Shubhashaya News

ಹಿಂದಿ ಅಂಕದ ವಿಷಯದಲ್ಲಿ ಕೋರ್ಟ್ ಆದೇಶದ ವಿಚಾರ : ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

ಹಿಂದಿ ಅಂಕದ ವಿಷಯದಲ್ಲಿ ಕೋರ್ಟ್ ಆದೇಶದ ವಿಚಾರಕ್ಕೆ ಸಂಬಂಧಪಟ್ಟಂತೆ ಶಿಕ್ಷಕರು ಪಿಐಎಲ್ ಹಾಕಿರುವುದಕ್ಕೆ ಕೋರ್ಟ್ ಆದೇಶ ಮಾಡಿದೆ. ಶಿಕ್ಷಕರು ಇದೀಗ ಪಿಐಎಲ್ ವಾಪಸ್ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಮಾಡಿ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದರು.

ಕೋಟ್ ಆದೇಶವನ್ನು ಪಾಲನೆ ಮಾಡುತ್ತೇವೆ. ಮರುಪರಿಶೀಲನೆ ಮಾಡಿ ಅಂತ ಕೋರ್ಟ್ ಎಲ್ಲೂ ಹೇಳಿಲ್ಲ 2025-26ರಲ್ಲಿ ಏನು ಮಾಡಿದ್ರಿ ಅದನ್ನು ಮಾಡಿ ಅಂತ ಕೋರ್ಟ್ ಹೇಳಿದೆ. ಪಿಐಎಲ್ ಹಾಕಿದ ಮಗು ವಿಚಾರದ ಬಗ್ಗೆ ಮಾತ್ರ ಮರುಪರಿಶೀಲನೆ ಮಾಡಿ ಅಂತ ಕೋರ್ಟ್ ಹೇಳಿದೆ. ಈ ವಿಚಾರದ ಬಗ್ಗೆ ಕೋರ್ಟ್ ಮಂಗಳವಾರ ಸಮಯ ನೀಡಿದೆ. ಅಂದು ಕೋರ್ಟ್ ಆದೇಶದ ಮೇಲೆ ಎಜಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದರು.

Leave A Reply

Your email address will not be published.