ಗುಣಾತ್ಮಕ ಶಿಕ್ಷಣದ ಹಿತದೃಷ್ಟಿಯಿಂದ ಅ&ಖ ನಿಯಮಗಳಿಗೆ ತಿದ್ದುಪಡಿ ತಂದು,PST, HSTಮತ್ತು (GPT) ಶಿಕ್ಷಕರಿಗೆ ವೃತ್ತಿ ಬಡ್ತಿಗಾಗಿ ‘ಸೇವಾ ನಿರತ CET’ (In-service CET ನಡೆಸಿ- ಸುಭಾಷ್ ಗುತ್ತೇದಾರ ಮನವಿ ಮಾಡಿದ್ದಾರೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ, ಪ್ರೌಢಶಾಲಾ ಶಿಕ್ಷಕರಿಗೆ ಪದವಿಪೂರ್ವ (PU) ಉಪನ್ಯಾಸಕರಾಗಿ ಬಡ್ತಿ ಹೊಂದಲು ಸಿಇಟಿ (CET) ಪರೀಕ್ಷೆಯನ್ನು ಪರಿಚಯಿಸುತ್ತಿರುವ ಸರ್ಕಾರದ ನಿರ್ಧಾರವು ಅತ್ಯಂತ ಸ್ವಾಗತಾರ್ಹ ಹೆಜ್ಜೆಯಾಗಿದೆ. ಆದರೆ, ಪ್ರಸ್ತುತ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ (KPS) ನುರಿತ, ವಿಷಯ ಜ್ಞಾನವುಳ್ಳ ಮತ್ತು ನಿರಂತರವಾಗಿ ಅಪ್‍ಡೇಟ್ ಆಗಿರುವ ಶಿಕ್ಷಕರ ಅತೀವ ಅವಶ್ಯಕತೆಯಿದೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದು ವಿನಂತಿಸಿಕೊಂಡಿರುವ ಅವರು, ಈ ಬಡ್ತಿ ಪ್ರಕ್ರಿಯೆಯಲ್ಲಿ ಕೇವಲ ಪ್ರೌಢಶಾಲಾ ಶಿಕ್ಷಕರನ್ನು ಮಾತ್ರ ಪರಿಗಣಿಸಿದರೆ, ಕೆಳ ಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಉನ್ನತ ವ್ಯಾಸಂಗ (ಸ್ನಾತಕೋತ್ತರ ಪದವಿ) ಮಾಡಿದ ಅರ್ಹ ಶಿಕ್ಷಕರಿಗೆ ಅವಕಾಶ ವಂಚಿಸಿದಂತಾಗುತ್ತದೆ. ಆದ್ದರಿಂದ, C&R(ವೃಂದ ಮತ್ತು ನೇಮಕಾತಿ) ನಿಯಮಗಳಿಗೆ ಸೂಕ್ತ ತಿದ್ದುಪಡಿ ತಂದು, ಎಲ್ಲಾ ಹಂತದ ಅರ್ಹ ಶಿಕ್ಷಕರಿಗೂ ಬಡ್ತಿಯಲ್ಲಿ ಸಮಾನ ಅವಕಾಶ ಕಲ್ಪಿಸಲು ಈ ಕೆಳಕಂಡ ಬದಲಾವಣೆಗಳನ್ನು ಜಾರಿಗೆ ತರಬೇಕೆಂದು ಮಾಜಿ ಶಾಸಕ ಸುಭಾಷ ಆರ್ ಗುತ್ತೇದಾರ ಆಗ್ರಹಿಸಿದ್ದಾರೆ.
PU ಉಪನ್ಯಾಸಕರ ಬಡ್ತಿಗಾಗಿ ಅವಕಾಶ: ಕೇವಲ ಪ್ರೌಢಶಾಲಾ ಶಿಕ್ಷಕರಿಗೆ ಮಾತ್ರ ಸೀಮಿತಗೊಳಿಸದೆ, ನಿಗದಿತ ಶೈಕ್ಷಣಿಕ ಅರ್ಹತೆ ಹೊಂದಿರುವ ಪ್ರಾಥಮಿಕ ಶಾಲಾ (PST), ಪದವೀಧರ ಪ್ರಾಥಮಿಕ (GPT) ಮತ್ತು ಪ್ರೌಢಶಾಲಾ (HST) ಶಿಕ್ಷಕರಿಗೂ ‘ಸೇವಾ ನಿರತ CET” ಬರೆಯಲು ಮುಕ್ತ ಅವಕಾಶ ಕಲ್ಪಿಸಬೇಕು. ಪ್ರೌಢಶಾಲಾ (High School) ಶಿಕ್ಷಕರ ಬಡ್ತಿಗಾಗಿ: ಅರ್ಹತೆ ಹೊಂದಿರುವ (PST) ಮತ್ತು (GPT) ಶಿಕ್ಷಕರಿಗೆ ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿ ಹೊಂದಲು ‘ಸೇವಾ ನಿರತ CET’ ‘ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಪದವೀಧರ ಪ್ರಾಥಮಿಕ(GPT) ಶಿಕ್ಷಕರ ಬಡ್ತಿಗಾಗಿ: ಅರ್ಹತೆ ಹೊಂದಿರುವ ಪ್ರಾಥಮಿಕ ಶಾಲಾ(PST)ಶಿಕ್ಷಕರಿಗೆ (GPT) ಶಿಕ್ಷಕರಾಗಲು ‘ಸೇವಾ ನಿರತ CET’ ಪರೀಕ್ಷೆ ನಡೆಸಿ ಬಡ್ತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಮೇಲಿನ ಕ್ರಮಗಳನ್ನು ಕೈಗೊಳ್ಳುವುದರಿಂದ, ಸಂಪೂರ್ಣ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟ ಹೆಚ್ಚಾಗುತ್ತದೆ. (KPS) ನಂತಹ ಶಾಲೆಗಳಿಗೆ ಅತ್ಯುತ್ತಮ ಶಿಕ್ಷಕರ ಲಭ್ಯತೆಯೂ ಸುಲಭವಾಗುತ್ತದೆ. ಆದ್ದರಿಂದ ದಯಮಾಡಿ ಈ ವಿಷಯವನ್ನು ಶಿಕ್ಷಣ ವ್ಯವಸ್ಥೆಯ ಭವಿಷ್ಯದ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಿ, ಸೂಕ್ತ ಆದೇಶ ಹೊರಡಿಸಬೇಕಾಗಿ ಮನವಿ ಮಾಡಿದ್ದಾರೆ.
Comments are closed.