Shubhashaya News

ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು : ಗುಂಡು ಹಾರಿಸಿ ರಿಯಲ್‌ ಎಸ್ಟೇಟ್‌ ಉದ್ಯಮಿಯ ಭೀಕರ ಹತ್ಯೆ!

ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದ್ದು, ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆಗೈದ ಘಟನೆ ನಗರದ ಹೊರವಲಯ ಅಲಿಯಾಬಾದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನಡೆದಿದೆ.ರಾಜು ಕರೆ (48) ಕೊಲೆಯಾದ ದುರ್ದೈವಿ.

ಸಂಜೆ 4:30ರ ಸುಮಾರು ಘಟನೆ ನಡೆದಿದೆ. ರಸ್ತೆಯನ್ನು ಗಮನಿಸಿದರೆ ಎರಡು ವಾಹನಗಳು ದಾಟುವುದು ಕಷ್ಟ. ರಾಜು ತಮ್ಮ ಥಾರ್ ವಾಹನದಲ್ಲಿ ಬರುತ್ತಿರುವುದನ್ನು ಗಮನಿಸಿಯೇ ದುಷ್ಕರ್ಮಿಗಳು ಟಿಪ್ಪರ್​ ಮೂಲಕ ಬಂದು ಡಿಕ್ಕಿ ಹೊಡೆದು ಮೊದಲು ಅಪಘಾತ ಮಾಡಿದ್ದಾರೆ. ಬಳಿಕ ಜೀಪ್ ಡೋರ್ ಓಪನ್ ಆಗದ್ದಕ್ಕೆ ಜೀಪಿನ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ಫೈರಿಂಗ್​ ಕೂಡ ಮಾಡಿದ್ದಾರೆ.

ಸೋಕೋ(SOCO) ಹಾಗೂ ಎಲ್ಲ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಮಾಡಲಾಗುತ್ತದೆ. ಮೇಲ್ನೋಟಕ್ಕೆ ಆಸ್ತಿ ವಿಚಾರಕ್ಕೆ ಹತ್ಯೆ ನಡೆದಿರುವ ಶಂಕೆ ಇದೆ. ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತದೆ. ಕೊಲೆಗೀಡಾದ ವ್ಯಕ್ತಿ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿದ್ದರೆಂಬ ಮಾಹಿತಿ ಇದೆ” ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

Leave A Reply

Your email address will not be published.