Shubhashaya News

ಸಿಯುಕೆಯಲ್ಲಿ ದೃಶ್ಯಕಲಾ ಪ್ರದರ್ಶನ ಉದ್ಘಾಟನೆ

ಚಿತ್ರಕಲೆ ಜಾಗತಿಕ ಭಾμÉ: ಕುಲಸಚಿವ ಪ್ರೊ. ಬಿರಾದಾರ

ಆಳಂದ: “ಚಿತ್ರಕಲೆ ಭಾವನೆಗಳು ಮತ್ತು ಅನುಭವಗಳ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮವಾಗಿದ್ದು, ಅದು ಜಾಗತಿಕ ಭಾμÉಯಾಗಿದೆ” ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ ಹೇಳಿದರು.
ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯ ಸಂಗೀತ ಮತ್ತು ಲಲಿತಕಲೆಗಳ ವಿಭಾಗದಲ್ಲಿ ಏರ್ಪಡಿಸಲಾದ ದೃಶ್ಯಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಾಕೃತಿಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ಯಾವುದೇ ಕಲೆ ಮನುಷ್ಯನಿಗೆ ಆನಂದ ಮತ್ತು ಸಂಸ್ಕಾರ ನೀಡುವುದಲ್ಲದೆ, ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯವನ್ನೂ ವೃದ್ಧಿಸುತ್ತದೆ. ಕಲೆ ಜನರನ್ನು ಒಗ್ಗೂಡಿಸುವ ಶಕ್ತಿ ಹೊಂದಿದ್ದು, ಪ್ರತಿಯೊಬ್ಬರೂ ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.

ವಿದ್ಯಾರ್ಥಿಗಳು ರಚಿಸಿದ ಕಲಾಕೃತಿಗಳಲ್ಲಿ ಸಾಮಾಜಿಕ ಜಾಗೃತಿ, ಪರಿಸರ ಕಾಳಜಿ ಮುಂತಾದ ಅಂಶಗಳು ಸ್ಪಷ್ಟವಾಗಿ ಕಾಣುತ್ತಿದ್ದು, ಪ್ರಕೃತಿ ಹಾಗೂ ಪ್ರಾಣಿ-ಪಕ್ಷಿಗಳ ಬಗ್ಗೆ ಪ್ರೀತಿ ಮೂಡಿಸುವ ಸಂದೇಶ ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ದೇಶ, ಭಾμÉ ಮತ್ತು ಸಂಸ್ಕøತಿಗಳ ಅರಿವು ಮೂಡಿಸುವ ಕಲಾಕೃತಿಗಳನ್ನು ಸಹ ಆಸ್ವಾದಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗ್ರಂಥಾಲಯದ ಮುಖ್ಯಸ್ಥ ಡಾ. ಪರಶುರಾಮ ಕಟ್ಟಿಮನಿ, “ವಿದ್ಯಾರ್ಥಿಗಳ ಕಲಾಕೃತಿಗಳಲ್ಲಿ ಸೃಜನಶೀಲತೆ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಭವಿಷ್ಯದಲ್ಲಿ ಅವರು ದೇಶದ ಸಾಂಸ್ಕೃತಿಕ ಆಸ್ತಿಯಾಗುವ ಎಲ್ಲಾ ಲಕ್ಷಣಗಳಿವೆ” ಎಂದು ಹೇಳಿದರು.
ವಿಭಾಗದ ಮುಖ್ಯಸ್ಥ ಹಾಗೂ ಮಾನವಿಕ ಮತ್ತು ಭಾμÁ ನಿಕಾಯದ ಡೀನ್ ಪೆÇ್ರ. ವಿಕ್ರಮ ವಿಸಾಜಿ ಮಾತನಾಡಿ, “ಪ್ರತಿಯೊಬ್ಬರಲ್ಲೂ ಅಡಗಿರುವ ಸಾಮಥ್ರ್ಯ ಬಣ್ಣ, ನಾದ, ಶಬ್ದಗಳ ಮೂಲಕ ಕಲಾಕೃತಿಗಳಾಗಿ ಹೊರಹೊಮ್ಮಿ, ಕಲಾವಿದರಿಗೂ ನೋಡುಗರಿಗೂ ಸಂಸ್ಕಾರ ನೀಡುತ್ತದೆ” ಎಂದರು. ದೇಶದ ವಿವಿಧ ಭಾಗಗಳಿಂದ ಬಂದಿರುವ ವಿದ್ಯಾರ್ಥಿಗಳು ಅತ್ಯಂತ ಪ್ರತಿಭಾಶಾಲಿಗಳಾಗಿದ್ದು, ಇತ್ತೀಚಿನ ಕಲಾ ಪ್ರದರ್ಶನಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅನುಭವಗಳು ಅವರ ಕಲಾತ್ಮಕ ಬೆಳವಣಿಗೆಗೆ ನೆರವಾಗಿವೆ ಎಂದು ತಿಳಿಸಿದರು.
ಪ್ರದರ್ಶನದ ಸಂಯೋಜಕರಾದ ಡಾ. ಶಿವಾನಂದ ಬಂಟನೂರ ಮಾತನಾಡಿ, ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ತರಬೇತಿ ನೀಡಲಾಗುತ್ತಿದ್ದು, ಏಳು ಮಂದಿ ವರ್ಣಚಿತ್ರಕಲೆಯಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದು, ನಾಲ್ವರು ಪಿಎಚ್‍ಡಿ ಅಧ್ಯಯನ ನಡೆಸುತ್ತಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿವಾನಿ ರಾವತ್ ಮತ್ತು ಶ್ವೇತಾ ದೂದಿ ಸ್ವಾಗತ ಗೀತೆ ಹಾಡಿದರು. ವಿನಯಕುಮಾರ್ ಆರ್. ಕಾರ್ಯಕ್ರಮ ನಿರೂಪಿಸಿ, ಸಂಶೋಧನಾ ವಿದ್ಯಾರ್ಥಿ ಪ್ರಶಾಂತ ಕುವರ್ ವಂದಿಸಿದರು.
ಕಲಾ ಪ್ರದರ್ಶನದಲ್ಲಿ ಸಂಶೋಧನಾ ವಿದ್ವಾಂಸರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ವರ್ಣಚಿತ್ರ ಮತ್ತು ಶಿಲ್ಪಕಲಾ ಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು, ಪ್ರದರ್ಶನವು ಏಪ್ರಿಲ್ 2ರ ಸಂಜೆ 5.30ರವರೆಗೆ ನಡೆಯಲಿದೆ.

Comments are closed.

Don`t copy text!