Shubhashaya News

“ಏಕ್ ಭಾರತ್–ಶ್ರೇಷ್ಠ ಭಾರತ್ ಪರಿಕಲ್ಪನೆಗೆ ಜಿ.ಎಸ್.ಟಿ ಸುಧಾರಣೆಗಳೇ ಬುನಾದಿ: ಸಿಯುಕೆ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ”

“ಸಿಯುಕೆ ರಾಷ್ಟ್ರೀಯ ಸಮ್ಮೇಳನ ಸಮಾರೋಪ; ವಿಕಸಿತ ಭಾರತದÀ–೨೦೪೭ರ ಸಾಕಾರಕ್ಕೆ ಜಿಎಸ್‌ಟಿ ಸುಧಾರಣೆಗಳ ಪಾತ್ರದ ಕುರಿತು ಚರ್ಚೆ ಮತ್ತು ಸಂವಾದ”

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಜಿಎಸ್‌ಟಿ ರಾಷ್ಟಿçÃಯ ಸಮ್ಮೇಳನ ಸಮಾರೋಪದ ಪೋಟೋ ಶೇಷಸನಲ್ಲಿ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಇತರರು ವಿದ್ಯಾರ್ಥಿಗಳೊಂದಿಗೆ ಇದ್ದರು.

ಆಳಂದ: “ಏಕ್ ಭಾರತ್–ಶ್ರೇಷ್ಠ ಭಾರತ್” ಎಂಬ ರಾಷ್ಟ್ರೀಯ ಪರಿಕಲ್ಪನೆಗೆ ಹಾಗೂ ವಿಕಸಿತ ಭಾರತ್–೨೦೪೭ರ ಗುರಿ ಸಾಧನೆಗೆ ಜಿಎಸ್‌ಟಿ ಸುಧಾರಣೆಗಳು ಬಲಿಷ್ಠ ಅಡಿಪಾಯವಾಗಿವೆ ಎಂದು ಹೇಳಿದರು. ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ದೇಶದ ಆರ್ಥಿಕ ಸುಧಾರಣೆಗಳಲ್ಲಿ ಒಂದಾಗಿದ್ದು, ಹಣಕಾಸು ವ್ಯವಸ್ಥೆಯ ಸರಳೀಕರಣ ಜೊತೆಗೆ ಏಕೀಕರಣವಾಗಿದೆ, ಸಹಕಾರಿ ಒಕ್ಕೂಟದ ಬಲವರ್ಧನೆಯಾಗಿ ಹಾಗೂ ದೇಶದ ಸಮಗ್ರ ಸಾಮಾಜಿಕ -ಆರ್ಥಿಕ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿದೆ ಎಂದು ಸಿಯುಕೆ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಅವರು, ಅಭಿಪ್ರಾಯಪಟ್ಟರು.
ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕಾನೂನು ವಿಭಾಗವು, ನವದೆಹಲಿಯ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ (ಐ.ಸಿ.ಎಸ್.ಎಸ್.ಆರ್) ಸಹಯೋಗದಲ್ಲಿ ಸಿಯುಕೆ ಅಡಿಟೋರಿಯಂನಲ್ಲಿ ಆಯೋಜಿಸಿದ್ದ “ಜಿಎಸ್‌ಟಿ ಸುಧಾರಣೆಗಳು ಮತ್ತು ಭಾರತದ ಸಾಮಾಜಿಕ-ಆರ್ಥಿಕ ಪರಿವರ್ತನೆ: ವಿಕಸಿತ ಭಾರತ್–೨೦೪೭ರ ಸಾಧನೆಯ ಮಾರ್ಗ” ಎಂಬ ವಿಷಯದ ಕುರಿತು ನಡೆದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಸಮಾರಫದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜಿಎಸ್‌ಟಿ ಜಾರಿಯಿಂದ ದೇಶದ ಜನತೆಯಲ್ಲಿ ಖರೀದಿ ಮಾಡುವ ಸಾಮರ್ಥ್ಯ ಹೆಚ್ಚಳವಾಗಿದ್ದು, ಕೈಗಾರಿಕಾ ಕ್ಷೇತ್ರಗಳ ಬೆಳವಣಿಗೆಗೆ ಉತ್ತೇಜನ ದೊರೆತಿದೆ. ತೆರಿಗೆ ಪಾವತಿಯ ವ್ಯವಸ್ಥೆಯಲ್ಲಿ ಅತ್ಯಂತ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆ ಹೆಚ್ಚಿರುವುದರೊಂದಿಗೆ ದೇಶದಲ್ಲಿ ಉದ್ಯೋಗಾವಕಾಶಗಳು ಕೂಡ ವೃದ್ಧಿಯಾಗಿದ್ದು, ನಿರುದ್ಯೋಗ ಮತ್ತು ಬಡತನದ ಪ್ರಮಾಣ ಇಳಿಕೆಯಾಗಿರುವುದನ್ನು ತಜ್ಞರು ಉಲ್ಲೇಖಿಸಿರುವ ಅಂಕಿ-ಅAಶಗಳನ್ನು ಈ ಸಂದರ್ಭದಲ್ಲಿ ಅವರು ಸುದೀರ್ಘವಾಗಿ ಅಂಕಿ-ಅAಶದೊAದಿಗೆ ಮಾಹಿತಿ ನೀಡಿದರು.
ದೇಶದ ಆರೋಗ್ಯ ಕ್ಷೇತ್ರದಲ್ಲಿ, ಆಹಾರ ಕ್ಷೇತ್ರದಲ್ಲಿ, ಮೂಲಭೂತ ಸೌಲಭ್ಯಗಳ ಕ್ಷೇತ್ರದಲ್ಲಿ ಮತ್ತು ಶಿಕ್ಷಣ ಕ್ಷೇತ್ರ ಸೇರಿದಂತೆ ಅನೇಕ ಮೂಲಭೂತ ಅಗತ್ಯ ಸೌಕರ್ಯಗಳ ವಲಯಗಳಲ್ಲಿ ತೆರಿಗೆ ಪದ್ದತಿಯ ದರಗಳ ತರ್ಕಬದ್ಧ ಮರುಹೊಂದಿಕೆಯಿAದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಹೆಚ್ಚಿನ ಅನುಕೂಲವಾಗಿದ್ದು, ಅಗತ್ಯ ಸೇವೆಗಳ ಲಭ್ಯತೆಯು ಸುಧಾರಿಸಿದೆ ಎಂದು ತಿಳಿಸಿದರು. ಜಿಎಸ್‌ಟಿ ಸಂಗ್ರಹವು ಈ ಹಿಂದೆ ಆರಂಭಿಕ ೨೦೧೭ ರ ಅವಧಿಯಲ್ಲಿ ₹೭.೪೧ ಲಕ್ಷ ಕೋಟಿಯಿಂದ ಈಗ ಪ್ರಸ್ತುತ ಸರಿಸುಮಾರು ₹೨೨.೨೭ ಲಕ್ಷ ಕೋಟಿಯವರೆಗೆ ಏರಿಕೆಯಾಗಿದ್ದು, ಸುಮಾರು ಶೇಕಡಾ ೧೪ ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಅಂಉಖ) ದಾಖಲಿಸಿರುವುದು ತೆರಿಗೆ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಜಿಎಸ್‌ಟಿಯು ಉತ್ಪಾದನಾ ವೆಚ್ಚವನ್ನು ತಗ್ಗಿಸುವ ಮೂಲಕ ಕೈಗಾರಿಕಾ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತ್ರಗಳ ಬೆಳವಣಿಗೆಗೆ ಉತ್ತೇಜನ ನೀಡಿದ್ದು, ಸರಕು ಮತ್ತು ಸೇವೆಗಳನ್ನು ಗ್ರಾಹಕರಿಗೆ ಹೆಚ್ಚು ಕೈಗೆಟುಕುವಂತೆ ಮಾಡಿದೆ. ಇದರಿಂದ ಉತ್ಪಾದಕರು, ಮಾರುಕಟ್ಟೆಯ ಕ್ಷೇತ್ರ ಮತ್ತು ಗ್ರಾಹಕರ ಹಿತಾಸಕ್ತಿಗಳ ನಡುವೆ ಸಮತೋಲನ ಸಾಧಿಸಿ ದೇಶದ ಆರ್ಥಿಕ ಪ್ರಗತಿಗೆ ಸಾಧ್ಯವಾಗಿದೆ. ಜಾಗತಿಕ ಭೌಗೋಳಿಕ-ರಾಜಕೀಯ ಸವಾಲುಗಳ ನಡುವೆಯೂ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (PಒI) ಹಾಗೂ ಗ್ರಾಹಕರ ವಿಶ್ವಾಸ ಸೂಚ್ಯಂಕ (ಅಅI) ಸೇರಿದಂತೆ ಪ್ರಮುಖ ಆರ್ಥಿಕ ಸೂಚಕಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬAದಿದೆ ಎಂದು ಹೇಳಿದರು.
