ಆಳಂದಕ್ಕೆ ಬಾಲಕ ವಸತಿ ನಿಲಯ ಪರಿವರ್ತನೆ ನಿರ್ಧಾರಕ್ಕೆ ಗ್ರಾಮಸ್ಥರ ಆಕ್ರೋಶ, ಹೋರಾಟದ ಎಚ್ಚರಿಕೆ
ಕಡಗಂಚಿಯಲ್ಲಿ ಬಾಲಕಿಯರ ವಸತಿ ನಿಲಯ ಸ್ಥಳಾಂತರ ವಿರುದ್ಧ ಪ್ರತಿಭಟನೆ
ಆಳಂದ: ಕಡಗಂಚಿಯ ಬಿಸಿಎಂ ಹಾಸ್ಟೆಲ್ ಸ್ಥಳಾಂತರಕ್ಕೆ ವಿರೋಧಿಸಿ ವಿದ್ಯಾರ್ಥಿನಿಯರು ಪ್ರತಿಭಟನಾ ಧರಣಿ ನಡೆಸಿ ಸರ್ಕಾರವನ್ನು ಒತ್ತಾಯಿಸಿದರು.
ಆಳಂದ: ತಾಲೂಕಿನ ಕಡಗಂಚಿ ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ನಡೆಯುತ್ತಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವನ್ನು ಆಳಂದ ಪಟ್ಟಣಕ್ಕೆ ಸ್ಥಳಾಂತರಿಸಿ, ಅದನ್ನು ಮೆಟ್ರಿಕ್ ನಂತರದ ಬಾಲಕ ವಸತಿ ನಿಲಯವನ್ನಾಗಿ ಪರಿವರ್ತಿಸುವ ನಿರ್ಧಾರಕ್ಕೆ ವಿದ್ಯಾರ್ಥಿನಿಯರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಗಡಂಚಿ ಗ್ರಾಮದಲ್ಲಿನ ವಸತಿನಿಲಯದ ಮುಂದೆ ವಿದ್ಯಾರ್ಥಿನಿಯರು ಪ್ರತಿಭಟನಾ ಧರಣಿ ನಡೆಸಿ ವಸತಿ ನಿಲಯ ಸ್ಥಳಾಂತರ ಕೈಗೊಳ್ಳದೆ ಇದ್ದ ಸ್ಥಳದಲ್ಲೇ ಮುಂದುವರೆಸಬೇಕು ಎಂದು ಒತ್ತಾಯಸಿದರು.
ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಃಅಒ ಹಾಸ್ಟೆಲ ಸ್ಥಳಾಂತರ ಖಂಡಿಸಿ ಹಾಸ್ಟೆಲ ವಿದ್ಯಾರ್ಥಿನಿಯರು ಸುಡು ಬಿಸಿಲಿನಲ್ಲಿ ಪ್ರತಿಭಟನೆ ಮಾಡಿದರು
ವಿದ್ಯಾರ್ಥಿನಿ ಐಶ್ವರ್ಯ ಯಾದಗಿರಿ ಮಾತನಾಡಿ ಹಾಸ್ಟೆಲ ಯಾವುದೇ ಕಾರಣಕ್ಕೆ ವರ್ಗಾವಣೆ ಯಾಗಬಾರದು ನಮಗೆ ತುಂಬಾ ಸಮಸ್ಯೆ ಆಗುತ್ತದೆ ಎಂದರು
ಕುಸುಮಾ ಹೊಸಪೇಟೆಯ ವಿದ್ಯಾರ್ಥಿನಿ ಮಾತನಾಡಿ ಹಡಗಂಚಿಯ ಬಿಸಿಎಂ ಹಾಸ್ಟಲ್ ಆಳಂದಪಟ್ಟಣಕ್ಕೆ ವರ್ಗಾವಣೆ ಆಗುತ್ತಿರುವುದು ನೋವಿನ ಸಂಗತಿ ವರ್ಗಾವಣೆಯಾದರೆ ನಮಗೆ ತುಂಬಾ ಸಮಸ್ಯೆ ಉಂಟಾಗುತ್ತದೆ ಎಂದರು ಶಾಸಕರಿಗೆ ಧಿಕ್ಕಾರ ಕೂಗಿದರು. ಶಾಸಕರು ಬರುವವರೆಗೂ ಪ್ರತಿಭಟನೆ ಮಾಡುತ್ತೇವೆ ಎಂದು ಪಟ್ಟು ಹಿಡಿದರು. ಈ ಪ್ರತಿಭಟನೆಗೆ ಗ್ರಾಮಸ್ಥರಾದ ದತ್ತರಾಜ ಬಮ್ಮನಳ್ಳಿ.ನಾಗರಾಜ ಜವಳಿ ಮುಂತಾದವರು ಸಾತ್ ನೀಡಿದರು. ಸಂಜಯ ಕುಮಾರ ಘತ್ತರಗಿ ಮುಂತಾದವರು ಸಾತ್ ನೀಡಿದರು.
