Shubhashaya News

ವೈದ್ಯಕೀಯ ವಾಸ್ತು ತಜ್ಞ ಅರುಣ ಪತ್ತಾರ ಅವರಿಗೆ ‘ಜ್ಯೋತಿಷ್ಯ ಭೂಷಣ’ ಸಮ್ಮಾನ

ಕಲಬುರಗಿ: ವಾಸ್ತು ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ ವೈದ್ಯಕೀಯ ವಾಸ್ತು ತಜ್ಞ ಅರುಣ ಪತ್ತಾರ ಅಗರಖೇಡ ಅವರಿಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಜ್ಯೋತಿಷ್ಯ ಸಮ್ಮೇಳನದಲ್ಲಿ ‘ಜ್ಯೋತಿಷ್ಯ ಭೂಷಣ’ ಸಮ್ಮಾನ ನೀಡಿ ಗೌರವಿಸಲಾಯಿತು.

ಜೀವನ್ ರೇಖಾ ಜ್ಯೋತಿಷ್ಯ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಭೋಪಾಲ್‌ನ ಮಾಲ್ವಿಯಾ ನಗರದ ಸಿಟಿ ಟ್ರೇಡ್ ಸೆಂಟರ್‌ನ ರತ್ನವಾಲಾ ಹಾಲ್‌ನಲ್ಲಿ ಎರಡುದಿನಗಳ ಅಂತರರಾಷ್ಟ್ರೀಯ ಜ್ಯೋತಿಷ್ಯ ಸಮ್ಮೇಳನ ಹಾಗೂ ದೈವಜ್ಞ ಸಮ್ಮಾನ್ ಸಮಾರಂಭ ಆಯೋಜಿಸಲಾಗಿತ್ತು. ಧಾರ್ಮಿಕ ಮುಖಂಡ ಹಾಗೂ ರಾಜಜ್ಯೋತಿಷಿ ಪಂಡಿತ್ ಕೃಪಾರಾಮ ಉಪಾಧ್ಯಾಯ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ವಿದ್ವಾಂಸರು ಮತ್ತು ತಜ್ಞರು ಪಾಲ್ಗೊಂಡಿದ್ದರು.

ಶ್ರೀ ಶಿವಾಯ ವಾಸ್ತು ಕನ್ಸಲ್ಟೆನ್ಸಿ ಮೂಲಕ ವಾಸ್ತು ಸಮಾಲೋಚನೆ ನೀಡುತ್ತಿರುವ ಅರುಣ ಪತ್ತಾರ ಅವರು ವೈದ್ಯಕೀಯ ವಾಸ್ತು ಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ವಾಸ್ತು ಕ್ಷೇತ್ರದಲ್ಲಿನ ಅವರ ಪರಿಣತಿ ಮತ್ತು ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

Leave A Reply

Your email address will not be published.