೨೦೧೭–೧೮ರಲ್ಲಿ ಶೇ.೬.೧ ಇದ್ದ ಭಾರತದ ನೈಜ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ-ಉಡಿoss ಆemesಣiಛಿ Pಡಿoಜuಛಿಣ)À ಬೆಳವಣಿಗೆಯು ೨೦೨೫–೨೬ರಲ್ಲಿ ಶೇ.೭.೭%ಕ್ಕೆ ಏರಿಕೆಯಾಗಿದೆ. ಕೈಗಾರಿಕಾ ಉತ್ಪಾದನೆ ಮತ್ತು ಹೂಡಿಕೆ ಹೆಚ್ಚಳದ ಪರಿಣಾಮವಾಗಿ ನಿರುದ್ಯೋಗ ಪ್ರಮಾಣ ಶೇ.೬ ರಿಂದ ಶೇ.೩ಕ್ಕೆ ಇಳಿಕೆಯಾಗಿದ್ದು, ಬಡತನದ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿದೆ ಎಂದು ಅಂಕಿ-ಅAಶ ಸಮೇತ ಹೇಳಿದರು. ನಮ್ಮ ದೇಶವು ವಿಕಸಿತ ಭಾರತದ ೨೦೪೭ರ ವೇಳೆಗೆ ಸರಿಸುಮಾರು ೩೦–೪೦ ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ರೂಪುಗೊಳ್ಳಲು ದೇಶದಲ್ಲಿ ನಿರಂತರವಾಗಿ ಆರ್ಥಿಕ ಸುಧಾರಣೆಗಳು, ಹಣಕಾಸಿನ ಶಿಸ್ತು ಕಾಪಾಡುವುದು, ಹೊಸ ದೂರದೃಷ್ಟಿಯ ನೀತಿ-ನಿರೂಪಣೆಗಳು ಹಾಗೂ ಜಾಗತಿಕ ಆರ್ಥಿಕ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಅತ್ಯಗತ್ಯ ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಶ್ರಿ ಸುನೀಲ್ ಕುಮಾರ್ ಟಿ.ಕೆ ಅವರು ಮಾತನಾಡಿ ಜಿ.ಎಸ್.ಟಿ. ಸುಧಾರಣೆ ಪದ್ಧತಿಯಿಂದ ದೇಶದಲ್ಲಿ ಬಹಳ ದೊಟ್ಟಮಟ್ಟದಲ್ಲಿ ಜನರ ಜೀವನಮಟ್ಟವು ಸುಧಾರಣೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದಾಯ ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿದೆ. ಸರ್ಕಾರಗಳು ಮತ್ತೇ ಮರುಹೂಡಿಕೆ ಮಾಡಿ ದೇಶದ ಮೂಲಭೂತ ಸೌಕರ್ಯಕ್ಕೆ ಹಾಗೂ ಸಾರ್ವಜನಿಕರ ಅಭಿವೃದ್ಧಿಗೆ ವೃದ್ಧಿಗೆ ಬಳಸಲಾಗುತ್ತಿದೆ ಎಂದು ಹೇಳಿದರು. ಹೀಗಾಗಿ ನಾವುಗಳು ಕಡ್ಡಾಯವಾಗಿ ಸ್ವಯಂಪ್ರೇರಿತರಾಗಿ ಆದಾಯ ತೆರಿಗೆ ಪಾವತಿ ಮಾಡಬೇಕು ಇದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. ಮುಂದುವರೆದು ಸರ್ಕಾರವು ಬಡ ಮತ್ತು ಮಧ್ಯಮ ವರ್ಗದ ಜನತೆ ಅಗತ್ಯ ಕ್ಷೇತ್ರಗಳಲ್ಲಿ ತೆರಿಗೆ ಪಾವತಿಯ ಹೊರೆ ಕಡಿಮೆ ಮಾಡಿದೆ ಎಂದು ಹೇಳಿದರು.
