Shubhashaya News

ಸಂಭ್ರಮದ ಬೋಳಣಿ ಮಲ್ಲಿಕಾರ್ಜುನ ರಥೋತ್ಸವ

ಆಳಂದ: ಬೋಳಣಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ನಿಮಿತ್ತ ರಥೋತ್ಸವ ನಡೆಯಿತು.

ಆಳಂದ: ತಾಲೂಕಿನ ಬೋಳಣಿ ಗ್ರಾಮದ ಮಲ್ಲಿಕಾರ್ಜುನ ದೇವರ 67ನೇ ಜಾತ್ರಾ ಮಹೋತ್ಸವವು ಬಾಜಾ-ಭಜಂತ್ರಿ. ಹಲಗೆ, ಡೊಳ್ಳು, ಪುರವಂತಿಕೆ, ವಾದ್ಯ ವೈಭವ, ಹೆಣ್ಣುಮಕ್ಕಳ ಆರತಿಯೊಂದಿಗೆ ಅತ್ಯಂತ ಸಡಗರ, ಸಂಭ್ರಮ, ಭಕ್ತಿಭಾವ ಮತ್ತು ‘ಶ್ರೀ ಮಲ್ಲಿಕಾರ್ಜುನ ಮಹಾರಾಜ ಕೀ ಜೈ’ ಎಂಬ ಮುಗಿಲು ಮುಟ್ಟುವ ಘೋಷಣೆಯೊಂದಿಗೆ ರಥೋತ್ಸವ ಭವ್ಯವಾಗಿ ನೆರವೇರಿತು.
ರಥಕ್ಕೆ ಉತ್ತತ್ತಿ, ಖಾರಿಕ ನಾರು ಎಸೆದು ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು.
ಜಾತ್ರಾ ನಿಮಿತ್ಯ ಮಲ್ಲಿಕಾರ್ಜುನ ದೇವರ ಕತ್ರ್ಯು ಗದ್ದುಗೆಗೆ ರುದ್ರಾಬಿಷೇಕ, ಪಲ್ಲಕ್ಕಿ, ನಂದಿಕೋಲು ಉತ್ಸವ, ಮದ್ದು ಸುಡುವುದು, ಧರ್ಮಸಭೆ, ಸಂಗೀತ ಹಾಗೂ ರಸ ಮಂಜರಿ, ಲಿಂಗದೀಕ್ಷೆ, ಅಯ್ಯಾಚಾರ, ರುದ್ರಾಕ್ಷಿ ಧಾರಣೆ, ಉಡಿ ತುಂಬುವುದು, ಎರಡು ದಿನಗಳ ಕಾಲ ಉಚಿತ ಆರೋಗ್ಯ ತಪಾಸಣೆ ಶಿಬಿರ, ಜಂಗಿ ಪೈಲ್ವಾನರ ಕುಸ್ತಿ, 105 ಜನ ಬಾಳ್ಳಿ ಸದ್ಭಕ್ತರಿಂದ ದಿನನಿತ್ಯ ದಾಸೋಹ ಜರುಗಿತು.
ಶ್ರೀ ಗುರುಪಾದಲಿಂಗ ಮಹಾಸ್ವಾಮೀಜಿ, ವೀರಮಹಾಂತ ಶಿವಾಚಾರ್ಯರು, ಸಿದ್ದಮಲ್ಲ ಶಿವಾಚಾರ್ಯರು, ಮಹಾಂತ ಸ್ವಾಮೀಗಳು, ಚನ್ನಮಲ್ಲ ಸ್ವಾಮಿಗಳು, ಮಾತೋಶ್ರೀ ಆನಂದಮಯಿ ತಾಯಿ, ಪಾಂಡುರಂಗ ಮಹಾರಾಜ ಜೇವೂರ್, ಚನ್ನವೀರ ಮುತ್ಯಾ, ರೇವಣಸಿದ್ದ ಶಿವಾಚಾರ್ಯರು ಸೇರಿದಂತೆ ಮುಖಂಡರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಗಳ ಅನೇಕ ಜನರು ಪಾಲ್ಗೊಂಡಿದ್ದರು. ಆಗಮಿಸಿದ್ದ ಭಕ್ತಾದಿಗಳಿಗೆಲ್ಲ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ನರೋಣಾ ಪೊಲೀಸ್ ಠಾಣೆಯ ಸಿಬ್ಬಂದಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದರು.

Leave A Reply

Your email address will not be published.