ಕಲಬುರಗಿ: ಸಾಲ ಬಾಧೆಯಿಂದ ತಾಳಲಾರದೆ ರೈತನಿರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಳಂದ ತಾಲ್ಲೂಕಿನ ಎಳೆನಾವದಗಿ ಗ್ರಾಮದಲ್ಲಿ ನಡೆದಿದೆ.
ಅಶೋಕ ತಂದೆ ಮಣೀಕರಾವ್ ಸುತಾರ(48) ಎಂದು ಗುರುತಿಸಲಾಗಿದೆ.
ರೈತ ಅಶೋಕ ಕೃಷಿ ಚಟುವಟಿಕೆಗಾಗಿ 15 ಲಕ್ಷದ ವರೆಗೂ ಸಾಲ ಮಾಡಿದ್ದ ಎಂದು ತಿಳಿದುಬಂದಿದೆ. ರೈತ ಮಾಡಿರೋ ಎಲ್ಲ ಸಾಲಮನ್ನಾ ಮಾಡಬೇಕೆಂದು ಗ್ರಾಮಸ್ಥರು, ಕಲ್ಯಾಣ ಕರ್ನಾಟಕ ಜನಪರ ಕಲ್ಯಾಣ ವೇದಿಕೆಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಘಟನೆ ನರೋಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.