Shubhashaya News

ಕೇವಲ ಮಸೂದೆಗೆ ವಿರೋಧವಲ್ಲ ಇದು ಕಾಂಗ್ರೆಸ್ ರಕ್ತದಲ್ಲೇ ಇರುವ ಮಹಿಳಾ ವಿರೋಧಿಯ ನೀತಿ : ಆರ್.ಅಶೋಕ್ ವಾಗ್ದಾಳಿ

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸೋಲು ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ ಹಾಗೂ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿದ್ದು ಮಸೂದೆ ಸೋಲು ಎನ್ ಡಿ ಎ ಗೆ ಮುಖಭಂಗ ಅಲ್ಲ. ಇದು ಮಹಿಳೆಯರಿಗೆ ಕಾಂಗ್ರೆಸ್ ಮಾಡಿರುವ ಅವಮಾನ ಎಂದು ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.

ಆರ್.ಅಶೋಕ್ ಕಾಂಗ್ರೆಸ್ ಮಹಿಳೆಯರಿಗೆ ಮಾಡಿರುವ ಅನ್ಯಾಯ ಇದು. ಮಸೂದೆಗೆ ಸೋಲಾಗಿದ್ದು ಕೆಲವು ರಾಜಕೀಯ ಪಕ್ಷಗಳ ಪಿತ್ತೂರಿ ಮತ್ತು ಮಹಿಳಾ ವಿರೋಧಿ ಭಾವನೆಯ ಸ್ಪಷ್ಟ ಸಂಕೇತವಾಗಿದೆ. ಮಹಿಳೆಯರ ಬಗ್ಗೆ ಮಾತನಾಡುವ ಅರ್ಹತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಕಾಂಗ್ರೆಸ್ ಮಹಿಳಾ ಘಟಕವನ್ನು ರದ್ದು ಮಾಡಿಬಿಡಿ. ಇನ್ನೆಷ್ಟು ವರ್ಷ ಮಹಿಳೆಯರನ್ನು ಕೇವಲ ಮತದಾರರನ್ನಾಗಿ ಬಳಸುತ್ತೀರಿ?

ಮಹಿಳೆಯರು ದುರ್ಬಲರು ಎಂದು ಕಾಂಗ್ರೆಸ್ 60 ವರ್ಷ ಆಡಳಿತ ಮಾಡಿತು. ದೇಶದ 70 ಕೋಟಿ ಮಹಿಳೆಯರಿಗೆ ದ್ರೋಹ ಬಗೆಯಲಾಗಿದೆ. ಕಾಂಗ್ರೆಸ್ ನಿಂದ ಹೀನ ಕೆಲಸ ಇದು. ಕೇವಲ ಮಸೂದೆಗೆ ವಿರೋಧವಲ್ಲ ಇದು ಕಾಂಗ್ರೆಸ್ ರಕ್ತದಲ್ಲೇ ಇರುವ ಮಹಿಳಾ ವಿರೋಧಿಯ ನೀತಿ ಪ್ರಧಾನಿ ಮೋದಿ ನಾಯಕತ್ವದಲ್ಲಿ ನಾರಿ ಶಕ್ತಿ ಜಾಗೃತವಾಗಿದೆ ಎಂದು ಆರ್ ಅಶೋಕ್ ಆಕ್ರೋಶ ಅವರ ಹಾಕಿದರು.

Leave A Reply

Your email address will not be published.