ಹವಾಮಾನ ಬದಲಾವಣೆ ವಿಕಸಿತ ಭಾರತದ ಆರ್ಥಿಕ ಬೆಳವಣಿಗೆಗೆ ಗಂಭೀರ ಸವಾಲು 2070ರ ವೇಳೆಗೆ ಜಿಡಿಪಿಗೆ ಶೇ.24.7ರಷ್ಟು ನಷ್ಟದ ಆತಂಕ: ಪೆÇ್ರ. ಆರ್.ಆರ್. ಬಿರಾದಾರ ಎಚ್ಚರಿಕೆ
ಆಳಂದ: ಸಿಯುಕೆಯಲ್ಲಿ ಹವಾಮಾನ ಬದಲಾವಣೆಯ ಆರ್ಥಿಕ ಪರಿಣಾಮ: ವಿಕಸಿತ ಭಾರತಕ್ಕೆ ಸಂಭವನೀಯ ಅಪಾಯ” ವಿಷಯದ ಮೇಲೆ ಉಪನ್ಯಾಸ ಮಂಡಿಸಿದ ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ ಅವರನ್ನು ಗೌರವಿಸಲಾಯಿತು.
ಆಳಂದ: ಭಾರತ 2014ರಲ್ಲಿ ವಿಶ್ವದ 10ನೇ ಅತಿ ದೊಡ್ಡ ಆರ್ಥಿಕತೆಯಾಗಿದ್ದು, ಇಂದು 4.2 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯೊಂದಿಗೆ ಜಗತ್ತಿನ 4ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ತನ್ನ ಸ್ಥಾನವನ್ನು ದೃಢಪಡಿಸಿಕೊಂಡಿದೆ. ಮುಂದಿನ 2030ರೊಳಗೆ ಜರ್ಮನಿಯನ್ನು ಮೀರಿಸಿ 7.3 ಟ್ರಿಲಿಯನ್ ಡಾಲರ್ ಆರ್ಥಿಕತೆಯೊಂದಿಗೆ 3ನೇ ಅತಿ ದೊಡ್ಡ ಆರ್ಥಿಕತೆಯಾಗುವ ಭರವಸೆಯಿದೆ. ಆದರೆ ಹವಾಮಾನ ಬದಲಾವಣೆ ಈ ವಿಕಸಿತ ಭಾರತದ ಗುರಿಗೆ ದೊಡ್ಡ ಸವಾಲಾಗಿ ಎದುರಾಗುತ್ತಿದೆ ಎಂದು ಸಿಯುಕೆ ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಕಡಗಂಚಿಯ ಸಿಯುಕೆ ಭೂ ವಿಜ್ಞಾನ ಶಾಲೆಯ ವತಿಯಿಂದ ಆಯೋಜಿಸಲಾದ ಎರಡು ದಿನಗಳ ಜಿಯೋಸ್ಫಿಯರ್ ಫೆಸ್ಟ್ ಕಾರ್ಯಕ್ರಮದ ಅಂಗವಾಗಿ “ಹವಾಮಾನ ಬದಲಾವಣೆಯ ಆರ್ಥಿಕ ಪರಿಣಾಮ: ವಿಕಸಿತ ಭಾರತಕ್ಕೆ ಸಂಭವನೀಯ ಅಪಾಯ” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ವಿಕಸಿತ ಭಾರತವೆಂದರೆ ಕೇವಲ ರಾಷ್ಟ್ರೀಯ ಆದಾಯದ ಹೆಚ್ಚಳವಲ್ಲ; ಮಾನವ ಅಭಿವೃದ್ಧಿ, ಸುಸ್ಥಿರ ಪರಿಸರ ಮತ್ತು ಜೀವವೈವಿಧ್ಯ ಸಂರಕ್ಷಣೆ, ಎಲ್ಲರ ಒಳಗೊಳ್ಳುವಿಕೆ, ಸಂಶೋಧನೆ ಮತ್ತು ನವೀನತೆ, ರಫ್ತು ವೃದ್ಧಿ, ದೇಶದ ಶಾಂತಿ ಹಾಗೂ ಜನರ ಸಂತೋಷವನ್ನು ಒಳಗೊಂಡ ಸಮಗ್ರ ಅಭಿವೃದ್ಧಿಯಾಗಿದೆ ಎಂದು ವಿವರಿಸಿದರು. ಈ ಎಲ್ಲಾ ಕ್ಷೇತ್ರಗಳಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದರೂ, ಹವಾಮಾನ ಬದಲಾವಣೆ ಈ ಸಾಧನೆಯನ್ನು ಕುಂಠಿತಗೊಳಿಸುವ ಭಾರೀ ಸವಾಲಾಗಿದೆ ಎಂದು ಅವರು ಹೇಳಿದರು.
