Shubhashaya News

ಆಳಂದನಲ್ಲಿ ಜಯಂತಿ ಬೃಹತ್ ಉತ್ಸವ

ಆಳಂದ: ತಾಲೂಕು ಆಡಳಿತಸೌಧನಲ್ಲಿ ಆಚರಿಸಿದ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿಯಲ್ಲಿ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಸಮುದಾಯ ಮುಖಂಡರೊಂದಿಗೆ ಪೂಜೆ ನೆರವೇರಿಸಿದರು. ಸುಭಾಷ ಫೌಜಿ, ಶಿವಾಜಿ ರಾಠೋಡ ಇತರರು ಇದ್ದರು.

ಸಂತ ಶ್ರೀ ಸೇವಾಲಾಲ ಮಹಾರಾಜರ ತತ್ವಾದರ್ಶಗಳ ಆಚರಣೆಗೆ ಫೌಜಿ ಕರೆ
ಆಳಂದ: ಸಂತ ಸೇವಾಲಾಲ್ ಮಹಾರಾಜರು ಬಂಜಾರ ಸಮುದಾಯದ ಮಹಾನ್ ಸಂತರಾಗಿದ್ದು, ಅವರ ಜೀವನ ಮತ್ತು ಆದರ್ಶಗಳು ಸಮಸ್ತ ಸಮಾಜಕ್ಕೆ ಮಾರ್ಗದರ್ಶಿಯಾಗಿವೆ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಆಚರಣೆಗೆ ತರಬೇಕು ಎಂದು ಬಂಜಾರ ಸಮಾಜ ಅಧ್ಯಕ್ಷ ಸುಭಾಷ ಫೌಜಿ ಅವರು ಇಂದಿಲ್ಲಿ ಕರೆ ನೀಡಿದರು.
ಪಟ್ಟಣದ ಹೊರವಲಯದ ತಾಲೂಕು ಆಡಳಿತ ಸೌಧದಲ್ಲಿ ಸಂತ ಸೇವಾಲಾಲ್ ಮಹಾರಾಜರ 286 ಜಯಂತಿಯ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೇವಾಲಾಲರು ಪ್ರಜಾಪ್ರಭುತ್ವ, ನ್ಯಾಯ ಮತ್ತು ಸಾಮಾಜಿಕ ಸಮಾನತೆಯನ್ನು ಹುರಿದುಂಬಿಸಿದ ಮಹಾನ್ ಚಿಂತಕರು. ಇಂತಹ ಮಹಾನ್ ಸಂತರ ಆದರ್ಶಗಳನ್ನು ಪಾಲಿಸಿಕೊಂಡು ಹೋಗುವ ಮೂಲಕ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಪ್ರಗತಿ ಸಾಧಿಸಲು ಸಾಧ್ಯವಿದೆ ಎಂದು ಹೇಳಿದ ಅವರು ಪಟ್ಟಣದಲ್ಲಿ ಬಂಜಾರಾ ಸಮಾಜ ಸಂಘಟನೆಗಳ ಆಶ್ರಯದಲ್ಲಿ ಫೆ. 17ರಂದು ಆಳಂದ ಪಟ್ಟಣದಲ್ಲಿ ಸಂತ ಸೇವಾಲಾಲರ ಜಯಂತಿ ಭವ್ಯ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಳ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಭಾವಚಿತ್ರದ ಪೂಜೆ ನೆರವೇರಿಸಿದ ತಹಸೀಲ್ದಾರ ಅಣ್ಣಾವ್ರಾವ್ ಪಾಟೀಲ್ ಮಾತನಾಡಿ, ಸಂತ ಸೇವಾಲಾಲ್ ಮಹಾರಾಜರು ಬಂಜಾರ ಸಮುದಾಯದ ಮಾತ್ರವಲ್ಲ, ಸಮಸ್ತ ಸಮಾಜಕ್ಕೆ ಮಾರ್ಗದರ್ಶಕ ಮಹಾನ್ ಸಂತರಾಗಿದ್ದಾರೆ. ಅವರ ಬದುಕು, ತತ್ವಗಳು ಮತ್ತು ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ವಿವರಿಸಿದರು. ಸಮಾನತೆ, ನೈತಿಕತೆ, ಮತ್ತು ಧಾರ್ಮಿಕ ಸೌಹಾರ್ದತೆಯನ್ನು ಬೆಳೆಸುವ ಮೂಲಕ ಸಮಾಜವನ್ನು ಅಭಿವೃದ್ಧಿಪಡಿಸುವುದು ಅವರ ಉದಾತ್ತ ದರ್ಶನವಾಗಿತ್ತು ಎಂದು ಅವರು ತಿಳಿಸಿದರು. ಯುವ ಪೀಳಿಗೆಯು ಸಂತ ಸೇವಾಲಾಲ್ ಮಹಾರಾಜರ ತತ್ವಗಳನ್ನು ಅನುಸರಿಸಿ ನೈತಿಕತೆ ಹಾಗೂ ಪ್ರಾಮಾಣಿಕತೆಗನ್ನು ಉಳಿಸಿಕೊಂಡು ಜೀವನದಲ್ಲಿ ಮುಂದುವರಿಯಬೇಕು ಎಂದು ಕರೆ ನೀಡಿದರು.
ಸಮಾಜ ಮುಖಂಡ ಶಿವಾಜಿ ರಾಠೋಡ್ ಅವರು ಮಾತನಾಡಿ, ಸಂತ ಸೇವಾಲಾಲ್ ಮಹಾರಾಜರು ಬಂಜಾರ ಸಮುದಾಯದ ಹೆಮ್ಮೆ, ಆದರ್ಶ ಮತ್ತು ಪ್ರೇರಣಾ ಮೂಲ ಎಂದು ಅಭಿಪ್ರಾಯಪಟ್ಟರು.
ಮಹಾರಾಜರ ಸಮಾಜ ಪರಿವರ್ತನೆಯ ಕಾರ್ಯಗಳು, ಭಕ್ತಿಯ ಶಕ್ತಿ ಮತ್ತು ಜನಪರ ಸೇವೆ ಕುರಿತು ವಿವರಿಸಿದರು. ಸಮಾಜದಲ್ಲಿ ಶೈಕ್ಷಣಿಕ ಬೆಳವಣಿಗೆ, ಆರ್ಥಿಕ ಸುಧಾರಣೆ, ಮತ್ತು ಸಾಂಸ್ಕøತಿಕ ಮೌಲ್ಯಗಳನ್ನು ರಕ್ಷಿಸುವಂತೆ ಯುವಕರಿಗೆ ಪ್ರೇರಣೆಯನ್ನೂ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕಮಲ ರಾಠೋಡ, ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಚವ್ಹಾಣ, ಸಂತೋಷ ಪವಾರ, ತಾಲೂಕು ಅಧ್ಯಕ್ಷ ವೆಂಕಟೇಶ ರಾಠೋಡ, ಕೊಟ್ರೇಶ ರಾಠೋಡ, ಅನಿಲ ರಾಠೋಡ, ಕಿಶನ ಮಮದಾಪೂರ, ರಾಠೂಕರಸಿಂಗ್ ರಾಡೋಡ, ಪಂಡಿತ ಚವ್ಹಾಣ, ಜೈರಾಮ ರಾಠೋಡ, ಸಂಕೇತ ಪವಾರ, ಕಿರಣ ಜಾಧವ ವಿಜಯಕುಮಾರ ರಾಠೋಡ, ರಾಹುಲ್ ರಾಠೋಡ ಮತ್ತು ಸಮಾಜ ಕಲ್ಯಾಣಾಧಿಕಾರಿ ವಿಜಯಲಕ್ಷ್ಮೀ ಕೊಳ್ಕರ್ ಸೇರಿ ಇನ್ನಿತರ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಹಲವಾರು ಗಣ್ಯರು, ಹಿರಿಯರು ಹಾಗೂ ಬಂಜಾರ ಸಮಾಜದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Leave A Reply

Your email address will not be published.