Shubhashaya News

ಗ್ರಾಮಾಡಳಿತಾಧಿಕಾರಿಗಳ ಧರಣಿಗೆ ಮಾಜಿ ಶಾಸಕ ಗುತ್ತೇದಾರ ಬೆಂಬಲ

ಅಮಾನತಿಗೆ ಧರಣಿ ನಿರತರ ತೀವ್ರ ಆಕ್ರೋಶ

ಆಳಂದ: ತಾಲೂಕು ಆಡಳಿತಸೌಧ ಮುಂದೆ ಬೇಡಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳ ನಡೆಸಿದ ಧರಣಿ ಸತ್ಯಾಗ್ರಹಕ್ಕೆ ಮಾಜಿ ಶಾಸಕ ಸುಭಾಷ ಗುತ್ತೇದಾರ ಬೆಂಬಲಿಸಿ ಮಾತನಾಡಿದರು. ತಾಲೂಕು ಅಧ್ಯಕ್ಷ ಸಚ್ಚಿದಾನಂದ ಚಿನ್ನಮಳ್ಳಿ, ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ಪಿ. ರಾಠೋಡ ಮತ್ತಿತರರು ಇದ್ದರು.

ಆಳಂದ: ಹಲವು ಪ್ರಮುಖ ಬೇಡಿಕೆಗೆ ಆಗ್ರಹಿಸಿ ಪಟ್ಟಣದ ತಾಲೂಕು ಆಡಳಿತಸೌಧ ಮುಂದೆ ಆಡಳಿತಾಧಿಕಾರಿಗಳು ಕರ್ತವ್ಯ ನಿರ್ವಹಿಸದೆ 2ನೇ ಹಂತದ ಧರಣಿ ಸತ್ಯಾಗ್ರಹ ಭಾನುವಾರ 7ನೇ ದಿನಕ್ಕೆ ಮುಂದುವರೆಸಿದ್ದ, ಈ ನಡುವೆ ತಮ್ಮ ದಾಖಲೆಗಳನ್ನು ಪಡೆಯಲು ಮುಂದಾದ ನಾಗರಿಕರಿಗೆ ದಾಖಲೆ ದೂರೆಯದೆ ಪರದಾಡತೊಡಗಿದ್ದಾರೆ.
ಶನಿವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಗ್ರಾಮಾಡಳಿತಾಧಿಕಾರಿಗಳ ಬೇಡಿಕೆಯನ್ನು ಸರ್ಕಾರ ಕೂಡಲೇ ಈಡೇರಿಸಿ ನಾಗರಿಕಕರ ಕೆಲಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಲುಂಡಗಿ, ಸತೀಶ ಸನ್ಮುಖ ಸೇರಿ ಪ್ರಮುಖರು ಧರಣಿಗೆ ಬೆಂಬಲಿಸಿ ಬೇಡಿಕೆಗೆ ಈಡೇರಿಕೆಗೆ ಒತ್ತಾಯಿಸಿದರು.
ನಿನ್ನೆ ಹಾಸನ ಜಿಲ್ಲೆ ಹರಿಸಿಕೇರಿ ತಾಲೂಕಿನ ಗ್ರಾಮ ಆಡಳಿತಾಧಿಕಾರಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯಕ ಧರಣಿ ನಿರತ ಹಿನ್ನೆಯಲ್ಲಿ ಅವರನ್ನು ಅಮಾನತು ಕೈಗೊಂಡು ಎಫ್‍ಐಆರ್ ಮಾಡಿ ಸರ್ಕಾರ ಆದೇಶಿಸಿದೆ, ರಾಜ್ಯದಲ್ಲಿನ 10ಸಾವಿರ ಗ್ರಾಮಾಡಳಿತ ಅಧಿಕಾರಿಗಳ ಧ್ವನಿಯಾಗಿ ನಿಂತ್ತಿದ್ದಾರೆ. ಅವರಿಗೆ ಈ ಕ್ರಮ ಸರಿಯಲ್ಲ. ಅಮಾನತು ಆದೇಶ ತಕ್ಷಣವೇ ವಾಪಸು ಪಡೆಯಬೇಕು ಇಲ್ಲವಾದಲ್ಲಿ ಸರ್ಕಾರ ಎಲ್ಲರನ್ನು ಅಮಾನತುಮಾಡಿ ಪ್ರಕರಣ ದಾಖಲಿಸಬೇಕು ಆದರೆ ಹೋರಾಟ ಕೈಬಿಡುವುದಿ ಎಂದು ಬೀಗುಪಟ್ಟು ಹಿಡಿದುಕೊಂಡಿದ್ದಾರೆ.
ಧರಣಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಪವಾರ, ತಾಲೂಕು ಅಧ್ಯಕ್ಷ ಸಚ್ಚಿದಾನಂದ ಚಿನ್ನಮಳ್ಳಿ, ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ಪಿ. ರಾಠೋಡ ಅವರು, ಮಾತನಾಡಿ, ತಮ್ಮ ಬೇಡಿಕೆಯಾದ ಕಚೇರಿ, ಲ್ಯಾಪಟಾಪ ಸೇರಿ ಮೂಲಸೌಲಭ್ಯ ಕಲ್ಪಿಸಬೇಕು. ವೇತಶ್ರೇಣಿ ನೀಡಬೇಕು. ಸೇವಾ ವಿಷಯದ ಸೌಲಭ್ಯ ನೀಡಬೇಕು. ಅಂತರಜಿಲ್ಲಾ ವರ್ಗಾವಣೆ ಆಗಬೇಕು. ಇ-ಪೌತಿ ಖಾತಾ ಆಂದೋಲನ ಕೈಬಿಡಬೇಕು. ಅನುಕಂಪದ ನೇಮಕಾತಿ ಹುದ್ದೆಯ ವೃಂದ ನೇಮಕಾತಿ ತಿದ್ದುಪಡಿ, ಕರ್ತವ್ಯ ನಿರತರ ಜೀವಹಾನಿಯಾದರೆ ಕುಟುಂಬಕ್ಕೆ 50ಲಕ್ಷ ರೂಪಾಯಿ ಪರಿಹಾರ, ಮಾತೃ ಇಲಾಖೆ ಕೆಲಸದೊಂದಿ ಸರ್ಕಾರದ ಇತರೆ ಕೆಲಸ ನಿರ್ವಹಿಸುವ 3 ಸಾವಿರ ರೂಪಾಯಿ ಆಪತ್ತಿನ ಭತ್ಯೆ ಹಾಗೂ ಒಂದು ತಿಂಗಳ ಹೆಚ್ಚುವರಿ ವೇತನ ನೀಡಬೇಕು. 5000 ರೂಪಾಯಿ ಪ್ರಯಾಣ ಭತ್ಯೆ ಹೆಚ್ಚಿಸಬೇಕು. ಜೇಷ್ಠತೆಯನ್ನು ಪರಿಗಣಿಸಬೇಕು. ಮನೆಹಾನಿಯ ಪ್ರಾಥಮಿಕ ವರದಿ ಮಾತ್ರ ನೀಡುವ ಜವಾಬ್ದಾರಿಗೆ ಆದೇಶಿಸಬೇಕು. ಗ್ರಾಮ ಆಡಳಿತಾಧಿಕಾರಿಗಳನ್ನು ಕಚೇರಿಗೆ ನಿಯೋಜಿಸಿದ್ದನ್ನು ಮುಖ್ಯ ಹುದ್ದೆಗಳಿಗೆ ವಹಿಸಬೇಕು ಎಂದು ಹೇಳದರು.
ರಜಾದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕಬಾರದು, ಜಾತಿ ಆದಾಯ ಪತ್ರಗಳ ವಿತರಣೆ ವಿಚಾರವಾಗಿ ಕಂದಾಯ ಇಲಾಖೆಯ ಅಧಿಕಾರಿಗಳ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳನ್ನು ಹೊಣೆಯನ್ನಾಗಿಸಿ ಪ್ರಕರಣ ದಾಖಲಿಸುವುದು ನಿಲ್ಲಿಸಿ ತಪ್ಪು ಮಾಹಿತಿ ನೀಡಿದ ಅರ್ಜಿದಾರರನ್ನೇ ಹೊಣೆಗಾರರನ್ನಾಗಿ ಮಾಡಿ ಪ್ರಕರಣ ದಾಖಲಿಸಲು ಮುಖ್ಯಸ್ಥರಿಗೆ ಸೂಕ್ತ ಆದೇಶ ನೀಡಬೇಕು ಎಂಬ ಇನ್ನಿತರ ಬೇಡಿಕೆ ಈಡೇರುವತನಕ ಧರಣಿ ಹಿಂದಕ್ಕೆ ಪಡೆಯುವುದಿಲ್ಲ ಎಂದು ಹೇಳಿದರು.
ಧರಣಿಯಲ್ಲಿ ಸಂಘದ ಖಜಾಂಚಿ ಸುಮನ ಕಾಂಬಳೆ, ಮುಖಂಡ ಆನಂದ ಪೂಜಾರಿ, ಪ್ರಭುಲಿಂಗ ತಟ್ಟಿ, ಸಿದ್ರಾಮಯ್ಯಾ ಸ್ವಾಮಿ, ಪರಶುರಾಮ ತಿವಾರಿ, ಜಗನಾಥ ಸಿಂಧೆ, ವಿನೋಧ, ಮಹೇಶ ಕೋಳೆಕರ್, ಸುಜಾತಾ, ಬೆಬಿ, ಶೃತಿ, ಭೀಮಾಶಂಕರ್, ನಾಗವೇಣಿ ರಂಜಿತಾ ಅನೇಕರಿದ್ದರು.

Leave A Reply

Your email address will not be published.