ಹಸಿರುಮನೆ ಅನಿಲಗಳ ಹೆಚ್ಚಳದಿಂದ ಉಂಟಾಗುತ್ತಿರುವ ಜಾಗತಿಕ ತಾಪಮಾನ ಏರಿಕೆ, ಅಸ್ಥಿರ ಹಾಗೂ ಅನಿರೀಕ್ಷಿತ ಮಳೆ, ಗುಡುಗು ಮಳೆ, ಚಂಡಮಾರುತಗಳು, ಹರಿಕೇನ್‍ಗಳು, ಭೂಕಂಪಗಳು ಮತ್ತು ಬಲವಾದ ಗಾಳಿಗಳು ದೇಶದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಗೆ ಅಪಾರ ನಷ್ಟವನ್ನುಂಟುಮಾಡುತ್ತಿವೆ. 18ನೇ ಶತಮಾನದಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಕೈಗಾರಿಕಾ ಕ್ರಾಂತಿ ಆರಂಭವಾದ ನಂತರ ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದ್ದು, ಇದರ ಪರಿಣಾಮವಾಗಿ ಅಕ್ಕಿ, ಗೋಧಿ, ತೊಗರಿ, ಕಬ್ಬು ಸೇರಿದಂತೆ ಪ್ರಮುಖ ಬೆಳೆಗಳ ಉತ್ಪಾದನೆ ಕುಸಿತಗೊಂಡಿದೆ. ಇದರಿಂದ ರೈತರ ಆದಾಯದ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ ಎಂದು ಅವರು ವಿವರಿಸಿದರು.
2022ರಲ್ಲಿ ಹವಾಮಾನ ವೈಪರಿತ್ಯದಿಂದ ಭಾರತದ ಜಿಡಿಪಿಗೆ ಶೇ.8ರಷ್ಟು ನಷ್ಟ ಸಂಭವಿಸಿದೆ ಎಂಬ ಅಂದಾಜುಗಳಿವೆ. ಈ ದುಷ್ಪರಿಣಾಮಗಳನ್ನು ತಗ್ಗಿಸಲು ಸೂಕ್ತ ಉಪಶಮನ ಕ್ರಮಗಳನ್ನು ಕೈಗೊಳ್ಳದಿದ್ದರೆ 2070ರ ವೇಳೆಗೆ ಜಿಡಿಪಿಯ ಶೇ.24.7ರಷ್ಟು ನಷ್ಟವಾಗುವ ಭೀತಿ ಇದೆ ಎಂದು ಪೆÇ್ರ. ಬಿರಾದಾರ ಎಚ್ಚರಿಸಿದರು. ದೇಶದ ಶೇ.91ರಷ್ಟು ಮಕ್ಕಳು ಕಳಪೆ ವಾಯು ಗುಣಮಟ್ಟದಿಂದ ಬಳಲುತ್ತಿದ್ದಾರೆ, ಶೇ.71ರಷ್ಟು ಜನರು ತೀವ್ರ ಉಷ್ಣ ಅಲೆಗಳನ್ನು ಅನುಭವಿಸಿದ್ದಾರೆ ಮತ್ತು ಶೇ.52ರಷ್ಟು ಜನರು ನೀರಿನ ಕೊರತೆ ಅಥವಾ ಬರಗಾಲದ ಸಮಸ್ಯೆ ಎದುರಿಸಿದ್ದಾರೆ ಎಂಬ ಅಂಕಿ ಅಂಶಗಳನ್ನು ಅವರು ಮುಂದಿಟ್ಟರು.
ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಕಡಿಮೆಗೊಳಿಸಲು ಪೆಟ್ರೋಲ್, ಡೀಸೆಲ್, ಕಲ್ಲಿದ್ದಲು ಮುಂತಾದ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡಿ ಸೌರ, ಗಾಳಿ, ಜೈವಿಕ ಇಂಧನ, ಜಲವಿದ್ಯುತ್ ಮತ್ತು ಭೂತಾಪ ಶಕ್ತಿಯಂತಹ ನವೀಕರಿಸಬಹುದಾದ ಇಂಧನಗಳ ಬಳಕೆಯನ್ನು ಹೆಚ್ಚಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಅದರ ಮರುಬಳಕೆ ಹಾಗೂ ಮರುಸಂಸ್ಕರಣೆಯನ್ನು ಕಡ್ಡಾಯಗೊಳಿಸುವ ನೀತಿಗಳನ್ನು ಜಾರಿಗೆ ತರಬೇಕು ಎಂದರು. ಹವಾಮಾನ ಸಹಿಷ್ಣು ಕೃಷಿ, ನೀರಿನ ಸಂರಕ್ಷಣೆ ಮತ್ತು ಸಮರ್ಪಕ ನಿರ್ವಹಣೆ, ಪರಿಸರ ವ್ಯವಸ್ಥೆಗಳ ಪುನರುಜ್ಜೀವನ, ಹಸಿರು ಮೂಲಸೌಕರ್ಯ, ಹಸಿರು ಬ್ಯಾಂಕಿಂಗ್, ಕಾರ್ಬನ್ ಶೋಷಕ ವಲಯಗಳು ಮತ್ತು ಹಸಿರು ತಂತ್ರಜ್ಞಾನಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಬಿರಾದಾರ ಒತ್ತಿಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭೂ ವಿಜ್ಞಾನ ಶಾಲೆಯ ಡೀನ್ ಪೆÇ್ರ. ಪ್ರಶಾಂತ್ ಎಂ ಮಾತನಾಡಿ, ಹವಾಮಾನ ಬದಲಾವಣೆ ಎಲ್ಲ ವರ್ಗಗಳ ಮೇಲೂ ಹಾಗೂ ಎಲ್ಲಾ ಪ್ರದೇಶಗಳ ಮೇಲೂ ಗಂಭೀರ ಪರಿಣಾಮ ಬೀರುತ್ತಿದ್ದು, ಆದಾಯ, ಆಸ್ತಿ, ಪ್ರಾಣಿಗಳು ಮತ್ತು ಮಾನವ ಜೀವಗಳಿಗೆ ಮರಳಿಸಲಾಗದ ನಷ್ಟ ಉಂಟುಮಾಡುತ್ತಿದೆ ಎಂದು ಹೇಳಿದರು. ಈ ಸಮಸ್ಯೆಯನ್ನು ಎದುರಿಸಲು ಬಹು ಆಯಾಮದ ದೃಷ್ಟಿಕೋನ ರೂಪಿಸಿ, ಅದನ್ನು ಪರಿಣಾಮಕಾರಿಯಾಗಿ ಅನುμÁ್ಠನಗೊಳಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪೆÇ್ರ. ಮೊಹಮ್ಮದ್ ಇಸ್ಲಾಂ, ಪೆÇ್ರ. ಲಿಂಗದೇವರು, ಡಾ. ಅರ್ಚನಾ ಕಜೂರ್, ಡಾ. ಬಾಬು ನಲ್ಲಸ್ವಾಮಿ, ಡಾ. ಮಹಾಲಿಂಗ, ಡಾ. ಅಶೋಕ್ ಕುಮಾರ್, ಡಾ. ಬಿ.ಸಿ. ವಿಶ್ವನಾಥ್, ಡಾ. ರೋಶ್ನಿ ಪಾಟೇಡ್, ಡಾ. ಅಜೀಮ್ ಪಾμÁ, ಡಾ. ನೋಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Comments are closed.