Shubhashaya News

ಶ್ರೀ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ- ಮುತ್ತೈದೆಯರಿಗೆ ಉಡಿ

ಆಳಂದ: ವಿನೋದ ಗುರೂಜಿ ನೇತೃತ್ವದಲ್ಲಿ ನಡೆದ ಪಟ್ಟಣದ ಉಮರಗಾ ರಸ್ತೆಯಲ್ಲಿನ ಶ್ರೀಮಹಾಲಕ್ಷ್ಮೀ ಜಾತ್ರಾ ಮಹೋತ್ಸವದಲ್ಲಿ ಜೆಡಿಎಸ್ ನಾಯಕಿ ಮಹೇಶ್ವರಿ ಎಸ್.ವಾಲಿ ಮುತ್ತೈದೆಯರಿಗೆ ಉಡಿತುಂಬಿದರು.

ಆಳಂದ: ಪಟ್ಟಣದ ಉಮರ್ಗ ರಸ್ತೆ ಮಾರ್ಗದ ವಿನೋದ ಗುರೂಜಿ ಅವರ ನೇತೃತ್ವದಲ್ಲಿ ಶ್ರೀ ಮಹಾಲಕ್ಷ್ಮಿದೇವಿಯ 7ನೇ ವರ್ಷದ ಜಾತ್ರಾ ಮಹೋತ್ಸವ ವಿದ್ಯುಕ್ತವಾಗಿ ಬುಧವಾರ ನೆರವೇರಿತು.
ಜಾತ್ರಾ ಮಹೋತ್ಸವದ ಮುನ್ನದಿನ ಮಂಗಳವಾರ ಸಂಜೆ ಪಟ್ಟಣದ ಸುಲ್ತಾನ್‍ಪುರ ಬಡಾವಣೆಯಿಂದ ಹೊರಟ ಲಕ್ಷ್ಮೀ ಮೂರ್ತಿಯ ಮೆರವಣಿಗೆ ಪ್ರಮುಖ ರಸ್ತೆಗಳಿಂದ ಸಾಗುತ್ತಾ ಮಹಾಲಕ್ಷ್ಮಿ ದೇವಾಲಯ ಗುಡಿಗೆ ತಲುಪಿತು. ರಾತ್ರಿ ಜಾಗರಣೆಯೊಂದಿಗೆ ಕಾರ್ಯಕ್ರಮ ನಡೆಯಿತು.
ಬುಧವಾರ ಜಾತ್ರೆ ಅಂಗವಾಗಿ ಲಕ್ಷ್ಮೀಮೂರ್ತಿಗೆ ರುದ್ರಾಭಿಷೇಕ ಹೋಮ, ಹವನ, ಮತ್ತು ವಿಶೇಷ ಪೂಜಾ ವಿಧಿಗಳು ನೆರವೇರಿದವು. ಜೆಡಿಎಸ್ ನಾಯಕಿ ಮಹೇಶ್ವರಿಯ ಎಸ್. ವಾಲಿಯವರು ನೂರಾರು ಮುತ್ತೈದೆಯರಿಗೆ ಉಡಿತುಂಬಿ ಸಮರ್ಪಿಸಿ ದೇವಿಗೆ ಭಕ್ತಿಯ ಸಮರ್ಪಣೆ ಸಲ್ಲಿಸಿದರು.
ಆಳಂದ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯರು, ಮಾಜಿ ಶಾಸಕ ಸುಭಾಷ ಗುತ್ತೇದಾರ, ರೇವಣಸಿದ್ಧಪ್ಪಾ ನಾಗೂರೆ, ಕಲ್ಯಾಣ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಶರಣು ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕುಲಕರ್ಣಿ ಸೇರಿದಂತೆ ಅನೇಕ ಭಕ್ತರು, ತಾಯಂದಿರು ಪಾಲ್ಗೊಂಡು ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಕಲಾವಿದರಾದ ಡಾ. ನಾಗರಾಜ್ ಎಸ್. ಕೋಟ್ನೂರ್, ವಿನೋದ್ ಕುಮಾರ್ ದಸ್ತಪುರ್, ಬಸವರಾಜ್ ಚೆಳ್ಗೇರಿ, ಹಾಗೂ ಸಂಗು ವಿಶ್ವಕರ್ಮ ಅವರು ಗಾನ ವಿದಹನವನ್ನು ನೀಡಿ ಭಕ್ತರನ್ನು ಮನೋಜ್ಞಗೊಳಿಸಿದರು. ಜೈ ಶ್ರೀ ಚಂದ್ರಕಾಂತ್ ನೇತೃತ್ವದಲ್ಲಿ ಪ್ರಸಾದ ಸೇವೆ ಆಯೋಜನೆಗೊಂಡಿತ್ತು.

Leave A Reply

Your email address will not be published.