Shubhashaya News

ಹುಬ್ಬಳ್ಳಿಯಲ್ಲಿ ಜು. ೨೬ರಂದು ಬಹುಭಾಷಾ ಕವಿಗೋಷ್ಠಿ

ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್:

ಆಳಂದ: ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್, ಕಲಬುರಗಿ ಹಾಗೂ ರಾಜ್ಯ ಮರಾಠಿ ವಿಕಾಸ್ ಸಂಸ್ಥೆ, ಮುಂಬೈ ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ ೨೬ರಂದು ಹುಬ್ಬಳ್ಳಿಯಲ್ಲಿ ಭವ್ಯ ಸಾಹಿತ್ಯಿಕ ಸಮಾರಂಭ, ಹಿರಿಯ ಸಾಹಿತಿಗಳ ಸನ್ಮಾನ ಹಾಗೂ ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ಮರಾಠಿ ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಅಧ್ಯಕ್ಷ ಗುರಯ್ಯ ಸ್ವಾಮಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಹುಬ್ಬಳ್ಳಿಯ ಕ್ಲಬ್ ರಸ್ತೆಯ ಮಹಾರಾಷ್ಟç ಮಂಡಳ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಪ್ರೊ. ಸುಮನ್ ಆಮಟೆ ಅವರ ‘ಐiಜಿe oಟಿ Wheeಟ’ ಮರಾಠಿ ಕೃತಿಯನ್ನು ಲೋಕಾರ್ಪಣೆ ಮಾಡಲಾಗುವುದು.
ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗರಾಜ ಅಂಗಡಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಗುರುಯ್ಯ ಆರ್. ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರವಾಡದ ಹಿರಿಯ ಸಾಹಿತಿ ಪ್ರೊ. ಡಾ. ಸಿ. ಆರ್. ಯರವಿಂತೆಲಿಮಠ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಕಲಬುರಗಿ ಶಾಖೆಯ ಕಾರ್ಯವಾಹ ಪ್ರಭಾಕರ ಸಲಗರೆ, ಖಜಾಂಚಿ ಮಿಲಿಂದ ಉಮಾಳ್ಕರ್ ಹಾಗೂ ಹುಬ್ಬಳ್ಳಿ–ಧಾರವಾಡ ಶಾಖೆಯ ಅಧ್ಯಕ್ಷ ಡಾ. ಪರಮೇಶ್ವರ ಪಾಟೀಲ ಶ್ರಮಿಸುತ್ತಿದ್ದಾರೆ. ಅಲ್ಲದೆ, ಬಹುಭಾಷಾ ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಸಕ್ತ ಕವಿಗಳು ಪ್ರೊ. ಸುಮನ್ ಆಮಟೆ ಅವರನ್ನು ೯೪೮೨೩ ೨೮೨೦೬ ಸಂಖ್ಯೆಗೆ ಸಂಪರ್ಕಿಸಬಹುದೆAದು ಸ್ವಾಮಿ ಅವರು ತಿಳಿಸಿದ್ದಾರೆ.

Leave A Reply

Your email address will not be published.