ಆಳಂದ: ಸಾಲೇಗಾಂವ ಗ್ರಾಮದ ಗುರುನಾಥ ಸಿದ್ಧಪ್ಪ ಲಕುಕಳೆ ಅವರಿಗೆ ಸೇರಿದ 5 ಎಕರೆ ಪಪಾಯಿ ಬೆಳೆ ಬಿರುಗಾಳಿ ಸಹಿತ ಮಳೆಗೆ ನೆಲಕ್ಕುರುಳಿ ಅರ್ಧಷ್ಟು ಹಾನಿಯಾಗಿದೆ.
ಆಳಂದ: ಕಳೆದೆರಡೂ ದಿನಗಳಲ್ಲಿ ಬಿರುಗಾಳಿ ಸಹಿತ ಮಳೆಯಿಂದಾಗಿ ತೋಟಗಾರಿಕೆ ಪಪಾಯಿ, ದ್ರಾಕ್ಷಿ, ಕಲ್ಲಂಗಡಿ ಸೇರಿದಂತೆ ಇನ್ನಿತರ ಬೆಳೆ ಹಾನಿಗೀಡಾದ ಬಗ್ಗೆ ವರದಿಯಾಗಿದೆ.
ತಾಲೂಕಿನ ಸಾಲೇಗಾಂವ ಗ್ರಾಮದಲ್ಲಿನ ಗುರುನಾಥ ಸಿದ್ಧಪ್ಪ ಲಕುಕಳೆ ಅವರಿಗೆ ಸೇರಿದ 5ಎಕರೆ ಪಾಪಾ ಬೆಳೆ ಕೈಗೆ ಬಂದ ತುತು ಬಾಯಿಗೆ ಬರದಂತಾಗಿ ಸುಮಾರು 400 ಪಪಾಯಿ ಗಿಡಗಳು ಕಟ್ಟಾಗಿ ನೆಲಕ್ಕುರುಳಿವೆ. ಅಲ್ಲದೆ ಫಲ ತುಂಬಿದ ಗಿಡಗಳ ಕಾಯಿ ಉದುರಿ ನಷ್ಟವಾದ ಬಗ್ಗೆ ಪಪಾಯಿ ರೈತ ಯಾತನ ಹೊರಹಾಕಿದ್ದಾರೆ. ಇದಕ್ಕೆ ಹೊರತಾಗಿಯೂ ತಾಲೂಕಿನ ಹಲವು ಗ್ರಾಮಗಳಲ್ಲಿ ಬೆಳೆದ ಪಪಾಯಿ ಬೆಳೆಗೆ ಹಾನಿಯಾದ ಬಗ್ಗೆ ಪ್ರಾಥಮಿಕ ವರದಿಗಳು ಲಭ್ಯವಾಗಿದ್ದು ಸೋಮವಾರ ಸಂಜೆ ಬಿರುಗಾಳಿ ಸಹಿತ ಅಲ್ಲಲ್ಲಿ ಮಳೆ ಸುರಿದಿದ್ದರಿಂದ ಹಾನಿಯ ಹೆಚ್ಚಿನ ಸಾಧ್ಯತೆ ಅಂದಾಜಿಸಲಾಗಿದೆ.