ ನೀರಿದ್ದ ಬಾವಿಯಲ್ಲಿ ಶನಿವಾರ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ಪಿ.ಎನ್.ಶಹಾ ಎಂಬುವರ ಹೊಲದಲ್ಲಿನ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿಯ 25ರಿಂದ30ವರ್ಷ ಎಂದು ಪೊಲೀಸರು ತಿಳಿಸಿದ್ದಾರೆ. ಕೈಕಾಲು ಕಟ್ಟಿ ಬಾವಿಯಲ್ಲಿ ಬಿದ್ದುಕೊಂಡ ವ್ಯಕ್ತಿಯ ಶವ ದೊರೆತ್ತಿದ್ದು, ಇದೊಂದು ಸಂಶಸೆಯಾಸ್ಪದ ಪ್ರಕರಣವಾಗಿದೆ ಎಂದು ಶಂಕ್ಯವ್ಯಕ್ತಪಡಿಸಿದ ಪೊಲೀಸರು, ಶವ ಪಂಚನಾಮೆಗೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೃತ ಅಪರಿಚಿತ ವ್ಯಕ್ತಿಯ ವಿಳಾಸದ ಬಗ್ಗೆ ಮಾಹಿತಿ ದೊರೆತರೆ ಸಾರ್ವಜನಿಕರು ಠಾಣೆಗೆ ಮಾಹಿತಿ ನೀಡಬೇಕು. ಈ ಘಟನೆಯ ಕುರಿತು ತನಿಖೆ ಕೈಗೊಳ್ಳಲಾಗುವುದು ಎಂದು ಸ್ಥಳೀಯ ಠಾಣೆಯ ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.