ಕಳೆದೆರೆಡು ದಿನಗಳಿಂದ ಜಿ.ಎಸ್.ಟಿ. ಸುಧಾರಣೆಗಳ ಕುರಿತು ದೇಶದ ವಿವಿಧ ಭಾಗಗಳಿಂದ ಸುಮಾರು ೫೦ ಕ್ಕೂ ಹೆಚ್ಚು ಆಗಮಿಸಿದ್ದ ಪ್ರಾಧ್ಯಾಪಕರಿಂದ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಂದ ವಿವಿಧ ವಿಷಯಗಳ ಮೇಲೆ ಪ್ರಬಂಧ ಮಂಡನೆ ಹಾಗೂ ವಿವಿಧ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಭಾಷಣ, ಚರ್ಚೆ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. ಕುಲಸಲಚಿವರಾದ ಪ್ರೊ.ಆರ್.ಆರ್.ಬಿರಾದಾರ ಸೇರಿದಂತೆ ಗಣ್ಯರು ಈ ಸಂದರ್ಭದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಕಾನೂನು ವಿಭಾಗದ ಡೀನ್ ಪ್ರೊ.ಬಸವರಾಜ.ಎಂ.ಕುಬಕಡ್ಡಿ, ಕಾನೂನು ವಿಭಾಗದ ಮುಖ್ಯಸ್ಥರಾದ ಡಾ.ಅನಂತ ಚಿಂಚುರೆ, ಸಂಚಾಲಕ ಡಾ.ಜಯಂತ ಬೋರುವಾ, ಶರಣಬಸವ ವಿ.ವಿ.ಯ ಎಂಬಿಎ/ಎA.ಕಾA ವಿಭಾಗದ ಪ್ರಾಧ್ಯಾಪಕರಾದ ಡಾ. ರವಿ ಆವಂತಿ, ಸಿಯುಕೆಯ ಕಾನೂನು ನಿಕಾಯದ ಡಾ.ರೇಣುಕಾ ಗುಬ್ಬೆವಾಡ, ಡಾ.ಕೆ.ಎಂ.ಕೃಷ್ಣ ಶೇಖರ ಶರ್ಮಾ, ಡಾ.ವೈಷ್ಣವಿ ನಾರಾಯಣಿ, ಡಾ. ನಿಖಿತಾ ಚೌದರಿ, ಡಾ.ಜುನುದಾಸ, ಕಾನೂನು ಮತ್ತು ವ್ಯವಹಾರ ಅಧ್ಯಯನ ನಿಕಾಯ ಸೇರಿದಂತೆ ಶರಣಬಸವ ವಿ.ವಿ.ಯ ಎಂ.ಬಿ.ಎ ಮತ್ತು ಎಂ.ಕಾA ಅಧ್ಯಾಪಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ.ಶಶಿರೇಖಾ ಮಾಳಗಿ ಅವರು ಸ್ವಾಗತಿಸಿ, ಡಾ.ಜಗದೀಶಚಂದ್ರ ಟಿ.ಜಿ ಅವರು ವಂದನಾರ್ಪಣೆ ಸಲ್ಲಿಸಿದರು.

Leave A Reply

Your email address will not be published.