ವಿದ್ಯಾರ್ಥಿನಿಯರ ಬೇಡಿಕೆ ನಾವು ರಾಯಚೂರ , ವಿಜಯಪುರಕೊಪ್ಪಳ ಹಾವೇರಿ ಯಾದಗಿರಿ, ಹೊಸಪೇಟೆ ಆಲಮೇಲ ಆಳಂದ ತಾಲೂಕಿನ ಯಳಸಂಗಿ, ಮಾಡಿಯಾಳ ಧುತ್ತರಗಾವ ಮುಂತಾದ ಊರಿನ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ ಕೇಂದ್ರಿಯ ವಿವಿ. ಸಿದ್ದೇಶ್ವರ ಕಾಲೇಜು ವಿ .ವಿ.ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಸಾಯಿಪ್ರತಾಪ ಡಿಗ್ರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡತ್ತಿದ್ದೆವೆ ಹಾಸ್ಟೆಲ ಆಳಂದಕ್ಕೆ ವರ್ಗಾವಣೆ ಮಾಡಿದರೆ ನಮಗೆ ತಮಗೆ ತುಂಬಾ ಸಮಸ್ಯೆ ಆಗುತ್ತದೆ ಎಂದು ಅಳಲು ತೋಡಿಕೊಂಡರು
ಕ್ಷೇತ್ರದ ಶಾಸಕ ಹಾಗೂ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಅವರು 2026ರ ಜನವರಿ 19ರಂದು ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ-2 (ಪ್ರ) ಎಂ.ಬಿ. ಲಾವಣ್ಯ ಅವರಿಗೆ ಪತ್ರ ಬರೆದು, ಕಡಗಂಚಿಯಲ್ಲಿನ ಬಾಲಕಿಯರ ವಸತಿ ನಿಲಯವನ್ನು ಆಳಂದ ಪಟ್ಟಣಕ್ಕೆ ಸ್ಥಳಾಂತರಿಸಿ, ಅದನ್ನು ಬಾಲಕರ ವಸತಿ ನಿಲಯವನ್ನಾಗಿ ಪರಿವರ್ತಿಸುವಂತೆ ಕೋರಿದ್ದರು. ಈ ಮನವಿಗೆ ಸ್ಪಂದಿಸಿದ ಅಧೀನ ಕಾರ್ಯದರ್ಶಿಗಳು ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸ್ಥಳಾಂತರ ಪ್ರಕ್ರಿಯೆ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಈ ನಿರ್ಧಾರ ಹೊರಬಿದ್ದ ತಕ್ಷಣ ಕಡಗಂಚಿ ಗ್ರಾಮದಲ್ಲಿ ವಿದ್ಯಾರ್ಥಿನಿಯರು, ಪಾಲಕರು ಹಾಗೂ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಸತಿ ನಿಲಯ ಸ್ಥಳಾಂತರದಿಂದ ಗ್ರಾಮೀಣ ಭಾಗದ ಬಡ ಹಾಗೂ ಹಿಂದುಳಿದ ವರ್ಗಗಳ ಬಾಲಕಿಯರಿಗೆ ಶಿಕ್ಷಣ ಪಡೆಯಲು ತೊಂದರೆ ಉಂಟಾಗುತ್ತದೆ. ದೂರದ ಊರಿಗೆ ಹೋಗುವ ಪರಿಸ್ಥಿತಿ ಎದುರಾಗುವುದರಿಂದ ಅನೇಕ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ನಿಲ್ಲಿಸುವ ಸ್ಥಿತಿಯೂ ಉಂಟಾಗಬಹುದು ಎಂದು ಪ್ರತಿಭಟನಾಕಾರರು ಹೇಳಿದರು.
ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು ಮತ್ತು ಮಹಿಳೆಯರು, “ಯಾವುದೇ ಕಾರಣಕ್ಕೂ ಕಡಗಂಚಿಯಲ್ಲಿನ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವನ್ನು ಸ್ಥಳಾಂತರಿಸಬಾರದು. ಇದರಿಂದ ನಮ್ಮ ಶಿಕ್ಷಣಕ್ಕೆ ದೊಡ್ಡ ಹೊಡೆತ ಬೀಳಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ತಮ್ಮ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದು, “ವಸತಿ ನಿಲಯವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಸಿದರು.
Comments are closed.