Shubhashaya News

ಚೆನ್ನಮ್ಮ ದೇವೇಗೌಡರ ನಿಧನ: ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಸಂತಾಪ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ ಎಂದು ಆಳಂದ ಕ್ಷೇತ್ರದ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಅವರು ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, “ಚೆನ್ನಮ್ಮ ದೇವೇಗೌಡ ಅವರು ಸರಳತೆ, ಸೌಜನ್ಯ ಮತ್ತು ಕುಟುಂಬ ಮೌಲ್ಯಗಳಿಗೆ ಹೆಸರಾಗಿದ್ದರು. ರಾಜಕೀಯ ಜೀವನದಲ್ಲಿ ದೇವೇಗೌಡ ಅವರಿಗೆ ಅವರು ನೀಡಿದ ಬೆಂಬಲ, ತ್ಯಾಗ ಮತ್ತು ಪ್ರೋತ್ಸಾಹ ಅಪಾರವಾಗಿದೆ. ಅವರ ಅಗಲಿಕೆ ದೇವೇಗೌಡ ಕುಟುಂಬಕ್ಕೆ ಮಾತ್ರವಲ್ಲ, ರಾಜ್ಯದ ಸಾರ್ವಜನಿಕ ಜೀವನಕ್ಕೂ ತುಂಬಲಾರದ ನಷ್ಟವಾಗಿದೆ” ಎಂದು ಹೇಳಿದ್ದಾರೆ.

ಭಗವಂತನು ಅಗಲಿದ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಅವರ ಕುಟುಂಬದ ಸದಸ್ಯರು ಮತ್ತು ಅಪಾರ ಅಭಿಮಾನಿಗಳಿಗೆ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ಈ ದುಃಖದ ಸಂದರ್ಭದಲ್ಲಿ ದೇವೇಗೌಡ ಕುಟುಂಬದೊಂದಿಗೆ ತಾವು ಹಾಗೂ ಆಳಂದ ಕ್ಷೇತ್ರದ ಜನತೆ ನೈತಿಕವಾಗಿ ಇದ್ದೇವೆ ಎಂದು ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.