Shubhashaya News

ಸಿಯುಕೆ: ಆ.೨೦ರಿಂದ ೨ನೇ ಅಂತರರಾಷ್ಟಿçÃಯ ೨೦೨೬ ಸಮ್ಮೇಳನ

ಆಳಂದ: ಸಿಯುಕೆಯಲ್ಲಿ ಆಯೋಜಿಸುತ್ತಿರುವ ಅಂತರಾಷ್ಟಿçÃಯ ಸಮ್ಮೇಳನದ ಪೋಸ್ಟರ್ ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಬಿಡುಗಡೆಗೊಳಿಸಿದರು.

ಆಳಂದ: ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿAಗ್ (ಇಸಿಇ) ವಿಭಾಗದ ವತಿಯಿಂದ ೨ನೇ ಅಂತರರಾಷ್ಟಿçÃಯ ೨೦೨೬ ಸಮ್ಮೇಳನವನ್ನು ಆಗಸ್ಟ್.೨೦ ಮತ್ತು ೨೧ರಂದು ಎರಡು ದಿನಗಳ ಕಾಲ ಆಯೋಜಿಸಲಾಗಿದೆ.
ಸಮ್ಮೇಳನದ ಪೂರ್ವಭಾವಿಯಾಗಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಅಧಿಕೃತ ಪೋಸ್ಟರ್ ಅನಾವರಣಗೊಳಿಸಲಾಯಿತು.
ಸಮ್ಮೇಳನದ ಪ್ರಧಾನ ಅಧ್ಯಕ್ಷ ಹಾಗೂ ಇಸಿಇ ವಿಭಾಗದ ಮುಖ್ಯಸ್ಥ ಪ್ರೊ. ಪ್ರಮೋದ್ ಕುಮಾರ್, ಪ್ರೊ. ಪರಮೇಶ, ಹಣಕಾಸು ವಿಭಾಗದ ಅಧ್ಯಕ್ಷ ಡಾ. ನೃಸಿಂಘ ಚರಣ ಪ್ರಧಾನ್, ಪ್ರೊ. ವಿರೇಶ ಕಸಬೇಗೌಡರ, ಡಾ. ಲಾಯಕ ಅಲಿ, ಡಾ. ಮಲ್ಲಿಕಾರ್ಜುನ ಆನಂದಹಳ್ಳಿ, ಡಾ. ನಾಗರಾಜ ಯಮನಕ್ಕನವರ ಸೇರಿದಂತೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿAಗ್ ಕ್ಷೇತ್ರದಲ್ಲಿ ಜ್ಞಾನ ವಿನಿಮಯ, ಸಹಯೋಗ ಹಾಗೂ ನವೀನತೆಯನ್ನು ಉತ್ತೇಜಿಸಲು ಇಂತಹ ಶೈಕ್ಷಣಿಕ ಸಮ್ಮೇಳನಗಳು ಮಹತ್ವದ್ದಾಗಿವೆ. ಸಂಶೋಧಕರು, ಶಿಕ್ಷಣ ತಜ್ಞರು, ಉದ್ಯಮ ವಲಯದ ಪರಿಣಿತರು ಹಾಗೂ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತರುವ ಮೂಲಕ ಹೊಸ ಆಲೋಚನೆ ಮತ್ತು ಸಂಶೋಧನೆಗೆ ಉತ್ತೇಜನ ದೊರೆಯಲಿದೆ ಎಂದರು. ಸಮ್ಮೇಳನ ಯಶಸ್ವಿಯಾಗಲೆಂದು ಸಂಘಟನಾ ತಂಡಕ್ಕೆ ಶುಭ ಹಾರೈಸಿದರು.
ರಾಷ್ಟಿçÃಯ ಹಾಗೂ ಅಂತರರಾಷ್ಟಿçÃಯ ಖ್ಯಾತಿಯ ತಜ್ಞರಿಂದ ಮುಖ್ಯ ಭಾಷಣಗಳು, ಉಪನ್ಯಾಸಗಳು, ಸಂಶೋಧನಾ ಪ್ರಬಂಧಗಳ ಮಂಡನೆ, ಬಾಹ್ಯಾಕಾಶ ಮತ್ತು ನವೀನ ತಂತ್ರಜ್ಞಾನಗಳ ಕುರಿತು ಚರ್ಚೆ, ನೆಟ್‌ವರ್ಕಿಂಗ್ ಹಾಗೂ ತಾಂತ್ರಿಕ ಅವಧಿಗಳನ್ನು ಆಯೋಜಿಸಲಾಗಿದೆ. ಸಂಶೋಧಕರು ಮತ್ತು ತಜ್ಞರ ಸಂವಾದದ ಜೊತೆಗೆ ಇತ್ತೀಚಿನ ತಾಂತ್ರಿಕ ಬೆಳವಣಿಗೆಗಳು ಹಾಗೂ ನವೀನ ಮಾದರಿಗಳ ಪ್ರದರ್ಶನವೂ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಅಧಿಕೃತ ಅಂತರ್ಜಾಲ ತಾಣ ಅಥವಾ ಸಮ್ಮೇಳನದ ಸಂಘಟನಾ ಸಮಿತಿಯನ್ನು ಸಂಪರ್ಕಿಸಬಹುದು.

Leave A Reply

Your email address will not be published.