ಹಾಜರಾತಿ ಕೊರತೆಯಿಂದ `SSLC’ ಪರೀಕ್ಷೆಯಿಂದ ಹೊರಗುಳಿದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪರೀಕ್ಷೆ-2ಕ್ಕೆ ಖಾಸಗಿ ಅಭ್ಯರ್ಥಿಯಾಗಿ ನೋಂದಣಿಗೆ ಅವಕಾಶ
2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು, ಹಾಜರಾತಿ ಕೊರತೆಯಿಂದಾಗಿ ಪರೀಕ್ಷೆಯಿಂದ ಹೊರಗುಳಿದಿದ್ದ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಿಹಿಸುದ್ದಿ ನೀಡಿದೆ. ಇಂತಹ ವಿದ್ಯಾರ್ಥಿಗಳು ಮೇ-2026ರಲ್ಲಿ ನಡೆಯಲಿರುವ ಪರೀಕ್ಷೆ-2ಕ್ಕೆ ಖಾಸಗಿ ಅಭ್ಯರ್ಥಿಗಳಾಗಿ (CCPF) ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.
ಈ ಕುರಿತು ಮಂಡಳಿಯು ಅಧಿಕೃತ ಮಾರ್ಗಸೂಚಿ ಮತ್ತು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಯಾರಿಗೆ ಅವಕಾಶ?: ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು ಶೇ. 75ರಷ್ಟು ಹಾಜರಾತಿ ಹೊಂದಿಲ್ಲದ ಕಾರಣ ಪರೀಕ್ಷೆಯಿಂದ ಹೊರಗುಳಿದವರು, ಪರೀಕ್ಷೆಗೆ ಗೈರುಹಾಜರಾದವರು, ಅನುತ್ತೀರ್ಣರಾದವರು ಅಥವಾ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಇಚ್ಛಿಸುವ (Improvement) ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಬಹುದು.
ವಯೋಮಿತಿ: 2026ರ ಮಾರ್ಚ್ 01ಕ್ಕೆ 15 ವರ್ಷ ಪೂರ್ಣಗೊಂಡಿರುವ ಅಭ್ಯರ್ಥಿಗಳು ಖಾಸಗಿಯಾಗಿ ನೋಂದಾಯಿಸಿಕೊಳ್ಳಲು ಅರ್ಹರು.
ಶುಲ್ಕ ವಿನಾಯಿತಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಹೊಸ ಶಾಲಾ ಅಭ್ಯರ್ಥಿಯಾಗಿ ನೋಂದಾಯಿಸಿಕೊಂಡು ಪರೀಕ್ಷೆ ಪೂರ್ಣಗೊಳಿಸದ (Not Completed) ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅವರು ಕೇವಲ ನೋಂದಣಿ ಶುಲ್ಕ ಪಾವತಿಸಿದರೆ ಸಾಕಾಗುತ್ತದೆ.
ಪರೀಕ್ಷಾ ಶುಲ್ಕದ ವಿವರ (ಪುನರಾವರ್ತಿತ ಅಭ್ಯರ್ಥಿಗಳಿಗೆ):
ಒಂದು ವಿಷಯಕ್ಕೆ: ₹448
ಎರಡು ವಿಷಯಗಳಿಗೆ: ₹559
ಮೂರು ಅಥವಾ ಹೆಚ್ಚಿನ ವಿಷಯಗಳಿಗೆ: ₹752
ಹಾಜರಾತಿ ಕೊರತೆಯಿದ್ದ ಅಭ್ಯರ್ಥಿಗಳಿಗೆ ನೋಂದಣಿ ಶುಲ್ಕ: ₹248
ಪ್ರಮುಖ ದಿನಾಂಕಗಳು:
ನೋಂದಣಿ ಮತ್ತು ಮಾಹಿತಿ ಅಪ್‌ಲೋಡ್ ಮಾಡಲು: 24.04.2026 ರಿಂದ 30.04.2026 ರವರೆಗೆ.
ಬ್ಯಾಂಕ್ ಚಲನ್ ಜನರೇಟ್ ಮಾಡಲು: 02.05.2026.
ಬ್ಯಾಂಕ್‌ಗೆ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 04.05.2026.
ಗಮನಿಸಬೇಕಾದ ಅಂಶ:
ವಿದ್ಯಾರ್ಥಿಗಳು ತಮ್ಮ ಶಾಲಾ ಮುಖ್ಯೋಪಾಧ್ಯಾಯರ ಮೂಲಕ ಮಂಡಳಿಯ ಅಧಿಕೃತ ಜಾಲತಾಣವಾದ kseab.karnataka.gov.in ನಲ್ಲಿ ಲಾಗಿನ್ ಆಗಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ನಿಗದಿತ ದಿನಾಂಕದ ನಂತರ ಯಾವುದೇ ಕಾರಣಕ್ಕೂ ನೋಂದಣಿಗೆ ಅವಕಾಶವಿರುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ಸಹಾಯವಾಣಿ ಸಂಖ್ಯೆಗಳಾದ 080-23310075 ಅಥವಾ 080-23310076 ಅನ್ನು ಸಂಪರ್ಕಿಸಬಹುದು.
Comments are closed.