Shubhashaya News

ಸಾಯಿರಾಂ ಯುವಕ ಸಂಘದಿಂದ 7ನೇ ವರ್ಷದ ದಾಂಡಿಯಾ ಉತ್ಸವ

ಕಲಬುರಗಿ: ದಾಂಡಿಯಾ ಉತ್ಸವಗಳು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ, ಜನರಲ್ಲಿ ಸೌಹಾರ್ದ ಮತ್ತು ಒಗ್ಗಟ್ಟಿನ ಭಾವನೆ ಬೆಳೆಸುತ್ತವೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರದ ಸಾಯಿರಾಂ ನಗರದ ವಿ.ಎಲ್. ಪಾಟೀಲ ಕಲ್ಯಾಣ ಮಂಟಪದಲ್ಲಿ ಸಾಯಿರಾಂ ಯುವಕ ಸಂಘ ಹಾಗೂ ಸಾಯಿರಾಂ ಲೇಡೀಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ 7ನೇ ವರ್ಷದ ದಾಂಡಿಯಾ ಉತ್ಸವದ ಉದ್ಘಾಟನಾ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಮಹೇಶ ಹೊಸೂರಕರ್, ವೈದ್ಯಾಧಿಕಾರಿ ಡಾ. ರವೀಂದ್ರ ಪಾಟೀಲ, ವರ್ಗ-1 ಗುತ್ತಿಗೆದಾರ ಎಂ.ಕೆ. ಪಾಟೀಲ, ವಾಣಿಜ್ಯ ತೆರಿಗೆ ಅಧಿಕಾರಿ ಶಿವಕುಮಾರ್ ಭೋಗಶೆಟ್ಟಿ, ಗಣೇಶ ಸೆರಾಮಿಕ್ಸ್‌ನ ಸುಭಾಷ್ ಹಡಪದ್, ಐಶ್ವರ್ಯ ಸಿಮೆಂಟ್ ಏಜೆನ್ಸಿಯ ನಿಂಗಪ್ಪ ಯಾಳಗಿ, ಆಂದೋಲಾ ಅಸೋಸಿಯೇಟ್ಸ್‌ನ ಕುಶಾಲ ಆಂದೋಲ, ಸಾಯಿರಾಂ ನಗರದ ಮಲ್ಲಿಕಾರ್ಜುನ ಪೂಜಾರಿ, ಚನ್ನಬಸವ ದೇಶಮುಖ, ರವಿ ಪೂಜಾರಿ, ನಾಗರೆಡ್ಡಿ, ವೈಭವ ಹೊಸೂರಕರ್, ಕಾರ್ತಿಕ್, ಪಿಂಟು, ಶ್ವೇತಾ, ಶರಣಮ್ಮ, ಸೌಮ್ಯಶ್ರೀ, ರಕ್ಷಿತಾ, ಭಾಗ್ಯಶ್ರೀ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಉತ್ಸವದಲ್ಲಿ ಭಾಗವಹಿಸಿದ್ದವರಿಗೆ ಹಾಗೂ ವಿಜೇತರಿಗೆ ಬಹುಮಾನ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಲಾಯಿತು.

Leave A Reply

Your email address will not be published.