Shubhashaya News

ಹಳ್ಳಿಸಲಗರದಲ್ಲಿ ಬುದ್ಧ–ಬಸವ–ಅಂಬೇಡ್ಕರ್ ಜಯಂತ್ಯೋತ್ಸವ

ಮಾನವೀಯ ಮೌಲ್ಯಗಳ ಅಳವಡಿಕೆಗೆ ಮಹನೀಯರ ತತ್ವಗಳು ದಾರಿದೀಪ: ರಾಜಕುಮಾರ ಎಚ್. ಕಪನೂರ

ಆಳಂದ: ಹಳ್ಳಿಸಲಗರದಲ್ಲಿ ಆಯೋಜಿಸಿದ್ದ ಬುದ್ಧ, ಬಸವ,ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಸಮಾರಂ¨sದಲ್ಲಿ ಬಿಜೆಪಿ ಮುಖಂಡ ಆನಂದ ಪಾಟೀಲ ಮಾತನಾಡಿದರು. ಮಹಾನಗರ ಪಾಲಿಕ ಮಾಜಿ ಸದಸ್ಯ ರಾಜಕುಮಾರ ಎಚ್. ಕಪ್ಪನೂರ ಇತರರು ಇದ್ದರು.

ಆಳಂದ: ಸಮಾಜದಲ್ಲಿ ಸಮಾನತೆ, ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು. ಭಗವಾನ್ ಗೌತಮ ಬುದ್ಧ, ಜಗಜ್ಯೋತಿ ಬಸವೇಶ್ವರ ಹಾಗೂ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜಕುಮಾರ ಎಚ್. ಕಪನೂರ ಹೇಳಿದರು.
ತಾಲೂಕಿನ ಹಳ್ಳಿಸಲಗರ ಗ್ರಾಮದಲ್ಲಿ ಆಯೋಜಿಸಿದ್ದ ಭಗವಾನ್ ಗೌತಮ ಬುದ್ಧ, ಜಗಜ್ಯೋತಿ ಬಸವೇಶ್ವರ ಹಾಗೂ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶೋಷಿತರು, ಹಿಂದುಳಿದವರು ಹಾಗೂ ಸಾಮಾನ್ಯ ಜನರ ಬದುಕಿಗೆ ಗೌರವ ಮತ್ತು ಆತ್ಮಸಮ್ಮಾನ ತಂದುಕೊಟ್ಟ ಮಹನೀಯರ ಆದರ್ಶಗಳನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದತೆಯನ್ನು ಬೆಳೆಸುವಲ್ಲಿ ಇವರ ಚಿಂತನೆಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಬಸವಂತರಾವ ಸಿ. ಪಾಟೀಲ ಮಾತನಾಡಿ, ಮಹನೀಯರು ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಹೋರಾಡಿದವರು. ಅವರ ಸಂದೇಶಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿವೆ ಎಂದರು.
ಬಿಜೆಪಿ ಮುಖಂಡ ಆನಂದರಾವ ಪಾಟೀಲ, ಪುರಸಭೆ ಮಾಜಿ ಸದಸ್ಯ ಶಿವಪುತ್ರ ನಡಗೇರಿ, ಮಹೇಶ ಪಾಟೀಲ ಹಾಗೂ ಮಲ್ಲಿನಾಥ ಕೊಗನೂರ ಮಾತನಾಡಿ, ಬುದ್ಧ, ಬಸವೇಶ್ವರ ಮತ್ತು ಡಾ. ಅಂಬೇಡ್ಕರ್ ಅವರ ಜೀವನ ಸಾಧನೆಗಳು ಸಮಾಜ ಪರಿವರ್ತನೆಗೆ ಪ್ರೇರಣೆಯಾಗಿವೆ ಎಂದು ಅಭಿಪ್ರಾಯಪಟ್ಟರು.
ಗೌರವ ಅಧ್ಯಕ್ಷತೆ ವಹಿಸಿದ್ದ ಶರಣಗೌಡ ಎಂ. ಪೊಲೀಸ್ ಪಾಟೀಲ, ರಮೇಶ್ ಬಿರಾದಾರ, ಸಿದ್ಧಾರೂಢ ಸರಸಂಬಿ, ಶ್ರೀಶೈಲ ಸುತಾರ ಮುನ್ನೊಳ್ಳಿ, ಸಂತೋಷ ಹಾದಿಮನಿ, ಬಸವಂತರಾವ ಎಂ. ಮಾಲೀಪಾಟೀಲ, ಬಸವರಾಜ ಕೆರೂರ್ ಹಾಗೂ ಶಿವಾನಂದ ಬೇಡಜೂರ್ಗಿ ಮಹನೀಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು.

ಕಾಶಿನಾಥ ಬಿರಾದಾರ, ಮಲ್ಲಿನಾಥ ಕೊಗನೂರ, ಸುಲ್ತಾನಪ್ಪ ವಾಗ್ದರಗಿ, ಲಕ್ಷ್ಮಣ ಝಳಕಿ, ಪಪ್ಪು ತೋಳೆ, ರಜನೀಶ ಜಂಗಲೇ, ಅಜಯ್ ಸಿ.ಎಂ., ಚಾಂದಸಾಬ ಮುಲ್ಲಾ, ಮಸ್ತಾನ ಮುಲ್ಲಾ, ಗುರುರಾಜ ಮಾಲೀಪಾಟೀಲ, ಗಂಗಾಧರ ಕೊಗನೂರ ಹಾಗೂ ಮಹಾದೇವ ಶೇರಿಕಾರ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿದರು.
ಮುಖ್ಯ ಅತಿಥಿಗಳಾಗಿ ಸೂರ್ಯಕಾಂತ ಸರಸಂಬಿ, ರಾಜಶೇಖರ ಸರಸಂಬಿ, ದಿಲೀಪ ಕ್ಷೀರಸಾಗರ, ಬಸವರಾಜ ಎಂ. ಸರಸಂಬಿ, ಸಂಜಯ ರಾಠೋಡ, ಆನಂದ ನಡಗೇರಿ, ಅಪ್ಪಾರಾವ ಪೂಜಾರಿ, ಅಶೋಕ ವೈರಾಗಿ, ವಿಶ್ವನಾಥ ಪಾಟೀಲ, ಮಡಿವಾಳಯ್ಯ ಸ್ವಾಮಿ, ಲಕ್ಷ್ಮಿಕಾಂತ ಜಂಗಲೇ, ಶಿವಾನಂದ ಸರಸಂಬಿ, ಬಸವರಾಜ ಕಲಕುರಕಿ, ಆದಂ ಜಮಾದಾರ, ರಾಜಕುಮಾರ ನಾಗುಂಡೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ನಡೆದ ಭವ್ಯ ಮೆರವಣಿಗೆಯನ್ನು ಪ್ರಬುದ್ಧ ಆರ್. ಪಾಟೀಲ ಹಾಗೂ ಅಶೋಕ ಎನ್. ಪಾಟೀಲ ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಗ್ರಾಮಸ್ಥರು ಹಾಗೂ ಯುವಕರು ಉತ್ಸಾಹದಿಂದ ಪಾಲ್ಗೊಂಡು ಮಹನೀಯರ ಜಯಘೋಷ ಮೊಳಗಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಸಮಿತಿಯ ವ್ಯವಸ್ಥಾಪಕ ಸಿದ್ರಾಮ ವಾಗ್ಮೋರೆ, ಸೋಮನಾಥ ವಠಾರ, ಗುರುಬಸಪ್ಪ ವಾಗ್ಮೋರೆ, ದತ್ತಾತ್ರೇಯ ವಾಗ್ಮೋರೆ, ಲಕ್ಷ್ಮಣ ಆರೆ, ಸಂಪತಬಾಯಿ ವಾಗ್ಮೋರೆ, ಅನೀಲಕುಮಾರ ಸಿಂಗೆ, ಗೌತಮ ಕುಂಟನೂರ, ನೀಲಕಂಠ ವಠಾರ, ಸಾಯಬಣ್ಣ ಸಿಂಗೆ, ಜಗದೀಶ ವಠಾರ, ಆಕಾಶ ನಡಗೇರಿ, ಅಂಕುಶ ವಾಗ್ಮೋರೆ, ಅಭಿಲಾಷ ವಾಗ್ಮೋರೆ, ಮಲ್ಲು ಆರೆ, ರೋಹಿತ್ ವಠಾರ, ಸಚಿನ್ ವಾಗ್ಮೋರೆ, ಸಾಗರ ವಿ. ಸಿಂಗೆ, ಶರಣಬಸಪ್ಪ ವಾಗ್ಮೋರೆ, ಪ್ರಜ್ವಲ ವಾಗ್ಮೋರೆ, ಶರಣಬಸಪ್ಪ ಎಚ್. ಆರೆ, ಸೋನ್ಯಾ ವಾಗ್ಮೋರೆ, ಕುಪೇಂದ್ರ ಕುಂಟನೂರ, ಸಂತೋಷ ಪಡಸಾವಳಿ, ಚೇತನ ವಠಾರ ಹಾಗೂ ರಘುವೀರ ವಠಾರ ಸೇರಿದಂತೆ ಅನೇಕರು ಸಹಕರಿಸಿದರು.
ದಿಲೀಪ ಕ್ಷೀರಸಾಗರ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಸಿಂಗೆ ಸ್ವಾಗತಿಸಿದರು. ಜಯಾನಂದ ಸಿಂಗೆ ವಂದಿಸಿದರು. ಡಾ. ಬಸವರಾಜ ಸಿ. ಪಾಟೀಲ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದರು.

Leave A Reply

Your email address will not be published.